Property: ಆಸ್ತಿದಾರರಿಗೆ 2026 ವರ್ಷ ಅದೃಷ್ಟ: ರಿಯಲ್ ಎಸ್ಟೇಟ್‌ನಲ್ಲಿ ಹೊಸ ಸಂಚಲನ, ಮನೆ ಮಾರಾಟ ಭರ್ಜರಿ ಹೆಚ್ಚಳ
Property: 2026ನೇ ವರ್ಷವು ಆಸ್ತಿದಾರರಿಗೆ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 2026ನೇ ಸಾಲಿನಲ್ಲಿ ಮನೆಗಳ ಮಾರಾಟ ಪ್ರಮಾಣವು ಭರ್ಜರಿ ಹೆಚ್ಚಳವಾಗಿದೆ. ಯುದ್ಧದ ಪರಿಣಾಮ ಹಾಗೂ ಡಾಲರ್‌ನ ಮುಂದೆ ರೂಪಾಯಿಯ ಮೌಲ್ಯವು ಕುಸಿತ ಕಾಣುತ್ತಿರುವುದು ಸೇರಿದಂತೆ ಹಲವು ಸವಾಲುಗಳ ನಡುವೆಯೂ ಮನೆ ಮಾರಾಟ ಪ್ರಮಾಣ ಹೆಚ್ಚಳವಾಗಿರುವುದು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಕಾರಾತ್ಮಕ ಪರಿಣಾಮವನ್ನು ತಂದೊಡ್ಡಿದೆ. ದೇಶದಾದ್ಯಂತ 2026ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಮನೆಗಳ ಮಾರಾಟ ಪ್ರಮಾಣವು ಶೇ 9ರಷ್ಟು ಹೆಚ್ಚಳವಾಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್ ವರದಿ ತಿಳಿಸಿದೆ.
ಇರಾನ್ Vs ಅಮೆರಿಕ, ಇಸ್ರೇಲ್ ನಡುವಿನ ಯುದ್ಧವು ಬರೋಬ್ಬರಿ ನಾಲ್ಕು ವಾರಗಳು ಮುಕ್ತಾಯವಾದ ಮೇಲೆಯೂ ಮುಂದುವರಿದಿದೆ. ಈ ಯುದ್ಧದ ಪರಿಣಾಮವು ವಿಶ್ವದಾದ್ಯಂತ ಆಗುತ್ತಿದೆ. ಯುದ್ಧದಿಂದಾಗಿ ಭಾರತದ ಮೇಲೂ ಸಹ ಇದರ ಪರಿಣಾಮವಾಗಿದೆ. ಇದರ ನಡುವೆ ರಿಯಲ್ ಎಸ್ಟೇಟ್‌ನ ಮೇಲೂ ಸಹ ಇದರ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅದೃಷ್ಟವಶಾತ್ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ರಿಯಲ್ ಎಸ್ಟೇಟ್‌ನ ಮೇಲೆ ಗಂಭೀರವಾದ ಪರಿಣಾಮ ಬೀರಿಲ್ಲ. ಅಚ್ಚರಿಯ ವಿಷಯವೆಂದರೆ ಬೆಂಗಳೂರು ಸೇರಿದಂತೆ ದೇಶದ ವಿವಿಧ ಮೆಟ್ರೋ ನಗರಗಳಲ್ಲಿ ಮನೆ ಮಾರಾಟ ಪ್ರಮಾಣವು ಗಣನೀಯವಾಗಿ ಹೆಚ್ಚಳವಾಗಿದೆ. ಹಾಗಾದರೆ ಯಾವ ನಗರದಲ್ಲಿ ಮನೆ ಮಾರಾಟ ಪ್ರಮಾಣ ಎಷ್ಟು ಹೆಚ್ಚಳವಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

