• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2021 ರ ಕೋಟ್ಯಾಧಿಪತಿಗಳ ಪಟ್ಟಿ: 10 ಯುವ, ಸ್ವಯಂ ಉದ್ಯಮಿಗಳ ಬಗ್ಗೆ ತಿಳಿಯಿರಿ

|
Google Oneindia Kannada News

ನವದೆಹಲಿ, ಅಕ್ಟೋಬರ್‌ 13: ಇತ್ತೀಚೆಗೆ 2021 ತನ್ನ ಶ್ರೀಮಂತರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಇಂಡಿಯಾ ಇನ್ಫೋಲಿನ್ ಲಿಮಿಟೆಡ್ (ಐಐಎಫ್‌ಎಲ್‌) ಈಗ ಬುಧವಾರ ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾದ 40 ವರ್ಷ ಹಾಗೂ ಅದಕ್ಕಿಂತ ಸಣ್ಣ ವಯಸ್ಸಿನ ಸ್ವಯಂ ಉದ್ಯಮಿ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ಸುಮಾರು 40 ವರ್ಷ ಹಾಗೂ ಅದಕ್ಕಿಂತ ಕೆಳ ವಯಸ್ಸಿನ ಸುಮಾರು ಸಾವಿರ ಕೋಟಿ ಸಂಪತ್ತನ್ನು ಹೊಂದಿರುವ ಸ್ವಯಂ ಉದ್ಯಮಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಟಾಪ್‌ 10 ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಐವರು ಬೆಂಗಳೂರು ಮೂಲದವರು ಆಗಿದ್ದಾರೆ.

ರಾಜ್ಯದಲ್ಲಿ 90 ಮಂದಿ ಕೋಟ್ಯಾಧಿಪತಿಗಳು: ಅಗ್ರ ಸ್ಥಾನದಲ್ಲಿ ಅಜೀಮ್‌ ಪ್ರೇಮ್‌ಜಿರಾಜ್ಯದಲ್ಲಿ 90 ಮಂದಿ ಕೋಟ್ಯಾಧಿಪತಿಗಳು: ಅಗ್ರ ಸ್ಥಾನದಲ್ಲಿ ಅಜೀಮ್‌ ಪ್ರೇಮ್‌ಜಿ

ಹಾಗಾದರೆ ಈ ಪಟ್ಟಿಯಲ್ಲಿ ಟಾಪ್‌ 10 ಕೋಟ್ಯಾಧಿಪತಿಗಳು ಯಾರು, ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.

