Kiara Advani: ವಿಜಯ್ ದೇವರಕೊಂಡ ಮೇಲೆ ಕಿಯಾರಾ ಅಡ್ವಾಣಿಗೆ ಕ್ರಶ್: ರಾಣಾ ಶೋನಲ್ಲಿ ಬಹಿರಂಗವಾದ ಹಳೆಯ ರಹಸ್ಯ, ವೈರಲ್
Kiara Advani: ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಅವರ ಬಗ್ಗೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಕೊಟ್ಟಿರುವ ಹೇಳಿಕೆಯು ಭಾರೀ ವೈರಲ್ ಆಗಿದೆ. ಇನ್ನು ವಿಜಯ್ ದೇವರಕೊಂಡ ಅವರಿಗೆ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ ಅವರೊಂದಿಗೆ ಈಗಾಗಲೇ ವಿವಾಹವಾಗಿದೆ. ಕಿಯಾರಾ ಅಡ್ವಾಣಿ ಅವರಿಗೂ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ವಿವಾಹವಾಗಿದೆ. ಈಗ ಅವರು ತಮ್ಮ ಹಳೆಯ ಕ್ರಶ್‌ನ ಬಗ್ಗೆ ಹೇಳಿದ್ದಾರೆ.
ಈಚೆಗೆ ನಟ ವಿಜಯ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರು ಅದ್ಧೂರಿಯಾಗಿ ಮದುವೆಯಾಗಿದ್ದರು. ಇನ್ನು ವಿಜಯ ದೇವರಕೊಂಡ ಅವರ ವೃತ್ತಿಜೀವನದಲ್ಲಿ ಅರ್ಜುನ್ ರೆಡ್ಡಿ ಚಿತ್ರವು ವಿಶೇಷವಾಗಿದ್ದು, ಅರ್ಜುನ್ ರೆಡ್ಡಿ ಸಿನಿಮಾಗಿಂತಲೂ ಮೊದಲು ಹಾಗೂ ನಂತರ ವಿಜಯ್ ದೇವರಕೊಂಡ ಅವರ ವೃತ್ತಿಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗಿವೆ. ಅಲ್ಲದೆ ಈ ಸಿನಿಮಾದಿಂದ ವಿಜಯ್ ದೇವರಕೊಂಡ ಮಾತ್ರವಲ್ಲ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರೂ ಸಹ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಈ ಸಿನಿಮಾ ರಾತ್ರೋರಾತ್ರಿ ಭಾರತೀಯ ಚಿತ್ರರಂಗಕ್ಕೆ ಇಬ್ಬರು ಸ್ಟಾರ್‌ಗಳನ್ನು ಪರಿಚಯಿಸಿತ್ತು. ಇನ್ನು ಅರ್ಜುನ್ ರೆಡ್ಡಿ ಸಿನಿಮಾಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಇದಲ್ಲದೆ, ಈ ಚಿತ್ರವು ಅನೇಕ ಸೆಲೆಬ್ರಿಟಿಗಳು ಮೆಚ್ಚಿದ ಸಿನಿಮಾ ಸಹ ಆಗಿದೆ.

ಅರ್ಜುನ್ ರೆಡ್ಡಿ ಸಿನಿಮಾವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಅಲ್ಲದೆ ಈ ಸಿನಿಮಾ ಅವರ ಮೊದಲ ಚಿತ್ರವೂ ಹೌದು. ಈ ಸಿನಿಮಾವನ್ನು ಹಿಂದಿಯಲ್ಲಿ ಕಬೀರ್ ಸಿಂಗ್ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಸಂದೀಪ್ ರೆಡ್ಡಿ ವಂಗಾ ಇದನ್ನು ಹಿಂದಿಯಲ್ಲಿಯೂ ನಿರ್ದೇಶಿಸಿದ್ದಾರೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಶಾಹಿದ್ ಕಪೂರ್ ಮಾಡಿದ್ದರು. ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದರು. ಆದಾಗ್ಯೂ, ಕಿಯಾರಾ ಅಡ್ವಾಣಿಗೆ ವಿಜಯ್ ದೇವರಕೊಂಡ ಮೇಲೆ ಕ್ರಶ್ ಆಗಿತ್ತು ಎನ್ನುವ ವಿಷಯ ಈಗ ವೈರಲ್ ಆಗುತ್ತಿದೆ.
Kiara Advani: ಈಗ ಬಹಿರಂಗವಾಗಿದ್ದೇಗೆ
ಟಾಲಿವುಡ್ ನಾಯಕ ರಾಣಾ ದಗ್ಗುಬಾಟಿ ಅವರು ಈ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ರಾಣಾ ದಗ್ಗುಬಾಟಿ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಕಿಯಾರಾ ಅಡ್ವಾಣಿ ಅವರು ಒಮ್ಮೆ ವಿಜಯ್ ದೇವರಕೊಂಡ ಮೇಲೆ ಕ್ರಶ್ ಹೊಂದಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಟಾಲಿವುಡ್ ಹೀರೋ ರಾಣಾ ದಗ್ಗುಬಾಟಿ ನಡೆಸಿಕೊಟ್ಟ ಚಿಟ್ ಚಾಟ್ ಕಾರ್ಯಕ್ರಮದಲ್ಲಿ ಕಿಯಾರಾ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ವಿಜಯ್ ದೇವರಕೊಂಡ ಅವರ ಬಗ್ಗೆ ತಮಗೆ ಸಾಫ್ಟ್ ಕಾರ್ನರ್ ಇದೆ ಎಂದು ಅವರು ಬಹಿರಂಗವಾಗಿ ಹೇಳಿದ್ದಾರೆ. "ನಾನು ವಿಜಯ್ ಅವರ ದೊಡ್ಡ ಅಭಿಮಾನಿ. ನನಗೆ ವಿಜಯ್ ತುಂಬಾ ಇಷ್ಟ," ಎಂದು ಕಿಯಾರಾ ತಮ್ಮ ಕ್ರಶ್ ಬಗ್ಗೆ ಹೇಳಿದ್ದಾರೆ.












Click it and Unblock the Notifications