Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು
ಕನ್ನಡ ನಿರ್ದೇಶಕ ಪ್ರೇಮ್ ಅವರು ತಮ್ಮ ಸಿನಿಮಾಗಳ ಮೂಲಕ ಎಷ್ಟು ಹೆಸರು ಮಾಡಿದ್ದಾರೋ, ಅಷ್ಟೇ ವಿವಾದಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. 'ಜೋಗಿ' ಸಿನಿಮಾದಲ್ಲಿ ತಾಯಿಯ ಬಾಂಧವ್ಯದ ಬಗ್ಗೆ ಅದ್ಭುತ ಹಾಡುಗಳನ್ನು ನೀಡಿದ್ದ ಪ್ರೇಮ್, ಈಗ 'ಐಟಂ ಸಾಂಗ್' ಹಾಗೂ ಹೆಣ್ಣುಮಕ್ಕಳ ಸೆರಗಿನ ಪದಬಳಕೆಗೆ ಇಳಿದಿರುವುದು ಅವರ ಅಭಿಮಾನಿಗಳಿಗೇ ಬೇಸರ ತರಿಸಿದೆ. 'ಕೆಡಿ' ಚಿತ್ರದ "ಸರ್ಸೆ ನಿನ್ನ ಸೆರಗ ಸರ್ಸೆ" ಹಾಡಿನ ಅಶ್ಲೀಲ ಸಾಹಿತ್ಯದ ವಿರುದ್ಧ ಕನ್ನಡಿಗರು ಕೆಂಡಾಮಂಡಲವಾಗಿದ್ದಾರೆ. ಹೆಣ್ಣುಮಕ್ಕಳನ್ನು ಅವಮಾನಿಸುವಂತಹ ಪದಬಳಕೆ ಮಾಡಲಾಗಿದೆ ಎಂಬ ಆರೋಪಗಳ ಬೆನ್ನಲ್ಲೇ, ನಿರ್ದೇಶಕ ಪ್ರೇಮ್ ಅವರ ಹಿಂದಿನ ಕೆಲವು ವಿವಾದಗಳು ಈಗ ಮುನ್ನೆಲೆಗೆ ಬಂದಿವೆ. ತಮ್ಮದೇ ಸಿನಿಮಾದ ಹಾಡಿಗೆ ಈ ಹಿಂದೆಯೂ ಜನರಿಂದ ವಿರೋಧ ವ್ಯಕ್ತವಾಗಿತ್ತು.
ನಿರ್ದೇಶಕ ಪ್ರೇಮ್ ಅವರು ಕೇವಲ 'ಕೆಡಿ' ಚಿತ್ರದ ಮೂಲಕ ಮಾತ್ರವಲ್ಲ, ಈ ಹಿಂದೆಯೂ ತಮ್ಮ ಸಿನಿಮಾದ ಸಾಹಿತ್ಯದಿಂದ ದೊಡ್ಡ ಮಟ್ಟದ ಜನಾಕ್ರೋಶ ಎದುರಿಸಿದ್ದರು. 2012ರಲ್ಲಿ ತೆರೆಕಂಡ 'ಪ್ರೇಮ್ ಅಡ್ಡ' ಸಿನಿಮಾದ "ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ..." ಎಂಬ ಹಾಡು ಅಂದು ರಾಜ್ಯಾದ್ಯಂತ ದೊಡ್ಡ ಸಂಚಲನ ಮೂಡಿಸಿತ್ತು. ಪ್ರೇಮ್ ನಿರ್ದೇಶಿಸಿ ತಾನೇ ನಾಯಕನಾಗಿ ನಟಿಸಿದ್ದ ಪ್ರೇಮ್ ಅಡ್ಡ ಸಿನಿಮಾದ ಹಾಡು ಕೂಡ ವಿವಾದಕ್ಕೆ ಸಿಲುಕಿತ್ತು. ಪ್ರೇಮ್ ಅವರ ಸಿನಿಮಾದ ಹಾಡೊಂದರಲ್ಲಿ 'ಮೇಲುಕೋಟೆ ಹುಡುಗಿ' ಎಂಬ ಸಾಲುಗಳನ್ನು ಬಳಸಿದಾಗ, ಅಲ್ಲಿನ ಸಂಪ್ರದಾಯಸ್ಥರು ಮತ್ತು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಾಡು ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಪ್ರತಿಭಟನೆಗಳು ಕೂಡ ನಡೆದಿದ್ದವು.

ಮೇಲುಕೋಟೆ ಜನರ ಆಕ್ರೋಶಕ್ಕೆ ಕಾರಣವಾಗಿದ್ದ ಸಾಹಿತ್ಯ
ಮಳವಳ್ಳಿ ಸಾಯಿಕೃಷ್ಣ ಅವರು ರಚಿಸಿದ್ದ ಈ ಹಾಡಿನಲ್ಲಿ, ಮೇಲುಕೋಟೆಯಂತಹ ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರವೊಂದರ ಹೆಸರನ್ನು ಬಳಸಿ ಅಶ್ಲೀಲವಾಗಿ ಬಿಂಬಿಸಲಾಗಿದೆ ಎಂಬುದು ಸ್ಥಳೀಯರ ಆರೋಪವಾಗಿತ್ತು. ಮುಖ್ಯವಾಗಿ ಹಾಡಿನಲ್ಲಿನ "ಮಂಡಿ ತನ್ಕ ಲಂಗ ಎತ್ಕೊಂಡ್ ತಳುಕು ಬಳುಕು ಸೊಂಟ ತೋರಿಸ್ಕೊಂಡ್" ಎಂಬ ಸಾಲುಗಳು ಮತ್ತು ಸೊಂಟದ ಕೆಳಗಿನ ಸಾಹಿತ್ಯದ ಬಳಕೆ ಮೇಲುಕೋಟೆ ಜನರ ಕೆಂಗಣ್ಣಿಗೂ ಗುರಿಯಾಗಿತ್ತು.
