ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್‌ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral
ಬೆಂಗಳೂರು: ಇಂದಿನ ಯುವಜನತೆ ಅಥವಾ 'ಜೆನ್ ಝೀ' (Gen Z) ಜನರ ಜೀವನಶೈಲಿ ಹಾಗೂ ಅವರ ಖರ್ಚು ಮಾಡುವ ವಿಧಾನ ಹಿಂದಿನ ತಲೆಮಾರಿಗಿಂತ ಸಂಪೂರ್ಣ ಭಿನ್ನವಾಗಿದೆ. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂಟಿಯಾಗಿ ವಾಸಿಸುತ್ತಿರುವ 22 ವರ್ಷದ ಯುವತಿಯೊಬ್ಬಳು ತನ್ನ ಮಾಸಿಕ "ಜೆನ್ ಜೀ ಖರ್ಚುಗಳ" (Gen Z expenses) ಪಟ್ಟಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆನ್‌ಲೈನ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಶ್ರದ್ಧಾ ಸೈನಿ ಎಂಬ ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಆಕೆ ತನ್ನ ದಿನನಿತ್ಯದ ಹಾಗೂ ಮಾಸಿಕ ಖರ್ಚುಗಳ ಬಗ್ಗೆ ವಿವರವಾಗಿ ಹಂಚಿಕೊಂಡಿದ್ದಾಳೆ. ವಿಶೇಷವಾಗಿ ಆಕೆ ತನ್ನ ಮಾನಸಿಕ ಆರೋಗ್ಯ ಹಾಗೂ ಸೆಲ್ಫ್ ಕೇರ್ (Self-care) ಅಥವಾ ಸ್ವ-ಆರೈಕೆಗಾಗಿ ಮಾಡುತ್ತಿರುವ ಖರ್ಚಿನ ಬಗ್ಗೆ ಹೇಳಿಕೊಂಡಿರುವುದು ನೆಟ್ಟಿಗರ ಗಮನ ಸೆಳೆದಿದೆ.

ಯುವತಿಯ ಮಾಸಿಕ ಖರ್ಚಿನ ಲೆಕ್ಕಾಚಾರ ಹೀಗಿದೆ
ವಿಡಿಯೋದಲ್ಲಿ ಶ್ರದ್ಧಾ ತನ್ನ ಸಣ್ಣ ಪುಟ್ಟ ಆಸೆಗಳಿಂದಲೇ ಲೆಕ್ಕ ಶುರು ಮಾಡಿದ್ದಾಳೆ. "ನಾನು ಪ್ರತಿ ತಿಂಗಳು ಎರಡರಿಂದ ಮೂರು ಬಾರಿ ನನಗಾಗಿ ಹೂವುಗಳನ್ನು ಖರೀದಿಸುತ್ತೇನೆ. ಅದಕ್ಕಾಗಿ ಸುಮಾರು 2,000 ರೂಪಾಯಿ ಖರ್ಚಾಗುತ್ತದೆ" ಎಂದು ಆಕೆ ಹೇಳಿದ್ದಾಳೆ. ಮಾನಸಿಕ ಆರೋಗ್ಯಕ್ಕೆ ಆಕೆ ಮೊದಲ ಆದ್ಯತೆ ನೀಡಿದ್ದು, "ನನ್ನ ಮಾನಸಿಕ ನೆಮ್ಮದಿಗಾಗಿ ನಾನು ಥೆರಪಿ ಮೊರೆ ಹೋಗುತ್ತೇನೆ. ಇದರಲ್ಲಿ ಯಾವುದೇ ರಾಜಿಯಿಲ್ಲ. ಇದಕ್ಕಾಗಿ ತಿಂಗಳಿಗೆ ಕನಿಷ್ಠ 10,000 ರೂಪಾಯಿ ಖರ್ಚಾಗುತ್ತದೆ" ಎಂದಿದ್ದಾಳೆ.
