Puneeth Rajkumar: ಅಪ್ಪು ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ಅಶ್ವಿನಿ ಪುನೀತ್ ರಾಜ್ಕುಮಾರ್
ಹೊಸ ವರ್ಷದ ಬೆನ್ನಲ್ಲೇ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಪವರ್ ಸ್ಟಾರ್ ದಿ. ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳು ಸಿಹಿ ಸುದ್ದಿ ಕೊಟ್ಟಿದ್ದಾರೆ. ಪುನೀತ್ ರಾಜ್ಕುಮಾರ್ ಅವರು ಅಜರಾಮರ. ಅವರು ಕನ್ನಡಿಗರಿಗೆ ಕೊಟ್ಟ ಪ್ರೀತಿ ಹಾಗೂ ಕನ್ನಡ ಸಿನಿಮಾಗಳಿಗೆ ಕೊಟ್ಟ ಕೊಡುಗೆ ಅನನ್ಯ. ಪ್ರತಿ ಬಾರಿ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾದಾಗಲೂ ಅವರ ಅಪ್ಪಟ ಅಭಿಮಾನಿಗಳಿಗೆ ಪುನೀತ್ ಅವರು ಇರಬೇಕಿತ್ತು. ಅವರ ಸಿನಿಮಾಗಳು ಸಹ ರಿಲೀಸ್ ಆಗುತ್ತಿತ್ತು ಎನ್ನುವ ಕೊರಗು ಇದ್ದೇ ಇದೆ. ಇದೀಗ ಅಪ್ಪು - ಪರಮಾತ್ಮನ ನೆನಪು ಹಚ್ಚಹಸಿರಾಗಿಸಲು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ಸ್ಮರಣಾರ್ಥವಾಗಿ ಅವರ ಅಭಿಮಾನಿಗಳು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಅಪ್ಪು ಅವರ ಜನ್ಮದಿನದಂದು ಅನ್ನಸಂತರ್ಪಣೆ, ಬಡವರಿಗೆ ಸಹಾಯ ಹಾಗೂ ರಕ್ತದಾನದಂತಹ ಸಮಾಜ ಸೇವೆ ಮಾಡುತ್ತಿದ್ದಾರೆ. ಪ್ರತಿ ವರ್ಷ ಮಾರ್ಚ್ 17ರಂದು ಅಭಿಮಾನಿಗಳು ಅದ್ಧೂರಿಯಾಗಿ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ಸಂಭ್ರಮಾಚರಣೆಯ ಸಂದರ್ಭದಲ್ಲಿಯೇ ಪುನೀತ್ ರಾಜ್ ಕುಮಾರ್ ಅವರು ನಟಿಸಿದ್ದ ಸೂಪರ್ ಹಿಟ್ ಸಿನಿಮಾಗಳನ್ನು ರೀ-ರಿಲೀಸ್ ಮಾಡಲಾಗುತ್ತಿದೆ.

ಅದ್ಧೂರಿ ಪ್ರತಿಕ್ರಿಯೆ
ಪುನೀತ್ ರಾಜ್ಕುಮಾರ್ ಅವರು ಎರಡು ಸಿನಿಮಾಗಳನ್ನು ಈಗಾಗಲೇ ರೀ ರಿಲೀಸ್ ಮಾಡಲಾಗಿದ್ದು. ಈ ಸಿನಿಮಾಗಳಿಗೆ ಅಭಿಮಾನಿಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತೀಚೆಗೆ ಪುನೀತ್ ರಾಜ್ಕುಮಾರ್ ಅವರ ಸಿನಿಮಾಗಳಾದ ಜಾಕಿ ಮತ್ತು ಅಪ್ಪು ರೀ - ರಿಲೀಸ್ ಮಾಡಲಾಗಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿದ್ದವು. 2026ನೇ ಸಾಲಿನಲ್ಲಿ ಮತ್ತೊಂದು ಹಿಟ್ ಸಿನಿಮಾ ಮರು ಬಿಡುಗಡೆಗೆ ಮಾಡುವುದಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಅಪ್ಪು ಅವರು ನಟಿಸಿದ ಬಹುತೇಕ ಸಿನಿಮಾಗಳು ಸಕ್ಸಸ್ ಕಂಡಿವೆ. ಅಲ್ಲದೇ ಎಲ್ಲಾ ನಟರ ಅಭಿಮಾನಿಗಳು ನೋಡುವ ಹಾಗೂ ಮನೆ ಮಂದಿಯೆಲ್ಲಾ ಸೇರಿ ನೋಡಬಹುದಾದ ಸಿನಿಮಾ ಎನ್ನುವ ಖ್ಯಾತಿಯನ್ನೂ ಅಪ್ಪು ಅವರ ಸಿನಿಮಾಗಳು ಗಳಿಸಿವೆ. ತಮ್ಮ ಹೋಂ ಬ್ಯಾನರ್ ಸಿನಿಮಾಗಳಲ್ಲಿ ಪುನೀತ್ ರಾಜ್ಕುಮಾರ್ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. 