ಚುನಾವಣಾ ಆಯೋಗಕ್ಕೆ ಬೇಡ, ಜನರಿಗೂ ಬೇಡ, ರಾಜಕಾರಣಿಗಳಿಗೆ ಮಾತ್ರ ಬೇಕು!

Posted By:
Subscribe to Oneindia Kannada

ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ 'ಚಾಳಿ' ಭಾರತದ ರಾಜಕಾರಣದಲ್ಲಿ ಹೊಸದೇನಲ್ಲ. ನಮ್ಮ ಸಂವಿಧಾನದಲ್ಲಿ ಇದಕ್ಕೆ ಅವಕಾಶವಿದೆಯಾದರೂ, ಕೇವಲ ತಮ್ಮ ಮತ್ತು ಪಕ್ಷದ ಅನುಕೂಲಕ್ಕಾಗಿ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುವ ಇಂತಹ ಪದ್ದತಿಗೆ ಕಡಿವಾಣ ಬೀಳುವುದು ಬೇಡವೇ?

ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಒಂದೆಡೆಯಾದರೆ, ಲೋಕಸಭಾ ಚುನಾವಣೆಯ ವೇಳೆ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತು ಅಸೆಂಬ್ಲಿ ಚುನಾವಣೆಯ ವೇಳೆ ಲೋಕಸಭಾ ಚುನಾವಣೆಗೂ ಸ್ಪರ್ಧಿಸುವ ಹಲವು ಉದಾಹರಣೆಗಳೂ ಇವೆ. ಮುಂದಿನ ತಿಂಗಳು ನಡೆಯಲಿರುವ ಕರ್ನಾಟಕದ ಅಸೆಂಬ್ಲಿ ಚುನಾವಣೆಯಲ್ಲೂ ಇದು ನಡೆಯುವುದು ಈಗಾಗಲೇ ಸ್ಪಷ್ಟವಾಗಿದೆ.

ಡಿಬೇಟ್ : ಒಬ್ಬರು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಸರಿಯೇ?

ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿರುವುದರಿಂದ ಈ ವಿಚಾರ ಈಗ ಮತ್ತೆ ಮುನ್ನಲೆಗೆ ಬಂದಿದೆ. ಜೊತೆಗೆ, ಬಿಜೆಪಿ ಮತ್ತು ಜೆಡಿಎಸ್ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯ ಪ್ರಕಾರ ಮೂವರು ಸಂಸದರು ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಈ ಪಟ್ಟಿ ಇನ್ನೂ ಬೆಳೆಯಲೂ ಬಹುದು.

2008ರ ಅಸೆಂಬ್ಲಿ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ತಗುಲಿದ ಖರ್ಚು ಎಪ್ಪತ್ತು ಕೋಟಿ (ಅಧಿಕೃತವಾಗಿ), 2013ರಲ್ಲಿ ಈ ವೆಚ್ಚ ಮೂರು ಪಟ್ಟು ಹೆಚ್ಚಾಗಿತ್ತು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಇನ್ನೂರು ಕೋಟಿ ರೂಪಾಯಿ ಖರ್ಚು ಆಯೋಗಕ್ಕೆ ತಗುಲಿತ್ತು ಎಂದು ಅಂದಿನ ರಾಜ್ಯದ ಚುನಾವಣಾ ಆಯೋಗದ ಸಿಇಓ ಆಗಿದ್ದ ಅನಿಲ್ ಕುಮಾರ್ ಝೂ ಹೇಳಿದ್ದರು.

ಡಿಬೇಟ್ : ಎಸ್‌.ಎಂ.ಕೃಷ್ಣ ಕಾಂಗ್ರೆಸ್‌ಗೆ ಮರಳಬೇಕೆ?

