Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್‌

Rameshwaram Cafe: ಕನ್ನಡಿಗರ ಹೆಮ್ಮೆಯ ಉದ್ಯಮ ಎಂದೇ ಹೋಟೆಲ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ರಾಮೇಶ್ವರಂ ಕೆಫೆಯಲ್ಲಿನ ತಿನಿಸುಗಳ ಬೆಲೆಯ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಈ ರೀತಿ ಇರುವಾಗಲೇ ರಾಮೇಶ್ವರಂ ಕೆಫೆಯಲ್ಲಿ ಸಣ್ಣ ಬ್ಯಾಗ್‌ವೊಂದಕ್ಕೆ ದುಬಾರಿ ಮೊತ್ತವನ್ನು ತೆಗೆದುಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ರಾಮೇಶ್ವರಂ ಕೆಫೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರು ಮಾಡಿರುವ ಪೋಸ್ಟ್‌ವೊಂದು ಇದೀಗ ಭಾರೀ ವೈರಲ್ ಆಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ರೋಹಿತ್ ಕುಮಾರ್ ಎನ್ನುವವರು (rohith kumar - @rohithklv) ಇದು @RameshwaramCafe / ರಾಮೇಶ್ವರಂ ಕೆಫೆಯಿಂದ ತುಂಬ ಅರ್ಹವಲ್ಲದ / ಒಪ್ಪಿಕೊಳ್ಳಲು ಸಾಧ್ಯವಿಲ್ಲದ ನಡೆಯಾಗಿದೆ. ಈ ವಸ್ತುವಿನ ಬೆಲೆ ₹150. ಸಾಮಾನ್ಯವಾಗಿ ರೆಸ್ಟೋರೆಂಟ್‌ಗಳು ಟೇಕ್‌ಅವೇ ಆರ್ಡರ್‌ಗಳಿಗೆ (ಪಾರ್ಸ್‌ಗಳಿಗೆ) ಸ್ವೀಕಾರಾರ್ಹ ಪ್ಯಾಕಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ. ಆದರೆ ಅವರು 40 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಿದ್ದಾರೆ.

Rameshwaram Cafe

ಪಾರ್ಸಲ್‌ಗೆ 20 ರೂಪಾಯಿ ಹಾಗೂ ಕಂದು ಬಣ್ಣದ ಕಾಗದದ ಚೀಲಕ್ಕೆ 20 ರೂಪಾಯಿ ವಿಧಿಸಲಾಗಿದೆ. ಗಂಭೀರವಾಗಿ ಹೇಳಬೇಕೆಂದರೆ, ಇದು ತುಂಬಾ ಅನೈತಿಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಹಲವರು ದನಿಗೂಡಿಸಿದ್ದಾರೆ.

Rameshwaram Cafe: ನೆಟ್ಟಿಗರು ಹೇಳಿದ್ದೇನು

ಇನ್ನು ರಾಮೇಶ್ವರಂ ಕೆಫೆಯ ದುಬಾರಿ ಪಾರ್ಸ್ ಹಾಗೂ ಬ್ಯಾಗ್‌ಗೆ ನೆಟ್ಟಿಗರಿಂದಲೂ ಬೆಂಬಲ ವ್ಯಕ್ತವಾಗಿದೆ. ಈ ನೀತಿಯನ್ನು ರಾಮೇಶ್ವರಂ ಕೆಫೆ ಮಾತ್ರವಲ್ಲ ವಿವಿಧ ಹೋಟೆಲ್‌ಗಳು ಸಹ ಬದಲಾಯಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಇದೇ ವಿಚಾರವಾಗಿ ರೋಹಿತ್ ಅವರು, ಚೀಲವನ್ನು ಒಯ್ಯುವ ಬಗ್ಗೆ ಉಪನ್ಯಾಸ ನೀಡುವ ಪ್ರತಿಯೊಬ್ಬರಿಗೂ, ಪಾರ್ಸೆಲ್ = ಟೇಕ್‌ಅವೇ = ಕ್ಯಾರಿ ಬ್ಯಾಗ್ ಅನ್ನು ಒಳಗೊಂಡಿರಬೇಕು. ಪಾರ್ಸೆಲ್ ಮತ್ತು ಟೇಕ್‌ಅವೇ ಎರಡು ಪ್ರತ್ಯೇಕ ವಿಷಯಗಳಾಗಬಾರದು ಎಂದಿದ್ದಾರೆ.

ಇದಕ್ಕೆ ನೆಟ್ಟಿಗರೊಬ್ಬರು ಶುಲ್ಕಗಳು ಇಷ್ಟವಿಲ್ಲ ಎಂದರೆ ಖರೀದಿಸಬೇಡಿ ಸರಳವಲ್ಲವೇ ಎಂದಿದ್ದಾರೆ. ಇದಕ್ಕೆ ರೋಹಿತ್ ಅವರು, ಅದು ಹೇಗೆ ಕೆಲಸ ಮಾಡುತ್ತದೆ ಅಲ್ಲವೇ, ಒಬ್ಬ ಗ್ರಾಹಕನಾಗಿ ನನಗೆ ಅವರ ಆಹಾರ ಇಷ್ಟ. ಸರಳ ಅಕ್ಕಿ ವಸ್ತು ಎಷ್ಟು ದುಬಾರಿಯಾಗಿದೆ ಎಂದು ನಾನು ಮಾತನಾಡಿದ್ದೇನೆಯೇ, ನಾನು ಹೇಳಿಲ್ಲ.
ನಾನು ಅವರ ಬಿಲ್ಲಿಂಗ್ ಪ್ರಕ್ರಿಯೆಯಲ್ಲಿ ಒಂದು ಕರಾಳ ಮಾದರಿಯನ್ನು ಹೈಲೈಟ್ ಮಾಡಿದ್ದೇನೆ ಅಷ್ಟೇ ಎಂದಿದ್ದಾರೆ.

ಮತ್ತೊಬ್ಬ ನೆಟ್ಟಿಗರು ಅದು ತುಂಬಾ ದುಬಾರಿಯಾದ ಸ್ಥಳ, ಆಸನ ವ್ಯವಸ್ಥೆ ಇಲ್ಲ... ಜನರು ಅಲ್ಲೇ ಏಕೆ ಊಟ ಮಾಡುತ್ತಾರೆಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಅದಕ್ಕಾಗಿಯೇ ನಾನು ಟೇಕ್‌ಅವೇ ಆಯ್ಕೆ ಮಾಡಿಕೊಂಡೆ ಮತ್ತು ಅದರಲ್ಲಿ ದುಬಾರಿ ದರ ಇರುವುದನ್ನು ನೋಡಿದೆ ಎಂದು ರೋಹಿತ್ ಪ್ರತಿಕ್ರಿಯೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+