Amruthadhare Serial: ಟ್ವಿಸ್ಟ್ ಮೇಲೆ ಟ್ವಿಸ್ಟ್: ಮಲ್ಲಿ ಮದುವೆ ಬಳಿಕ ಹೊಸ ತಿರುವು, ಜೆಡಿ ಪ್ಲ್ಯಾನ್‌ಗೆ ಸುನೀಲ್ ವಿಲನ್
Amruthadhare Serial: ಕನ್ನಡಿಗರಿಗೆ ಆಪ್ತವಾಗಿರುವ ಅಮೃತಧಾರೆ ಧಾರಾವಾಹಿಯು ರೋಚಕಘಟ್ಟವನ್ನು ತಲುಪಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಶುರುವಾಗಿದೆ. ಈ ಧಾರಾವಾಹಿಯ ಸಖತ್ ಪವರ್‌ಫುಲ್ ಎಪಿಸೋಡ್‌ಗಳಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಇನ್ನು ಅಮೃತಧಾರೆ ಸೀರಿಯಲ್ ಪ್ರಾರಂಭದ ದಿನಗಳಲ್ಲಿ ವೀಕ್ಷಕರಿಗೆ ಅತ್ಯಂತ ಆಪ್ತವಾಗಿತ್ತು. ಆದರೆ ಸೀರಿಯಲ್‌ನ ಮುಖ್ಯ ಪಾತ್ರಧಾರಿಗಳಾದ ಗೌತಮ್ ಹಾಗೂ ಭೂಮಿಕ ದೂರವಾಗಿದ್ದು ಪ್ರೇಕ್ಷಕರಲ್ಲಿ ಬೇಸರವನ್ನುಂಟು ಮಾಡಿತ್ತು.
ಮಲ್ಲಿ ಮದುವೆ ಸಂಚಿಕೆಗಳು ಅಮೃತಧಾರೆ ಸೀರಿಯಲ್‌ನಲ್ಲಿ ಮತ್ತೊಂದು ರೋಚಕ ತಿರುವನ್ನು ಪಡೆದುಕೊಂಡಿದೆ. ಜೈದೇವ್ ಮಾಡುತ್ತಿರುವ ಪ್ಲ್ಯಾನ್‌ಗಳಿಗೆ ಇದೇ ಮೊದಲ ಬಾರಿ ಗೌತಮ್ ಅವರು ಸರಿಯಾದ ಟಕ್ಕರ್ ಕೊಟ್ಟಿದ್ದಾರೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಮಲ್ಲಿ ಮದುವೆ ವಿಚಾರದಲ್ಲಿ ಗೌತಮ್ ಹಾಗೂ ಭೂಮಿಕಾ ಅವರ ನಡುವೆ ಭಿನ್ನಾಭಿಪ್ರಾಯಗಳು ಶುರುವಾಗಿದ್ದವು. ಆದರೆ ಅಂತಿಮವಾಗಿ ಮಲ್ಲಿ ಮದುವೆ ಆಗಿದೆ. ಜೆಡಿ ಕೆಡಿತನಕ್ಕೆ ಮಲ್ಲಿ ಮತ್ತೊಮ್ಮೆ ಬಲಿಯಾಗಲಿದ್ದಾಳೆ ಇದು ಬೇಡವಾಗಿತ್ತು ಎಂದು ಪ್ರೇಕ್ಷಕರು ಅಂದುಕೊಳ್ಳುತ್ತಿದ್ದಾಗಲೇ ಮಲ್ಲಿ ತಿರುಗಿ ಬಿದ್ದಿರುವುದು ಮಸ್ತ್ ಆಗಿದೆ.

ಮಲ್ಲಿ ಜೀವನ ಹಾಳು ಮಾಡ್ತೀನಿ, ಅವಳು ಕಣ್ಣೀರಿನಲ್ಲೇ ಜೀವನ ಕಳೆಯಬೇಕು ಇದಕ್ಕೆ ಸುನೀಲ್ ಎಂಬ ಮುಗ್ಧ ಹುಡುಗನನ್ನು ಮಲ್ಲಿ ಹಿಂದೆ ಬಿಡಲಾಗಿತ್ತು. ಪ್ರೀತಿ ಮಾಡುವಂತೆ ನಾಟಕ ಮಾಡಿ ಇನ್ನೇನು ಮದುವೆ ಆಗಬೇಕು ಎನ್ನುವಾಗ / ತಾಳಿ ಕಟ್ಟುವ ಸಮಯದಲ್ಲಿ ಅಲ್ಲಿಂದ ಎಸ್ಕೇಪ್ ಆಗಬೇಕು ಎಂದ ಸುನಿಲ್‌ಗೆ ಹೇಳಲಾಗಿತ್ತು. ಆದರೆ ಈ ಹಂತದಲ್ಲಿ ಜೈದೇವ್ ಲೆಕ್ಕಾಚಾರಗಳು ತಲೆಕೆಳಗಾಗಿದೆ. ಜೈದೇವ್ ಪ್ಲ್ಯಾನ್ ಕಾರ್ಯರೂಪಕ್ಕೆ ಬರುವ ಮೊದಲೇ ಸುನಿಲ್ - ಜೈದೇವ ಒಡನಾಟ ಹಾಗೂ ಕುತಂತ್ರದ ಬಣ್ಣ ಗೌತಮ್ -ಭೂಮಿಕಾ ಮುಂದೆ ಬಟಾ ಬಯಲಾಗಿದೆ. ಆದರೆ ಜೈದೇವ್ ತಂತ್ರಕ್ಕೆ ಗೌತಮ್ ಪ್ರತಿತಂತ್ರ ಎಣೆದಿದ್ದು, ಅದು ಯಶಸ್ವಿಯೂ ಆಗಿದೆ. ಕೊನೆಗೂ ಸುನಿಲ್-ಮಲ್ಲಿ ಮದುವೆ ನಡೆದಿದೆ. ಇದಾದ ಮೇಲೆಯೇ ನಿಜವಾದ ರೋಚಕತೆ ಪ್ರಾರಂಭವಾಗಿದೆ. ಹಲವು ದಿನಗಳ ನಂತರ ಮಲ್ಲಿ - ಜೈದೇವ್ ಮುಖಾಮುಖಿಯಾಗಿದ್ದಾರೆ.'
