ಈಶ್ವರಪ್ಪ ಆಸ್ತಿ ಮೌಲ್ಯ ಏರಿಕೆಯಾಗಿದ್ದು ಕೇವಲ 2 ಕೋಟಿ ರೂಪಾಯಿ
Recommended Video

ಶಿವಮೊಗ್ಗ, ಏಪ್ರಿಲ್ 20: ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಕೆ.ಎಸ್. ಈಶ್ವರಪ್ಪ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದು, ತಮ್ಮ ಬಳಿ 6.41 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ತಿಳಿಸಿದ್ದಾರೆ.
ಅಕ್ರಮ ಆಸ್ತಿ ಸಂಪಾದನೆಯ ಆರೋಪವನ್ನು ಎದುರಿಸುತ್ತಿರುವ ಈಶ್ವರಪ್ಪ, ಗುರುವಾರ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
2013ರ ಚುನಾವಣೆ ವೇಳೆ ಈಶ್ವರಪ್ಪ ತಮ್ಮ ಆಸ್ತಿ 4.8 ಕೋಟಿ ಇದೆ ಎಂದು ಘೋಷಣೆ ಮಾಡಿದ್ದರು. 2008ರಲ್ಲಿ 3.47 ಕೋಟಿ ಆಸ್ತಿ ಮಾಹಿತಿ ಪ್ರಕಟಿಸಿದ್ದರು.
ಪ್ರಸ್ತುತ ತಮ್ಮ ಬಳಿ 2.46 ಕೋಟಿ ಮೌಲ್ಯದ ಚರಾಸ್ತಿ ಮತ್ತು 3.65 ಕೋಟಿ ಸ್ಥಿರ ಆಸ್ತಿ ಇರುವುದಾಗಿ ತಿಳಿಸಿದ್ದಾರೆ. ಅವರ ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ 92.31 ಲಕ್ಷ ಸ್ಥಿರಾಸ್ತಿ ಇದ್ದು 3.51 ಕೋಟಿ ಮೌಲ್ಯದ ಚರಾಸ್ತಿ ಇದೆ. ತಮ್ಮ ವಿರುದ್ಧ ನಾಲ್ಕು ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ ಎಂದು ವಿವರಿಸಿದ್ದಾರೆ.

ಆಸ್ತಿ-ಪಾಸ್ತಿ ವಿವರ
ಈಶ್ವರಪ್ಪ ಅವರು ತಮ್ಮ ಬಳಿ ಇರುವ ನಗದು ಹಣ ಕೇವಲ 50,000 ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಪಿತ್ರಾರ್ಜಿತವಾಗಿ ತಮಗೆ 30 ಲಕ್ಷ ಮೌಲ್ಯದ ಆಸ್ತಿ ದೊರೆತಿದ್ದು, ಸ್ವಯಾರ್ಜಿತವಾಗಿ 3.65 ಕೋಟಿ ಮೌಲ್ಯದ ಆಸ್ತಿ ಸಂಪಾದನೆ ಮಾಡಿರುವುದಾಗಿ ತಿಳಿಸಿದ್ದಾರೆ.
* 2 ಕೆಜಿ ಬೆಳ್ಳಿ, 300 ಗ್ರಾಂ ಬಂಗಾರದ ಒಟ್ಟು ಮೌಲ್ಯ 6.50 ಲಕ್ಷ
* ವಿವಿಧ ಬ್ಯಾಂಕ್ ಖಾತೆಗಳಲ್ಲಿ ಇರುವ ಮೊತ್ತ 31.61 ಲಕ್ಷ
* ವಿವಿಧೆಡೆ ಮಾಡಿರುವ ಹೂಡಿಕೆ ಮೊತ್ತ 2.03 ಕೋಟಿ
* ಎಲ್‌ಐಸಿ ಮೊತ್ತ 50 ಲಕ್ಷ

ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಆಸ್ತಿ
ಈಶ್ವರಪ್ಪ ಅವರ ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ 3.35 ಕೋಟಿ ಮೌಲ್ಯದ ಚರಾಸ್ತಿ ಹಾಗೂ 85 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಬಳಿ 30 ಸಾವಿರ ನಗದು ಇದೆ.
* ನಗದು 30,000
* 5 ಕೆಜಿ ಬೆಳ್ಳಿ, 500 ಗ್ರಾಂ ಬಂಗಾರದ ಒಟ್ಟು ಮೌಲ್ಯ 11.25 ಲಕ್ಷ
* ಬ್ಯಾಂಕ್ ಖಾತೆಯಲ್ಲಿರುವ ಹಣ 45,243
* ವಿವಿಧೆಡೆ ಮಾಡಿರುವ ಹೂಡಿಕೆ ಮೊತ್ತ 1.34 ಕೋಟಿ
* ಸ್ವಯಾರ್ಜಿತ ಆಸ್ತಿ ಮೌಲ್ಯ 85 ಲಕ್ಷ