2005ರಲ್ಲಿ ತೆರೆಗೆ ಬಂದಿದ್ದ ಆಕಾಶ್ ಸಿನಿಮಾ ಹಿಟ್ ಲಿಸ್ಟ್ ನಲ್ಲಿದೆ. ಅಭಿ ಸಿನಿಮಾದ ನಂತರ ಪುನೀತ್ ಮತ್ತ ರಮ್ಯಾ ಜೋಡಿ ಮತ್ತೊಮ್ಮೆ ಜೊತೆಯಾಗಿ ಅಭಿನಯಿಸಿದ್ದ ಈ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಮಹೇಶ್ ಬಾಬು ನಿರ್ದೇಶನದ ಈ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್ಟೈನರ್ ಈ ವರ್ಷ ರೀ - ರಿಲೀಸ್ ಆಗಲಿದೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್
ಪುನೀತ್ ರಾಜ್ ಕುಮಾರ್ ಅವರ ಜನ್ಮದಿನಾಚರಣೆಯ ಭಾಗವಾಗಿ ಇದೇ ಮಾರ್ಚ್ 13ಕ್ಕೆ ಆಕಾಶ್ ಚಿತ್ರವನ್ನು ಹೊಸ ರೂಪದಲ್ಲಿ ತೆರೆಗೆ ತರುವುದಾಗಿ ಅಶ್ವಿನಿ ಪುನೀತ್ ರಾಜ್ಕುಮಾರ್ ಘೋಷಿಸಿದ್ದಾರೆ. 4K ರೀ-ಮಾಸ್ಟರ್ಡ್ ವರ್ಷನ್ ಸಿನಿಮಾ ಬಿಡುಗಡೆ ಆಗಲಿದೆ. ನೀನೆ.. ನೀನೆ ನನಗೆಲ್ಲಾ ನೀನೆ... ಮಾತು ನೀನೆ ಮನಸೆಲ್ಲಾ ನೀನೆ ಎಷ್ಟು ವರ್ಷಗಳಾದರೂ ಆದರೂ ಮರೆಯಾಗದ ಕಥೆಗೆ ಸಾಕ್ಷಿಯಾಗಲು ಸಿದ್ಧರಾಗಿ.
ನೀನೆ ನೀನೆ ನನಗೆಲ್ಲಾ ನೀನೆ... ಮಾತು ನೀನೆ ಮನಸೆಲ್ಲಾ ನೀನೆ... 💞
— Ashwini Puneeth Rajkumar (@Ashwini_PRK) January 3, 2026
Get ready to witness a story that time cannot fade.
A heartfelt tribute as #Akash returns to theatres on Dr. Puneeth Rajkumar’s birthday.
▶️ In Cinemas from 13th March 2026
A @prk.productions release#DrPuneethRajkumar… pic.twitter.com/Hh2rTGtt7d
ಡಾ. ಪುನೀತ್ ರಾಜ್ಕುಮಾರ್ ಅವರ ಜನ್ಮದಿನದಂದು ಆಕಾಶ್ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ಹೊಸ ಪೋಸ್ಟರ್ ಸಹ ಹಂಚಿಕೊಂಡಿದ್ದಾರೆ.
-
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Viral Video: ಕಡಿಮೆ ಹಣದಲ್ಲಿ ಬದುಕೋದು ಹೇಗೆ ? ಬೆಂಗಳೂರು ಇಂಟರ್ನ್ ಹೇಳಿದ ಟ್ರಿಕ್ಗಳು -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
Kiara Advani: ವಿಜಯ್ ದೇವರಕೊಂಡ ಮೇಲೆ ಕಿಯಾರಾ ಅಡ್ವಾಣಿಗೆ ಕ್ರಶ್: ರಾಣಾ ಶೋನಲ್ಲಿ ಬಹಿರಂಗವಾದ ಹಳೆಯ ರಹಸ್ಯ, ವೈರಲ್ -
Amruthadhare Serial: ಟ್ವಿಸ್ಟ್ ಮೇಲೆ ಟ್ವಿಸ್ಟ್: ಮಲ್ಲಿ ಮದುವೆ ಬಳಿಕ ಹೊಸ ತಿರುವು, ಜೆಡಿ ಪ್ಲ್ಯಾನ್ಗೆ ಸುನೀಲ್ ವಿಲನ್ -
Property: ಆಸ್ತಿದಾರರಿಗೆ 2026 ವರ್ಷ ಅದೃಷ್ಟ: ರಿಯಲ್ ಎಸ್ಟೇಟ್ನಲ್ಲಿ ಹೊಸ ಸಂಚಲನ, ಮನೆ ಮಾರಾಟ ಭರ್ಜರಿ ಹೆಚ್ಚಳ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ












Click it and Unblock the Notifications