ಟಾಪ್‌ 10 ಯುವ, ಸ್ವಯಂ ಉದ್ಯಮಿಗಳು

* ಮೀಡಿಯಾ.ನೆಟ್‌ ನ ದಿವ್ಯಾಂಕ್‌ ತುರಾಖಿಯಾ: 39 ವರ್ಷ ಪ್ರಾಯದ ದಿವ್ಯಾಂಕ್‌ ತುರಾಖಿಯಾ ಈ ಹುರುನ್‌ ಶ್ರೀಮಂತರ ಪಟ್ಟಿ 2021 ರಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ಇವರ ಒಟ್ಟು ಸಂಪತ್ತು 12,500 ಕೋಟಿ ಆಗಿದೆ. ದಿವ್ಯಾಂಕ್‌ ತುರಾಖಿಯಾ ದುಬೈನಲ್ಲಿ ವಾಸವಿರುವವರು ಆಗಿದ್ದಾರೆ.
* ಬ್ರೌಸರ್‌ಸ್ಟ್ಯಾಕ್ಸ್‌ನ ನಕುಲ್‌ ಅಗರ್ವಾಲ್‌: 36 ವರ್ಷ ಪ್ರಾಯದ ನಕುಲ್‌ ಅಗರ್ವಾಲ್‌ ಈ ಹುರುನ್‌ ಶ್ರೀಮಂತರ ಪಟ್ಟಿ 2021 ರಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ. ನಕುಲ್‌ ಅಗರ್ವಾಲ್‌ ಬ್ರೌಸರ್‌ಸ್ಟ್ಯಾಕ್ಸ್‌ನ ಸಹ ಸಂಸ್ಥಾಪಕ ಆಗಿದ್ದಾರೆ. ಇವರ ಒಟ್ಟು ಸಂಪತ್ತು 12,400 ಕೋಟಿ ಆಗಿದೆ. ನಕುಲ್‌ ಅಗರ್ವಾಲ್‌ ಮುಂಬೈ ಮೂಲದವರು ಆಗಿದ್ದಾರೆ.
* ಬ್ರೌಸರ್‌ಸ್ಟ್ಯಾಕ್ಸ್‌ನ ರಿತೇಶ್‌ ಅರೋರಾ: 37 ವರ್ಷ ಪ್ರಾಯದ ರಿತೇಶ್‌ ಅರೋರಾ ಈ ಹುರುನ್‌ ಶ್ರೀಮಂತರ ಪಟ್ಟಿ 2021 ರಲ್ಲಿ ಮೂರನೇ ಸ್ಥಾನದಲ್ಲಿ ಇದ್ದಾರೆ. ರಿತೇಶ್‌ ಅರೋರಾ ಕೂಡಾ ಬ್ರೌಸರ್‌ಸ್ಟ್ಯಾಕ್ಸ್‌ನ ಸಹ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದಾರೆ. ಇವರ ಒಟ್ಟು ಸಂಪತ್ತು 12,400 ಕೋಟಿ ಆಗಿದೆ. ರಿತೇಶ್‌ ಅರೋರಾ ಕೂಡಾ ಮುಂಬೈ ಮೂಲದವರು ಆಗಿದ್ದಾರೆ.
* ನೇಹಾ ನರಖೇಡೆ ಮತ್ತು ಕುಟುಂಬ: 36 ವರ್ಷ ಪ್ರಾಯದ ನೇಹಾ ನರಖೇಡೆ, ಕಂಫ್ಲೌಂಟ್‌ನಲ್ಲಿ ಸಹ-ಸಂಸ್ಥಾಪಕರು ಆಗಿದ್ದಾರೆ ಹಾಗೂ ಈ ಹುರುನ್‌ ಶ್ರೀಮಂತರ ಪಟ್ಟಿ 2021 ರಲ್ಲಿ ನೇಹಾ ನರಖೇಡೆ ಮತ್ತು ಕುಟುಂಬವು ನಾಲ್ಕನೇ ಸ್ಥಾನದಲ್ಲಿ ಇದೆ. ಈ ಕುಟುಂಬದ ಒಟ್ಟು ಸಂಪತ್ತು 12,200 ಕೋಟಿ ಆಗಿದೆ. ನೇಹಾ ನರಖೇಡೆ ಮತ್ತು ಕುಟುಂಬವು ಕ್ಯಾಲಿಫೋನಿರ್ಯಾದಲ್ಲಿ ವಾಸವಿರುವವರು ಆಗಿದ್ದಾರೆ.
* ಜೆರೋಧಾದ ನಿಖಿಲ್ ಕಾಮತ್: 35 ವರ್ಷ ಪ್ರಾಯದ ನಿಖಿಲ್ ಕಾಮತ್ ಜೆರೋಧಾದ ಸಹ ಸಂಸ್ಥಾಪಕರು ಆಗಿದ್ದಾರೆ. ಭಾರತದ ಅತಿದೊಡ್ಡ ವ್ಯಾಪಾರ ವೇದಿಕೆ ಜೆರೋಧಾ ಆಗಿದೆ. ನಿಖಿಲ್ ಕಾಮತ್ ಹುರುನ್‌ ಶ್ರೀಮಂತರ ಪಟ್ಟಿ 2021 ರಲ್ಲಿ ಐದನೇ ಸ್ಥಾನದಲ್ಲಿ ಇದ್ದಾರೆ. ಇವರ ಒಟ್ಟು ಸಂಪತ್ತು 11,100 ಕೋಟಿ ಆಗಿದೆ. ನಿಖಿಲ್ ಕಾಮತ್ ಬೆಂಗಳೂರು ಮೂಲದವರು ಆಗಿದ್ದಾರೆ.