ಸಾಲದ ವಿವರ
ಶಿವಮೊಗ್ಗ ವಿಜಯಾ ಬ್ಯಾಂಕ್ ಶಾಖೆಗೆ 58.54 ಲಕ್ಷ ಜಂಟಿ ಸಾಲ, ನಂದನ ಎಜುಕೇಷನ್ ಟ್ರಸ್ಟಿಗೆ 32 ಲಕ್ಷ, ಆರ್. ಶಾಲಿನಿ ಎಂಬುವವರಿಂದ ತೆಗೆದುಕೊಂಡಿರುವ 56.66 ಲಕ್ಷ ಕೈಗಡ ಹಾಗೂ ಏಮಾ ಟ್ರೇಡರ್ಸ್‌ನಲ್ಲಿ 9.61 ಲಕ್ಷ ಮೊತ್ತದ ಸಾಲದ ಹೊರೆ ಇದೆ ಎಂದು ತೋರಿಸಿದ್ದಾರೆ. ಪತ್ನಿ ಹೆಸರಿನಲ್ಲಿ 46.61 ಲಕ್ಷ ಸಾಲ ಇದೆ ಎಂದು ಹೇಳಿದ್ದಾರೆ.
* ನೀಡಿರುವ ಸಾಲ 23 ಲಕ್ಷ
* ತೀರಿಸಬೇಕಿರುವ ಸಾಲ 1.56 ಕೋಟಿ
* ವಿವಿಧೆಡೆ ನೀಡಿರುವ ಸಾಲ 1.88 ಕೋಟಿ (ಪತ್ನಿ ಹೆಸರಿನಲ್ಲಿ)

ಮನೆ, ನಿವೇಶನ ಹಾಗೂ ಸ್ಥಿರಾಸ್ತಿ ವಿವರ
ಶಿವಮೊಗ್ಗ ನಗರ ಮತ್ತು ಸುತ್ತಮುತ್ತ ಆಸ್ತಿಗಳನ್ನು ಖರೀದಿಸಿದ್ದು, ಕೆಲವು ಪತ್ನಿ ಜಯಲಕ್ಷ್ಮಿ ಅವರೊಂದಿಗೆ ಜಂಟಿ ಖಾತೆ ಹೊಂದಲಾಗಿದೆ. ಶಿವಮೊಗ್ಗದ ಬಿ.ಎಚ್. ರಸ್ತೆಯಲ್ಲಿ ಮಗ ಕೆ.ಇ. ಕಾಂತೇಶ್ ಹೆಸರಿನ ಜಂಟಿ ಖಾತೆಯಲ್ಲಿ ವಾಣಿಜ್ಯ ಕಟ್ಟಡಗಳಿವೆ. ಮಾಚೇನಹಳ್ಳಿಯಲ್ಲಿರುವ ನಾಲ್ಕು ಎಕರೆ ಭೂಮಿ ಸಹ ಕಾಂತೇಶ್ ಜತೆ ಜಂಟಿ ಖಾತೆಯಲ್ಲಿದೆ.
* ಶಿವಮೊಗ್ಗದ ನಿದಿಗೆ ಗ್ರಾಮದಲ್ಲಿ 1.31 ಎಕರೆ ಜಮೀನು
* ಶಿವಮೊಗ್ಗದ ಊರಗಡೂರು ಗ್ರಾಮದಲ್ಲಿ 1.05 ಎಕರೆ
* ಶಿವಮೊಗ್ಗದ ಸೋಮಯ್ಯ ಲೇಔಟ್‌ನಲ್ಲಿ 3880 ಚದರ ಅಡಿ ನಿವೇಶನ
* ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ 4.24 ಎಕರೆ
* ಅಶೋಕ ರಸ್ತೆಯಲ್ಲಿ 2,010 ಚದರ ಅಡಿಯ ವಸತಿ ಕಟ್ಟಡ
* ಮಲ್ಲೇಶ್ವರನಗರದಲ್ಲಿ 4,621 ಚದರ ಅಡಿ ವಿಸ್ತೀರ್ಣದ ವಸತಿ ಕಟ್ಟಡ












Click it and Unblock the Notifications