ಈ ಹಾಡಿನಿಂದಾಗಿ ಮೇಲುಕೋಟೆಯ ಹೆಣ್ಣುಮಕ್ಕಳು ದಾರಿಯಲ್ಲಿ ಹೋಗುವಾಗ ಪಡ್ಡೆಗಳು ಇದೇ ಹಾಡನ್ನು ಹಾಡಿ ಕಿಚಾಯಿಸುತ್ತಾರೆ. ಇದು ಅಲ್ಲಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಪ್ರತಿಭಟನೆಗಳು ತೀವ್ರಗೊಂಡವು. ಅಂದು ಮೇಲುಕೋಟೆ ಜನತೆ ಒಂದು ದಿನದ ಬಂದ್‌ಗೆ ಕರೆ ನೀಡಿ, ತಹಸೀಲ್ದಾರ್ ಅವರಿಗೂ ದೂರು ಸಹ ನೀಡಿದ್ದರು. "ಹಾಡನ್ನು ಚಿತ್ರದಿಂದ ತೆಗೆದುಹಾಕದಿದ್ದರೆ ಕೇಸ್ ದಾಖಲಿಸುತ್ತೇವೆ" ಎಂದು ಚಿತ್ರತಂಡಕ್ಕೆ ಎಚ್ಚರಿಕೆಯೂ ನೀಡಿದ್ದರು.
ಸ್ಪಷ್ಟನೆ ನೀಡಿದ್ದ ಚಿತ್ರತಂಡ
ವಿವಾದ ಅತಿರೇಕಕ್ಕೆ ಹೋದಾಗ ಸ್ಪಷ್ಟನೆ ನೀಡಿದ್ದ ಚಿತ್ರತಂಡ, "ನಮಗೆ ಮೇಲುಕೋಟೆಯನ್ನಾಗಲಿ ಅಥವಾ ಅಲ್ಲಿನ ಹೆಣ್ಣುಮಕ್ಕಳನ್ನಾಗಲಿ ಕೀಳಾಗಿ ಚಿತ್ರಿಸುವ ಉದ್ದೇಶವಿಲ್ಲ. ಕೇವಲ ಹುಡುಗಿಯ ಅಂದವನ್ನು ವರ್ಣಿಸಲು ಈ ಹೆಸರನ್ನು ಬಳಸಿದ್ದೇವೆ" ಎಂದು ಸಮಜಾಯಿಷಿ ನೀಡಿತ್ತು. ಅಂತಿಮವಾಗಿ ಜನರ ಆಕ್ರೋಶಕ್ಕೆ ಮಣಿದ ಪ್ರೇಮ್, ಹಾಡಿನಲ್ಲಿನ 'ಮೇಲುಕೋಟೆ' ಎಂಬ ಪದವನ್ನು ಕೈಬಿಟ್ಟು, ಅದರ ಬದಲಿಗೆ 'ಏಳುಕೋಟೆ' ಎಂಬ ಪದವನ್ನು ಬಳಸಲು ನಿರ್ಧರಿಸಿದ್ದರು. ಕೈಲಾಶ್ ಖೇರ್ ಮತ್ತು ರಾಜು ತಾಳಿಕೋಟೆ ಅವರ ಧ್ವನಿಯಲ್ಲಿ ಮೂಡಿಬಂದಿದ್ದ ಈ ಹಾಡು ಯೂಟ್ಯೂಬ್‌ನಲ್ಲಿ ಅಂದು ಸೂಪರ್ ಹಿಟ್ ಆಗಿತ್ತು. ಆದರೆ, ಪ್ರಚಾರಕ್ಕಾಗಿ ಪದೇ ಪದೇ ಇಂತಹ ವಿವಾದಾತ್ಮಕ ಮತ್ತು ಅಶ್ಲೀಲ ಸಾಹಿತ್ಯವನ್ನು ಬಳಸುವುದು ಪ್ರೇಮ್ ಅವರ ಸಿನಿಮಾಗಳಲ್ಲಿ ಸರಣಿಯಂತೆ ಮುಂದುವರಿಯುತ್ತಿದೆ ಎಂದು ಕನ್ನಡಿಗರು ದೂರುತ್ತಿದ್ದಾರೆ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
ಶೂಟಿಂಗ್ ವೇಳೆ ನನ್ನ ಖಾಸಗಿ ಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ: ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ನಟಿ ಮೊನಾಲಿಸಾ ಆರೋಪ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್ -
Shiva Rajkumar: ಸೈನಿಕನ ದೇಶಪ್ರೇಮಮೇ ಚಿತ್ರದ ಜೀವಾಳ: ಧುರಂಧರ್-2 ಸಿನಿಮಾ, ರಣವೀರ್ ಸಿಂಗ್ ನಟನೆಗೆ ಶಿವಣ್ಣ ಫಿದಾ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು













Click it and Unblock the Notifications