Viral Video: ಕಡಿಮೆ ಹಣದಲ್ಲಿ ಬದುಕೋದು ಹೇಗೆ ? ಬೆಂಗಳೂರು ಇಂಟರ್ನ್ ಹೇಳಿದ ಟ್ರಿಕ್‌ಗಳು

ಬೆಂಗಳೂರು ನಗರದಲ್ಲಿ ಬದುಕುವುದು ಒಂದು ವಿಭಿನ್ನ ಹಾಗೂ ವಿಶೇಷ ಅನುಭವ ಎಂದೆ ಹೇಳಬಹುದು. ಇದು ತುಂಬ ವೇಗವಾಗಿ ಬೆಳೆ ಬೆಳೆಯುತ್ತಿರುವ ಮಹಾನಗರವಾಗಿದ್ದು, ಇತ್ತೀಚಿನ ದಿನಗಳಲ್ಲಿ ಜೀವನ ವೆಚ್ಚದ ದೃಷ್ಟಿಯಿಂದ ಅತ್ಯಂತ ದುಬಾರಿಯಾಗುತ್ತಿದೆ. ವಿಶೇಷವಾಗಿ ವೃತ್ತಿ ಜೀವನವನ್ನು ಹೊಸದಾಗಿ ಆರಂಭಿಸಿರುವ ವೃತ್ತಿಪರರಿಗೆ ಮಾಸಿಕ ಖರ್ಚು-ವೆಚ್ಚಗಳನ್ನು ನಿಯಂತ್ರಿಸುವುದು ಒಂದು ದೊಡ್ಡ ಸವಾಲಿನ ಕೆಲಸವಾಗಿದೆ.

ಆದರೆ 22 ವರ್ಷದ ಇಂಟರ್ನ್‌ ಆಮಿ ಅರೋರಾ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಇದಕ್ಕೆ ಕಾರಣ ಇವರು ಹೇಳಿರುವ ಕೆಲವೊಂದು ವಿಷಯಗಳು ಚರ್ಚೆಗೆ ಕಾರಣವಾಗಿದೆ. ಆಮಿ ಅರೋರಾ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿರುವ ಪ್ರಕಾರ ತಿಂಗಳಿಗೆ ಕೇವಲ 18,000 ರೂಪಾಯಿಗಳಲ್ಲಿ ತಮ್ಮ ಎಲ್ಲಾ ಖರ್ಚುಗಳನ್ನು ನಿಭಾಯಿಸುತ್ತಿದ್ದಾರೆ.

Viral Video

ಬಾಡಿಗೆ ಖರ್ಚಿನಲ್ಲಿ ಜಾಣತನ

ಬೆಂಗಳೂರಿನಲ್ಲಿ ನಾವು ಸಂಪಾದಿಸಿದ ಹಣದಲ್ಲಿ ಹೆಚ್ಚಿನ ಹಣವು ಮನೆಯ ಬಾಡಿಗೆಗೆ ಹೋಗುತ್ತದೆ ಎಂಬುದು ಸರ್ವೆಸಾಮಾನ್ಯವಾಗಿದೆ. ಆದರೆ ಆಮಿ ಅರೋರಾ ಅವರು ಇದನ್ನು ತುಂಬಾ ಜಾಣತನದಿಂದ ನಿರ್ವಹಿಸಿದ್ದಾರೆ. ಆಮಿ ಅರೋರಾ ಅವರು ಪಿಜಿಯಲ್ಲಿ ವಾಸಿಸುತ್ತಿದ್ದು, ತಿಂಗಳಿಗೆ ಸುಮಾರು 7200 ರೂಪಾಯಿಯನ್ನು ಪಾವತಿಸುತ್ತಿದ್ದಾರೆ. ಅನಾವಶ್ಯಕವಾದ ಖರ್ಚುಗಳನ್ನು ಮಾಡದೆ ತುಂಬಾ ಸರಳವಾದ ಜೀವನ ಶೈಲಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಆಹಾರದಲ್ಲಿ ಸರಳತೆ

