Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್‌ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ
Bengaluru House Rent: ಬೆಂಗಳೂರಿನಲ್ಲಿ ಮನೆ ಹುಡುಕುವುದೆಂದರೆ ಬಹುದೊಡ್ಡ ಸವಾಲು. ಬಾಡಿಗೆ - ಅಡ್ವಾನ್ಸ್ ಹಾಗೂ ನಮಗೆ ಬೇಕಾದ ಏರಿಯಾದಲ್ಲಿ ಮನೆ ಸಿಗುವುದು ಕಷ್ಟ ಕಷ್ಟ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮನೆ ಹುಡುಕುವವರಿಗೆ ಮತ್ತೊಂದು ಸವಾಲು ಎದುರಾಗಿದೆ. ಅದೇನೆಂದರೆ ನಾನ್‌ವೆಜ್ / ಮಾಂಸಾಹಾರಿಗಳಿಗೆ ಮನೆ ಕೊಡಲ್ಲ ಎನ್ನುವುದು ಆ ರೀತಿ ನೋಡಿದರೆ ಇದು ತೀರ ಹೊಸದಲ್ಲ. ಆದರೆ ಇಂದಿಗೂ ಇದು ಬದಲಾಗದೆ ಇರುವುದು. ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಿನಿಂದ ಬಾಡಿಗೆ ಮನೆ ಹುಡುಕಿದ ಅನುಭವದ ಬಗ್ಗೆ ಬೀಟಲ್ ಬುಕ್ ಶಾಪ್ ಮಾಲೀಕ ಹಾಗೂ ಹವ್ಯಾಸಿ ಬರಹಗಾರ ಧನಂಜಯ್ ಎನ್ ಅವರ ಅನುಭವ ಬರಹ ಇಲ್ಲಿದೆ.
ಕಳೆದ ಎರಡ್ ತಿಂಗಳಿಂದ ಮನೆ ಹುಡುಕ್ತಾ ಇದ್ವಿ. ಅಂಗಡಿಗೆ ಸಮೀಪ ಇರ್ಲಿ ಅಂತ ಬೆಂಗಳೂರಿನ ವಿಜಯನಗರದಲ್ಲೇ ಕಳೆದ ವರ್ಷದಿಂದ ಬಾಡಿಗೆ ಮನೆ ಮಾಡಿಕೊಂಡು ಇದ್ವಿ, ಅದು ಸಲ್ಪ ಚಿಕ್ಕ ಮನೆ, ಅದ್ರಲ್ಲೂ ಅಡುಗೆ ಮನೆ ತುಂಬಾ ಚಿಕ್ಕದು, ಗಾಳಿ ಬೆಳಕು ಸಮಸ್ಯೆ ಅಂತ ಬೇರೆ ಮನೆ ಹುಡುಕ್ತಾ ಇದ್ವಿ. ಒಂದು ಸ್ವಂತ ಮನೆ ಇರೋದ್ರಿಂದ, ಈ ಬಾಡಿಗೆ ಮನೆ ನಮ್ಮದು ಅನ್ನೋ ಕಲ್ಪನೆ ಬರಲೇ ಇಲ್ಲ, ಹಾಗಾಗಿ ಮನೆ ಹುಡುಕಿದ್ರೂ ಆದಷ್ಟು ಕಮ್ಮಿ ಬಾಡಿಗೆಯಲ್ಲೇ ಮಾಡಬೇಕು ಅನ್ನೋ ನಿರ್ಧಾರ. ಈ ವೆಜ್ ಪೀಪಲ್‌ಗಳ ಮಧ್ಯೆ ನಮ್ಮ ಬೇಡಿಕೆ ಮನೆ ಸಿಕ್ಕರೂ ಮರೀಚಿಕೆ ಆಗ್ತಾ ಇತ್ತು.

ನನ್ನ ಫ್ರೆಂಡ್ ಮಂಜು ಮತ್ತೆ ಅವರ ಮಾವನವರ ಕಡೆಯಿಂದ ಹೇಗೋ ಮೂರು ದಿನದ ಹಿಂದೆ, 2bhk 15000 ರೂ. ಬಾಡಿಗೆಗೆ ಮನೆ ಸಿಕ್ಕೇಬಿಡ್ತು, 2nd floor, 30/40 ಜಾಗದಲ್ಲಿ ಒಂದೇ ಮನೆ, ನಾವು ಮೂರು ಜನಕ್ಕೆ ವಿಶಾಲವಾಗಿ ಇದೆ. ಇಷ್ಟ ಆಯ್ತು, ಟೋಕನ್ ಅಡ್ವಾನ್ಸ್ ಮಾಡೇಬಿಟ್ವಿ. ಮುಖ್ಯ ವಿಷ್ಯ ಅಂದ್ರೆ. .. ಆ ಮನೆ ಓನರ್ ನಾನ್ ವೆಜ್‌ನವರು. ನಮ್ ಹತ್ರ ಅಡ್ವಾನ್ಸ್ ತಗೋಳೋಕೂ ಮೊದಲು, ಸಲ್ಪ ಮೆಲು ದನಿಯಲ್ಲಿ, ಎನ್ರಪ್ಪ ನೀವು ನಾನ್ ವೆಜ್ ತಿಂತೀರಾ. ನಾವ್ ತಿಂತೀವಿ ಕಣಪ್ಪ, ನಿಮಗೆ ತೊಂದ್ರೆ ಇಲ್ಲಾಂದ್ರೆ ಅಡ್ವಾನ್ಸ್ ಕೊಡಿ ಅಂದ್ರು. ನಾನು ಸಲ್ಪ ದೃಢ ದನಿಯಲ್ಲಿ, ಅದ್ಯಾಕ್ ಸಂಕೋಚ ಪಡ್ತೀರಾ ಅಮ್ಮಾ, ನೀವ್ ತಿಂದ್ರೆ ನಮಗೇನು ಸಮಸ್ಯೆ, ಅದೂ ಅಲ್ದೆ ನಾವು ವಾರದಲ್ಲಿ ಕನಿಷ್ಠ 4 ದಿನ ಆದ್ರೂ ತಿಂತೀವಿ, ಅದೆಲ್ಲ ಸಮಸ್ಯೆಯೇ ಅಲ್ಲ ಬಿಡಿ ಅಂದೇ.
ಬೆಂಗಳೂರು ಪ್ರೈಮ್ ಏರಿಯಾದಲ್ಲಿ ನಾಲ್ಕ್ ಫ್ಲೋರ್ ಮನೆ ಓನರ್ ಆದ್ರೂ, ಅವರ ಜಾಗಕ್ಕೆ ವೆಜ್ ನವರು ಬಾಡಿಗೆ ಬರೋಕೆ ಇಷ್ಟ್ ಸಂಕೋಚ ಪಟ್ಕೊಂಡು ಕೇಳೋ ಥರ ಇದೆ ಇನ್ನೂ. ನಾನೇನಾದ್ರೂ ಸಲ್ಪ ದುಡ್ಡು ಕಾಸು ಮಾಡಿ ಬಾಡಿಗೆ ಮನೆ ಬಿಟ್ರೆ, ಓನ್ಲಿ ಫಾರ್ ನಾನ್ ವೆಜಿಟೇರಿಯನ್ಸ್ ಅಂತ ಬೋರ್ಡ್ ಹಾಕ್ಬೇಕು ಅಂತ ಮನಸಲೇ ಅನ್ಕೊಂಡು ಬಂದೆ.
ಬರಹ: ಧನಂಜಯ್.ಎನ್












Click it and Unblock the Notifications