ಇದೇ ರೀತಿ 2014ರ ಲೋಕಸಭಾ ಚುನಾವಣೆಗೆ ತಗುಲಿದ ಒಟ್ಟಾರೆ ಅಧಿಕೃತ ಖರ್ಚು (ಆಯೋಗದ ಎಸ್ಟಿಮೇಟ್ ಪ್ರಕಾರ) 3,500 ಕೋಟಿ. ಆಯೋಗ, 'ಚುನಾವಣಾ ಮಹತ್ವದ' ಜಾಗೃತಿ ಮೂಡಿಸುವ ಕಾರ್ಯಕ್ರಮ ಮತ್ತು ಬಹುತೇಕ ಎಲ್ಲಾ ಚುನಾವಣೆಗಳು ಇವಿಎಂ/ವಿವಿಪ್ಯಾಟ್ ಮೂಲಕ ನಡೆಸುತ್ತಿರುವುದರಿಂದ ಪ್ರತೀ ಚುನಾವಣೆಯ ಖರ್ಚು ದ್ವಿಗುಣ/ತ್ರಿಗುಣಗೊಳ್ಳುತ್ತಲೇ ಸಾಗುತ್ತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಇನ್ನು ಈ ಬಾರಿಯ ಚುನಾವಣೆಗೆ ತಗಲುವ ಖರ್ಚಿನ ಬಗ್ಗೆ ಇನ್ನೂ ಚುನಾವಣಾ ಆಯೋಗದಿಂದ ಅಧಿಕೃತ ಮಾಹಿತಿ ಬಂದಿಲ್ಲ.ಇದು ಖಂಡಿತ ಕಳೆದ ಚುನಾವಣೆಗಿಂತ ಶೇ. 40-50ರಷ್ಟು ಜಾಸ್ತಿ ಇರುವ ಸಾಧ್ಯತೆಯಿದೆ. ಪ್ರತೀ ಅಭ್ಯರ್ಥಿಯ ಖರ್ಚಿನ ಮಿತಿಯನ್ನು 28ಲಕ್ಷಕ್ಕೆ ಆಯೋಗ ನಿಗದಿಪಡಿಸಿದೆ (ಇದು ಯಾವ ಮೂಲೆಗೂ ಸಾಲುವುದಿಲ್ಲ ಎನ್ನುವುದು ಗೊತ್ತಿರುವ ವಿಚಾರವೇ). ಮುಂದೆ ಓದಿ

ಪ್ರತೀ ಲೋಕಸಭಾ ಕ್ಷೇತ್ರದ ಚುನಾವಣೆಗೆ ತಗಲುವ ಖರ್ಚು ಅಂದಾಜು ಸುಮಾರು 6.5ಕೋಟಿ

ಪ್ರತೀ ಲೋಕಸಭಾ ಕ್ಷೇತ್ರದ ಚುನಾವಣೆಗೆ ತಗಲುವ ಖರ್ಚು ಅಂದಾಜು ಸುಮಾರು 6.5ಕೋಟಿ

1952 ರಿಂದ 2014ರವರೆಗೆ ಲೋಕಸಭಾ ಚುನಾವಣೆಗೆ ಖರ್ಚಾದ ಅಧಿಕೃತ ಲೆಕ್ಕ ಹೀಗಿದೆ. 1952-10.45, 1957-5.9, 1977-23, 1980-54, 1989-154, 1991-359, 1996-597, 1998-666, 1999-880, 2009-1,400, 2014-3,500 ಕೋಟಿ ರೂಪಾಯಿಗಳು. ಕಳೆದ ಚುನಾವಣೆಯ ಖರ್ಚಿನಲ್ಲಿ, ಒಟ್ಟು ಲೋಕಸಭಾ ಸ್ಥಾನ ಸಂಖ್ಯೆಯನ್ನು (543) ಭಾಗಿಸಿದಾಗ, ಪ್ರತೀ ಲೋಕಸಭಾ ಕ್ಷೇತ್ರದ ಚುನಾವಣೆಗೆ ತಗಲುವ ಖರ್ಚು ಅಂದಾಜು ಸುಮಾರು ಆರೂವರೆ ಕೋಟಿ ರೂಪಾಯಿ.