* ಥಿಂಕ್‌ ಆಂಡ್‌ ಲರ್ನ್‌ನ ರಿಜು ರವೀಂದ್ರನ್‌: ಆನ್‌ಲೈನ್‌ ಶಿಕ್ಷಣ ವೇದಿಕೆಯ ಬೈಜುನ ಸಹ ಸಂಸ್ಥಾಪಕ 40 ವರ್ಷ ಪ್ರಾಯದ ರಿಜು ರವೀಂದ್ರನ್‌ ಹುರುನ್‌ ಶ್ರೀಮಂತರ ಪಟ್ಟಿ 2021 ರಲ್ಲಿ ಆರನೇ ಸ್ಥಾನದಲ್ಲಿ ಇದ್ದಾರೆ. ಇವರ ಒಟ್ಟು ಸಂಪತ್ತು 8,100 ಕೋಟಿ ಆಗಿದೆ. ರಿಜು ರವೀಂದ್ರನ್‌ ಬೆಂಗಳೂರು ಮೂಲದವರು ಆಗಿದ್ದಾರೆ.
* ಫ್ಲಿಫ್‌ಕಾರ್ಟ್‌ನ ಬಿನ್ನಿ ಬನ್ಸಾಲ್‌: 38 ವರ್ಷ ಪ್ರಾಯದ ಬಿನ್ನಿ ಬನ್ಸಾಲ್‌ ಫ್ಲಿಫ್‌ಕಾರ್ಟ್‌ನ ಸಹ ಸಂಸ್ಥಾಪಕರು ಆಗಿದ್ದಾರೆ. ಹುರುನ್‌ ಶ್ರೀಮಂತರ ಪಟ್ಟಿ 2021 ರಲ್ಲಿ ಬಿನ್ನಿ ಬನ್ಸಾಲ್‌ ಏಳನೇ ಸ್ಥಾನದಲ್ಲಿ ಇದ್ದಾರೆ. ಇವರ ಒಟ್ಟು ಸಂಪತ್ತು 8,000 ಕೋಟಿ ಆಗಿದೆ. ಬಿನ್ನಿ ಬನ್ಸಾಲ್‌ ಬೆಂಗಳೂರಿನಲ್ಲಿ ವಾಸವಿದ್ದಾರೆ.
* ಫ್ಲಿಫ್‌ಕಾರ್ಟ್‌ನ ಸಚಿನ್‌ ಬನ್ಸಾಲ್‌: 40 ವರ್ಷ ಪ್ರಾಯದ ಸಚಿನ್‌ ಬನ್ಸಾಲ್‌ ಹುರುನ್‌ ಶ್ರೀಮಂತರ ಪಟ್ಟಿ 2021 ರಲ್ಲಿ ಎಂಟನೇ ಸ್ಥಾನದಲ್ಲಿ ಇದ್ದಾರೆ. ಇವರ ಒಟ್ಟು ಸಂಪತ್ತು 7,800 ಕೋಟಿ ಆಗಿದೆ. ಸಚಿನ್‌ ಬನ್ಸಾಲ್‌ ಕೂಡಾ ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ.
* ಎಎನ್ಐ ಟೆಕ್ನಾಲಜೀಸ್ ನ ಭವಿಶ್ ಅಗರ್ವಾಲ್: ಒಲಾದ ಭವಿಶ್ ಅಗರ್ವಾಲ್ ಹುರುನ್‌ ಶ್ರೀಮಂತರ ಪಟ್ಟಿ 2021 ರಲ್ಲಿ ಒಂಬತ್ತನೇ ಸ್ಥಾನದಲ್ಲಿ ಇದ್ದಾರೆ. 36 ವರ್ಷ ಪ್ರಾಯದ ಭವಿಶ್ ಅಗರ್ವಾಲ್ ಅವರ ಸಂಪತ್ತು ಈ ವರ್ಷದಲ್ಲಿ ಶೇಕಡ 114 ರಷ್ಟು ಏರಿಕೆ ಕಂಡಿತೆ. ಇವರ ಒಟ್ಟು ಸಂಪತ್ತು 7,500 ಕೋಟಿ ಆಗಿದೆ. ಭವಿಶ್ ಅಗರ್ವಾಲ್ ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ.
* ಒರೆವೆಲ್ ಸ್ಟೇಸ್ ನ ರಿತೇಶ್ ಅಗರ್ವಾಲ್: ಓಯೋ ರೋಮ್ಸ್‌ನ ರಿತೇಶ್ ಅಗರ್ವಾಲ್ ಹುರುನ್‌ ಶ್ರೀಮಂತರ ಪಟ್ಟಿ 2021 ರಲ್ಲಿ ಹತ್ತನೇ ಸ್ಥಾನದಲ್ಲಿ ಇದ್ದಾರೆ. 27 ವರ್ಷ ಪ್ರಾಯದ ರಿತೇಶ್ ಅಗರ್ವಾಲ್‌ ಅವರ ಸಂಪತ್ತಿನಲ್ಲಿ ಶೇಕಡ 40 ರಷ್ಟು ಏರಿಕೆ ಕಂಡಿದೆ. ಇವರ ಒಟ್ಟು ಸಂಪತ್ತು 6,300 ಕೋಟಿ ಆಗಿದೆ. ರಿತೇಶ್ ಅಗರ್ವಾಲ್ ನವದೆಹಲಿಯಲ್ಲಿ ಉದ್ಯಮ ನಡೆಸುತ್ತಿದ್ದಾರೆ.

   ಮೈಕ್ ಆಫ್ ಇದೆ ಅಂದ್ಕೊಂಡು ಪ್ರೆಸ್ ಮೀಟ್ ನಲ್ಲೇ ಡಿಕೆಶಿ ಮಾನ ಹರಾಜು ಹಾಕಿದ ಉಗ್ರಪ್ಪ | Oneindia Kannada

   (ಒನ್‌ಇಂಡಿಯಾ ಸುದ್ದಿ)

   English summary
   Hurun India Rich List 2021: 10 Young And Self-Made Entrepreneurs Under 40. Read on.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X