ಆಹಾರ: ಪ್ರತಿದಿನ ಹೊರಗಿನಿಂದ ಆಹಾರ ಆರ್ಡರ್ ಮಾಡುವ ಬದಲು ಅವರು ತಿಂಗಳಿಗೆ ಸುಮಾರು 3600 ರೂ, ವೆಚ್ಚದ ಊಟದ ಸೇವೆಯನ್ನು ಬಳಸುತ್ತಾರೆ. ಇದರಿಂದಾಗಿ ನಾವು ಅಹಾರಕ್ಕಾಗಿ ಮಾಡುವ ಅನಾವಶ್ಯಕವಾದ ಖರ್ಚುಗಳನ್ನು ಕಡಿಮೆ ಮಾಡಬಹುದು.

ಪ್ರಯಾಣಕ್ಕಾಗಿ ಖರ್ಚು

ವಾರಕ್ಕೆ ಎರಡು ಬಾರಿ ಆಫೀಸ್‌ಗೆ ಹೋಗುವ ಕಾರಣಕ್ಕಾಗಿ ಅವರ ಪ್ರಯಾಣದ ವೆಚ್ಚವು ತಿಂಗಳಿಗೆ ಸುಮಾರು 1600 ರೂ. ಆಗುತ್ತದೆ. ಇದು ಕಡಿಮೆ ಆದರು ಅದನ್ನು ಖರ್ಚಿನಲ್ಲಿ ಸೇರಿಸಬೇಕು.

ವೈಯಕ್ತಿಕ ಖರ್ಚು ಮತ್ತು ಮನರಂಜನೆ

ಆಮಿ ಕೇವಲ ಉಳಿತಾಯಕ್ಕೆ ಮಾತ್ರ ಒತ್ತು ನೀಡದೆ ತಮ್ಮ ಖುಷಿಗೂ ಹಣ ಮೀಸಲಿಟ್ಟಿದ್ದಾರೆ:
ಹೊರಗಿನ ಊಟ: 2000 ರೂ.
ಆನ್‌ಲೈನ್ ಖರೀದಿ: 2000 ರೂ.
ಇತರ ಅಗತ್ಯಗಳು: 1500 ರೂ.

ಬಜೆಟ್ ಸ್ನೇಹಿ ಮನರಂಜನೆ

ದುಬಾರಿ ಪ್ರವಾಸಗಳಿಗೆ ಹೋಗುವ ಬದಲು, ಸ್ನೇಹಿತರೊಂದಿಗೆ ಮನೆಯಲ್ಲೇ ಪಿಜ್ಜಾ ತಯಾರಿಸುವಂತಹ ಸರಳ ಹಾಗು ಬಜೆಟ್ ಸ್ನೇಹಿ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಳ್ಳುತ್ತಾರೆ. ಇದು ಖುಷಿಯನ್ನು ನೀಡುವುದರ ಜೊತೆಗೆ ಅನಾವಶ್ಯಕವಾದ ಖರ್ಚುಗಳನ್ನು ಕಡಿಮೆಮಾಡಬಹುದು ಎಂದು ಹೇಳುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ

ಈ ವಿಷಯವು ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ಆಮಿಯ ಶಿಸ್ತಿನ ಜೀವನವನ್ನು ಮೆಚ್ಚಿದರೆ, ಇನ್ನು ಕೆಲವರು ಬೆಂಗಳೂರಿನಂತಹ ನಗರದಲ್ಲಿ ಇಷ್ಟು ಕಡಿಮೆ ಹಣದಲ್ಲಿ ಬದುಕುವುದು ಅಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣ ಬಳಕೆದಾರರ ಪ್ರತಿಕ್ರಿಯೆ ಹೀಗಿವೆ

ನಿಮ್ಮ ಖರ್ಚುಗಳು ತುಂಬಾ ಸಮಂಜಸವಾಗಿವೆ ಎಂದು ಹೇಳಿದರೆ, ಇನ್ನೊಬ್ಬರು ನಾನು ಬೆಂಗಳೂರಿನಲ್ಲಿ ಇದಕ್ಕಿಂತ ಎರಡರಷ್ಟು ಖರ್ಚು ಮಾಡುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+