ಮೋದಿ, ವಾರಣಾಸಿ ಮತ್ತು ವಡೋದರ ಕ್ಷೇತ್ರದಲ್ಲಿ ಸ್ಪರ್ಧಿಸಿ, 2ರಲ್ಲೂ ಗೆದಿದ್ದರು

ಮೋದಿ, ವಾರಣಾಸಿ ಮತ್ತು ವಡೋದರ ಕ್ಷೇತ್ರದಲ್ಲಿ ಸ್ಪರ್ಧಿಸಿ, 2ರಲ್ಲೂ ಗೆದಿದ್ದರು

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಾರಣಾಸಿ ಮತ್ತು ವಡೋದರ ಕ್ಷೇತ್ರದಲ್ಲಿ ಸ್ಪರ್ಧಿಸಿ, ಎರಡರಲ್ಲೂ ಗೆದಿದ್ದರು. ಇನ್ನು ಯೋಗಿ ಆದಿತ್ಯನಾಥ್ ಅವರು ಉತ್ತರಪ್ರದೇಶದ ಸಿಎಂ ಆದ ನಂತರ ಅವರು ಪ್ರತಿನಿಧಿಸುವ ಗೋರಖಪುರದಲ್ಲಿ ಉಪಚುನಾವಣೆ ನಡೆದಿತ್ತು.

ಹಾಲೀ ಮೂವರು ಸಂಸದರು ಚುನಾವಣಾ ಕಣಕ್ಕೆ

ಹಾಲೀ ಮೂವರು ಸಂಸದರು ಚುನಾವಣಾ ಕಣಕ್ಕೆ

ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಇದುವರೆಗೆ ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿಗಳ ಪ್ರಕಾರ ಹಾಲೀ ಸಂಸದರಾದ ಯಡಿಯೂರಪ್ಪ - ಶಿವಮೊಗ್ಗ, ಶ್ರೀರಾಮುಲು - ಬಳ್ಳಾರಿ, ಸಿ ಎಸ್ ಪುಟ್ಟರಾಜು - ಮಂಡ್ಯ, ಅಸೆಂಬ್ಲಿ ಚುನಾವಣೆಗೆ ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಇವರು ತಮ್ಮ ಕ್ಷೇತ್ರದಲ್ಲಿ ಗೆದ್ದರೆ, ಮತ್ತೆ ಮೂರು ಕಡೆ ಲೋಕಸಭಾ ಚುನಾವಣೆ ನಡೆಯಬೇಕಿದೆ.

ಸಿದ್ದರಾಮಯ್ಯ, ಪರಮೇಶ್ವರ್, ಕುಮಾರಸ್ವಾಮಿ

ಸಿದ್ದರಾಮಯ್ಯ, ಪರಮೇಶ್ವರ್, ಕುಮಾರಸ್ವಾಮಿ

ಇನ್ನು ರಾಜ್ಯ ಚುನಾವಣೆಯ ವಿಚಾರಕ್ಕೆ ಬಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ - ಚಾಮುಂಡೇಶ್ವರಿ, ಬಾದಾಮಿ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ - ಕೊರಟಗೆರೆ, ಪುಲಿಕೇಶಿನಗರ, ಜೆಡಿಎಸ್ ರಾಜ್ಯಧ್ಯಕ್ಷ ಕುಮಾರಸ್ವಾಮಿ - ಚನ್ನಪಟ್ಟಣ, ರಾಮನಗರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಇವರೆಲ್ಲಾ ಎರಡೂ ಕ್ಷೇತ್ರದಲ್ಲಿ ಗೆದ್ದರೆ ಮತ್ತೆ ಒಂದು ಕ್ಷೇತ್ರದಲ್ಲಿ ಉಪಚುನಾವಣೆ.

ರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವ ಬಗ್ಗೆ ಚಿಂತನೆ

ರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವ ಬಗ್ಗೆ ಚಿಂತನೆ

ಚುನಾವಣಾ ಆಯೋಗ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವ ಬಗ್ಗೆ ಚಿಂತನೆ ಏನೋ ನಡೆಸುತ್ತಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯ ವೇಳೆಯೊಳಗಾದರೂ ಇದು ಕಾರ್ಯರೂಪಕ್ಕೆ ಬಂದರೆ ಒಳ್ಳೆಯದು. ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿ, ಸೋಲುವ ಭಯಕ್ಕಾಗಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಉಪಚುನಾವಣೆಯ ಮೂಲಕ ಸಾರ್ವಜನಿಕರ ತೆರಿಗೆ ದುಡ್ಡು ಪೋಲಾಗುವ ಇಂತಹ ಚುನಾವಣಾ ಪದ್ದತಿಗೆ ಅಗತ್ಯವಾಗಿ ಕಡಿವಾಣ ಬೇಡವೇ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Candidates contesting from more than one seat in assembly and parliament election becoming more often. Isn't Election Commission of India should take dynamic step to stop this practice? A debate

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