2026ನೇ ಸಾಲಿನ ಜನವರಿಯಿಂದ ಮಾರ್ಚ್ 27ರವರೆಗೆ ದೇಶದ ಏಳು ಪ್ರಮುಖ ನಗರಗಳಲ್ಲಿ 1.01 ಲಕ್ಷ ಮನೆಗಳು ಮಾರಾಟವಾಗಿವೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್ ಸಂಸ್ಥೆಯು ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. 2025ನೇ ಸಾಲಿನಲ್ಲಿ ಮೊದಲ ತ್ರೈಮಾಸಿಕ ಅವಧಿಯಲ್ಲಿ 93,280 ಮನೆಗಳು ಮಾರಾಟವಾಗಿದ್ದವು. ಇದಕ್ಕೆ ಹೋಲಿಕೆ ಮಾಡಿದರೆ, ಈ ವರ್ಷವು ಮನೆಗಳ ಮಾರಾಟದಲ್ಲಿ ಶೇ 9ರಷ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಜನವರಿಯಿಂದ ಮಾರ್ಚ್ ಅಂತ್ಯದ ವರೆಗೆ ಮಾರಾಟವಾದ ಮನೆಗಳ ಹಣಕಾಸಿನ ಮೌಲ್ಯದಲ್ಲಿ 21.51 ಲಕ್ಷ ಕೋಟಿ ಆಗಿದೆ. ಇನ್ನು ಕಳೆದ ವರ್ಷ ಇದೇ ಅವಧಿಯಲ್ಲಿನ ಅಂಕಿ - ಅಂಶವನ್ನು ನೋಡುವುದಾದರೆ, ಶೇ 6ರಷ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಪೂರ್ಣ ಸಂತೋಷಪಡುವ ವಿಚಾರವೂ ಅಲ್ಲ
ಇನ್ನು ಬೆಂಗಳೂರು ಸೇರಿದಂತೆ ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಮನೆ ಮಾರಾಟ ಪ್ರಮಾಣವು ಹೆಚ್ಚಳವಾಗಿದೆ ಎಂದಾದರೂ ಯುದ್ಧದ ಕಾರಣಕ್ಕೆ ಮಾರ್ಚ್ ತಿಂಗಳಿನಲ್ಲಿ ಅಲ್ಪ ಪ್ರಮಾಣದ ಹಿನ್ನಡೆ ಆಗಿದೆ. ಮಾರ್ಚ್‌ನಲ್ಲಿ ವಿವಿಧ ಪ್ರಮುಖ ನಗರಗಳಲ್ಲಿ ಮನೆ ಮಾರಾಟ ಪ್ರಮಾಣವು ಅಲ್ಪ ಇಳಿಕೆಯಾಗಿದೆ. ಕಳೆದ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ 1.08 ಲಕ್ಷ ಮನೆಗಳು ಮಾರಾಟವಾಗಿತ್ತು. ಅಲ್ಲದೆ ಹಣಕಾಸಿನ ಮೌಲ್ಯ 41.60 ಲಕ್ಷ ಕೋಟಿ ಆಗಿತ್ತು. ಆದರೆ ಇದಕ್ಕೆ ಹೋಲಿಕೆ ಮಾಡಿ ನೋಡಿದರೆ, ಮಾರ್ಚ್ ತ್ರೈಮಾಸಿಕದಲ್ಲಿ ಮನೆಗಳ ಮಾರಾಟವು ಶೇ 7ರಷ್ಟು ಇಳಿಕೆ ಕಂಡಿದೆ. ಹಣಕಾಸಿನ ಮೌಲ್ಯವು ಶೇ 6ರಷ್ಟು ಕಡಿಮೆ ಆಗಿದೆ.
ವ್ಯತ್ಯಾಸಕ್ಕೆ ಕಾರಣವೇನು
ಮನೆಗಳ ಮಾರಾಟದಲ್ಲಿ ಏರಿಳಿತ ಕಂಡು ಬರುತ್ತಿರುವುದಕ್ಕೆ ಮೂರು ಮುಖ್ಯ ಕಾರಣಗಳಾಗಿವೆ. ಮೊದಲನೆಯದಾಗಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ, ಜಾಗತಿಕ ಅನಿಶ್ಚಿತತೆ ಹಾಗೂ ಡಾಲರ್‌ನ ಮುಂದೆ ರೂಪಾಯಿ ಮೌಲ್ಯವು ನಿರಂತರವಾಗಿ ಕುಸಿತ ಕಂಡು ಬರುತ್ತಿರುವುದು ಸಹ ಮನೆ ಮಾರಾಟ ಹಾಗೂ ರಿಯಲ್ ಎಸ್ಟೇಟ್‌ನ ಮೇಲೆ ಪರಿಣಾಮ ಬೀರುವುದಕ್ಕೆ ಕಾರಣವಾಗಿದೆ.












Click it and Unblock the Notifications