ಇದರ ಜೊತೆಗೆ, ಪ್ರತಿ ಭಾನುವಾರ ಆಕೆ 'ಸೆಲ್ಫ್-ಡೇಟ್' ಮಾಡುತ್ತಾಳೆ. ಅಂದರೆ, ಅವಳು ಬ್ರಂಚ್‌ಗೆ ಹೋಗುತ್ತಾಳೆ. ಅದಕ್ಕಾಗಿ ತಿಂಗಳಿಗೆ 2,000 ರೂ. ವ್ಯಯಿಸುತ್ತಾಳೆ. ವಾರಾಂತ್ಯದಲ್ಲಿ ಮಸಾಜ್ ಮತ್ತು ಪೆಡಿಕ್ಯೂರ್‌ಗಾಗಿ 5,000 ರೂ., ನೇಲ್ ಆರ್ಟ್ ಮತ್ತು ಉಗುರುಗಳ ಆರೈಕೆಗೆ 3,000 ರೂ. ಖರ್ಚು ಮಾಡುತ್ತಾಳೆ. ತನ್ನ ಮೂಡ್ ಅನ್ನು ಸರಿಪಡಿಸಿಕೊಳ್ಳಲು 'ಎಸ್ತೆಟಿಕ್' (Aesthetic) ವಸ್ತುಗಳ ಮೇಲೆ 1,000 ರೂ. ಹಾಗೂ ಗೈಡೆಡ್ ಜರ್ನಲ್‌ಗಳು, ಗ್ರಾಟಿಟ್ಯೂಡ್ ಪ್ಲಾನರ್, ಮತ್ತು ವಿಷನ್ ಬೋರ್ಡ್‌ಗಳಂತಹ ವಸ್ತುಗಳಿಗಾಗಿ 2,000 ರೂ. ಖರ್ಚು ಮಾಡುವುದಾಗಿ ಶ್ರದ್ಧಾ ವಿವರಿಸಿದ್ದಾಳೆ.
"ನಾನು ಇವುಗಳನ್ನು ಜೆನ್-ಝೀ ಖರ್ಚುಗಳು ಎಂದು ಕರೆಯುತ್ತೇನೆ. ಏಕೆಂದರೆ, ಮಿಲೇನಿಯಲ್ಸ್ (Millennials - 1981 ರಿಂದ 1996 ರ ನಡುವೆ ಜನಿಸಿದವರು) ತಮ್ಮ ಮೇಲೆ ಈ ರೀತಿ ಹಣ ಖರ್ಚು ಮಾಡುವುದು ಸಾಮಾನ್ಯ ವಿಷಯವಾಗಿರಲಿಲ್ಲ. ಜೊತೆಗೆ ಆ ಕಾಲದಲ್ಲಿ ಇಂತಹ ಖರ್ಚುಗಳನ್ನು ಸಮಾಜ ಸುಲಭವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ" ಎಂದು ಆಕೆ ತನ್ನ ವಿಡಿಯೋದಲ್ಲಿ ಹೇಳಿದ್ದಾಳೆ. ಅಲ್ಲದೆ, "ಮಿಲೇನಿಯಲ್ಸ್ ಎಂದಿಗೂ ಅರ್ಥಮಾಡಿಕೊಳ್ಳಲಾಗದ ಒಂದು 'ಜೆನ್ ಝೀ ಖರ್ಚು' ಯಾವುದು?" ಎಂಬ ಶೀರ್ಷಿಕೆಯನ್ನೂ ಆಕೆ ನೀಡಿದ್ದಾಳೆ.
ನೆಟ್ಟಿಗರ ಪರ-ವಿರೋಧ ಪ್ರತಿಕ್ರಿಯೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪರ ಮತ್ತು ವಿರೋಧವಾಗಿ ಕಮೆಂಟ್ ಮಾಡಲು ಶುರು ಮಾಡಿದ್ದಾರೆ. ಕೆಲವರು ಆಕೆಯ ಹಣಕಾಸಿನ ಖರ್ಚನ್ನು ಟೀಕಿಸಿದರೆ, ಮತ್ತೆ ಕೆಲವರು ಆಕೆಯ ಆಯ್ಕೆಯನ್ನು ಬೆಂಬಲಿಸಿದ್ದಾರೆ.