ಜೈದೇವ್ - ಮಲ್ಲಿ ಮಾಸ್ ಡೈಲಾಗ್
ಇನ್ನು ಅಮೃತಧಾರೆಯಲ್ಲಿ ಜೈದೇವ್ ಹಾಗೂ ಮಲ್ಲಿ ಮಾಸ್ ಸಂಭಾಷಣೆ ಪ್ರೇಕ್ಷಕರಿಗೂ ಮಜಾ ನೀಡಿದೆ. ಮಲ್ಲಿ - ಸುನೀಲ್ ಮದುವೆ ಆಗಿದ್ದು, ಮಲ್ಲಿ ಮದುವೆಯ ನಂತರ ನೇರವಾಗಿ ಜೈದೇವ್ ಅವರ ಮನೆ ಪ್ರವೇಶ ಮಾಡಿದ್ದಾಳೆ. ಈ ನವ ದಂಪತಿಗಳನ್ನು ನೋಡಿದ ಕೂಡಲೇ ಜೈದೇವ್ ನಕ್ಕು ಸಂಭ್ರಮಿಸಿದ್ದಾನೆ. ಆದರೆ ಆ ನಗು ತುಂಬಾ ಸಮಯ ಉಳಿದಿಲ್ಲ.
ನನ್ನ ಮುಂದೆ ನೀನು ಕೊನೆಗೂ ಸೋತೆ ಅಂತ ಮಲ್ಲಿಯನ್ನು ಜೆಡಿ ಅವಮಾನಿಸಿದ್ದಾನೆ. ಆದರೆ ತನಗೆ ಏನು ಗೊತ್ತೇ ಇಲ್ಲ ಎನ್ನುವಂತೆ ಶಾಂತವಾಗಿಯೇ ಕೇಳಿರುವ ಮಲ್ಲಿ, ಸುನೀಲ್‌ಗೆ ನೀನು ನನ್ನ ಪ್ರೀತಿ ಮಾಡಿ ತಾನೆ ಮದುವೆ ಆಗಿದ್ದು ಅಂತ ಪ್ರಶ್ನೆ ಮಾಡಿದ್ದಾಳೆ. ಅಷ್ಟರಲ್ಲೇ ಜೆಡೆ ಮತ್ತೇ ನಗುವುದಿದೆ. ಇದರಿಂದ ದುಃಖದಿಂದ ಮಲ್ಲಿ ಕುಸಿದು ಬೀಳುವುದು ಇದೆ. ಆದರೆ ಮಲ್ಲಿಯ ಸಂಕಟವನ್ನು ನೋಡಿ ಎಂಜಾಯ್ ಮಾಡುತ್ತಿದ್ದ ಜೈದೇವ್‌ಗೆ ಶಾಕ್ ಎದುರಾಗಿದೆ. ನೋವಲ್ಲಿದ್ದ ಮಲ್ಲಿ ಕೂಡಲೇ ಕುಹಕ ನಗೆಯ ಮೂಲಕ ಜೆಡಿ ಅಂತ ನೋಡುತ್ತಾ, ಅಕ್ಕಾರೇ ಅಂತ ಕೂಗು ಹಾಕುವುದು ಇದೆ. ಇದಾದ ಮೇಲೆ ಗೌತಮ್ - ಭೂಮಿ ಎಂಟ್ರಿ ಹಾಗೂ ಮಾಸ್ ಡೈಲಾಗ್ ಪ್ರೇಕ್ಷಕರಿಗೆ ಹಬ್ಬದೂಟವನ್ನೇ ಕೊಟ್ಟಂತಾಗಿದೆ.
ಗೌತಮ್ ಎಂಟ್ರಿ ಕೊಟ್ಟಿದ್ದು, ಜೈದೇವ್‌ಗೆ ನಿನ್ನನ್ನ ನೀನು ತುಂಬಾ ಕಿಲಾಡಿ ಅನ್ಕೊಂಡಿದ್ಯಲ್ಲ..ದೊಡ್ಡ ಫೂಲ್ ಆಗ್ಬಿಟ್ಟಿಯಲ್ಲೊ ಮಲ್ಲಿಯ ನೆಮ್ಮದಿಗೆ ಏನಾದ್ರು ಕಲ್ಲು ಬಿದ್ದರೇ ಇನ್ಮೇಲೆ ವಾರ್ನಿಂಗ್ ಕೊಡೊದಿಲ್ಲ, ಫೈನಲ್ ಜಡ್ಜ್‌ಮೆಂಟ್ ಕೊಡ್ತೀನಿ ಅಂತ ಹೇಳಿರುವ ಮಾಸ್ ಡೈಲಾಗ್ ಇದೆ.












Click it and Unblock the Notifications