"ನಿಮ್ಮ ಮೇಲೆ ನೀವು ಹಣ ಖರ್ಚು ಮಾಡಿಕೊಳ್ಳುತ್ತಿರುವುದು ಹಾಗೂ ಸೆಲ್ಫ್ ಲವ್ ಅನ್ನು ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ವಿಚಾರ. ಆದರೆ, ದಯವಿಟ್ಟು ಇಡೀ ಒಂದು ತಲೆಮಾರನ್ನು (ಮಿಲೇನಿಯಲ್ಸ್) ಕೀಳಾಗಿ ಕಾಣಬೇಡಿ" ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬರು ಕಮೆಂಟ್ ಮಾಡಿ, "ಮಿಲೇನಿಯಲ್ಸ್ ಕಷ್ಟಪಟ್ಟು ಕೆಲಸ ಮಾಡಿದರು, ಅದಕ್ಕಾಗಿಯೇ ಇಂದು ಜೆನ್ ಝೀ ಗಳಿಗೆ ಜೀವನ ಸುಲಭವಾಗಿದೆ. ಮಿಲೇನಿಯಲ್ಸ್ ಕೂಡ ಇದೆಲ್ಲವನ್ನೂ ಮಾಡಿದ್ದಾರೆ.. ಆದರೆ ಅವರು ಮಾಡದ ಒಂದೇ ಒಂದು ವಿಷಯವೆಂದರೆ ಮಾನಸಿಕ ಆರೋಗ್ಯಕ್ಕಾಗಿ ತಿಂಗಳಿಗೆ 10 ಸಾವಿರ ರೂ. ಪಾವತಿಸಿಲ್ಲ. ಆಗಿನ ಪರಿಸ್ಥಿತಿ ಮತ್ತು ವಾತಾವರಣವೇ ಭಿನ್ನವಾಗಿತ್ತು, ಹಾಗಾಗಿ ಹೋಲಿಕೆ ಮಾಡುವುದು ಬೇಡ" ಎಂದಿದ್ದಾರೆ. "ಕನಿಷ್ಠಪಕ್ಷ ಮಿಲೇನಿಯಲ್ಸ್‌ಗೆ ಮಾನಸಿಕ ನೆಮ್ಮದಿಗಾಗಿ ಥೆರಪಿ ಬೇಕಿರಲಿಲ್ಲ, ಅವರು ಪರಿಸ್ಥಿತಿಯನ್ನು ಎದುರಿಸುವಷ್ಟು ಬಲಶಾಲಿಗಳಾಗಿದ್ದರು" ಎಂದು ಇನ್ನೊಬ್ಬರು ತಿರುಗೇಟು ನೀಡಿದ್ದಾರೆ.
ಆದರೆ ಯುವತಿಯ ಬೆಂಬಲಕ್ಕೂ ಕೆಲವರು ನಿಂತಿದ್ದಾರೆ. "ಜನರು ತಮ್ಮ ಬಗ್ಗೆ ಹೆಚ್ಚು ಗಮನಹರಿಸಬೇಕು, ಇದಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕು. ನಾನು ಕೂಡ ಈ ರೀತಿ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಅನಿಸುತ್ತಿದೆ" ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, "ಥೆರಪಿ ಎಂಬುದು ಒಂದು ರೀತಿಯ ಹೂಡಿಕೆ. ಹಳೆಯ ತಲೆಮಾರಿನವರು ಈ ರೀತಿ ಮಾಡಿದ್ದರೆ, ಇಂದಿನ ಪ್ರಪಂಚವು ಹೆಚ್ಚು ಕರುಣಾಮಯಿ ಮತ್ತು ಆರೋಗ್ಯಕರವಾಗಿರುತ್ತಿತ್ತು" ಎಂದು ಅಭಿಪ್ರಾಯಪಟ್ಟಿದ್ದಾರೆ.
-
ತಾಯಿ ಮಂಗನ ಮೌನ ರೋದನೆ: ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕರುಣಾಜನಕ ದೃಶ್ಯ..Video Viral -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
ಆಶಾ ಭೋಸ್ಲೆ ಮೊಮ್ಮಗಳು ಜನೈಗೆ ಸಾಂತ್ವನ ಹೇಳಿದ ಕ್ರಿಕೆಟಿಗ ಮೊಹಮ್ಮದ್ ಸಿರಾಜ್; ವಿಡಿಯೋ ವೈರಲ್ -
Yuzvendra Chahal: ಯುಜ್ವೇಂದ್ರ ಚಹಾಲ್ 'ಕ್ಯೂಟ್' ಕಾಮೆಂಟ್, ತಾನಿಯಾ ಚಟರ್ಜಿ ವಿಡಿಯೋ ವೈರಲ್ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ












Click it and Unblock the Notifications