CBSE ಗಣಿತ ಪ್ರಶ್ನೆಪತ್ರಿಕೆಯ QR ಕೋಡ್ ಸ್ಕ್ಯಾನ್ ಮಾಡಿದ್ರೆ ಬರ್ತಿದೆ ಇಂಗ್ಲಿಷ್ ಹಾಡು: ಸಿಬಿಎಸ್‌ಇ ಸ್ಪಷ್ಟನೆ
ನವದೆಹಲಿ: ಸಿಬಿಎಸ್‌ಇ (CBSE) ಮಂಡಳಿಯ ಪರೀಕ್ಷೆಗಳು ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತವೆ. ಆದರೆ ಈ ಬಾರಿ 12ನೇ ತರಗತಿಯ ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆಯು ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಶ್ನೆಪತ್ರಿಕೆಯ ಮೇಲಿದ್ದ ಕ್ಯೂಆರ್ (QR) ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಯೂಟ್ಯೂಬ್ ವಿಡಿಯೋ ಪ್ಲೇ ಆಗಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಅಚ್ಚರಿಗೊಂಡಿದ್ದಾರೆ.
ಮಾರ್ಚ್ 9, 2026 ರಂದು ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (CBSE) 12ನೇ ತರಗತಿಯ ಗಣಿತ ಪರೀಕ್ಷೆಯನ್ನು ಆಯೋಜಿಸಿತ್ತು. ಪರೀಕ್ಷೆ ಮುಗಿದ ಬಳಿಕ ಪ್ರಶ್ನೆಪತ್ರಿಕೆಯಲ್ಲಿದ್ದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ವಿದ್ಯಾರ್ಥಿಗಳಿಗೆ ಅಚ್ಚರಿ ಕಾದಿತ್ತು. ಅಧಿಕೃತ ಮಾಹಿತಿಯ ಅಥವಾ ವೆರಿಫಿಕೇಶನ್ ಕೋಡ್ ಬದಲಾಗಿ, ಬ್ರಿಟಿಷ್ ಗಾಯಕ ರಿಕ್ ಆಸ್ಟೀನ್ ಅವರ 1987ರ ಪ್ರಸಿದ್ಧ ಇಂಗ್ಲಿಷ್ ಗೀತೆ 'ನೆವರ್ ಗೊನ್ನಾ ಗಿವ್ ಯೂ ಅಪ್' (Never Gonna Give You Up) ಯೂಟ್ಯೂಬ್ ವಿಡಿಯೋ ಓಪನ್ ಆಗುತ್ತಿತ್ತು.

ಇಂಟರ್ನೆಟ್ ಲೋಕದಲ್ಲಿ ಈ ರೀತಿಯಾಗಿ ಅಧಿಕೃತ ಲಿಂಕ್ ಎಂದು ನಂಬಿಸಿ, ಸಂಬಂಧವಿಲ್ಲದ ಇನ್ಯಾವುದೋ ಮ್ಯೂಸಿಕ್ ವಿಡಿಯೋ ಪ್ಲೇ ಆಗುವಂತೆ ಮಾಡುವುದನ್ನು 'ರಿಕ್‌ರೋಲ್' (Rickrolling) ಪ್ರ್ಯಾಂಕ್ ಎಂದು ಕರೆಯಲಾಗುತ್ತದೆ. ಇದೀಗ ಭಾರತದ ಅತಿದೊಡ್ಡ ಶಿಕ್ಷಣ ಮಂಡಳಿಯ ಪ್ರಶ್ನೆಪತ್ರಿಕೆಯಲ್ಲಿಯೇ ಇಂತಹದೊಂದು ಪ್ರ್ಯಾಂಕ್ ನಡೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ
ವಿದ್ಯಾರ್ಥಿಯೊಬ್ಬಳು ತನ್ನ ಗಣಿತ ಪ್ರಶ್ನೆಪತ್ರಿಕೆಯ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಹಾಡು ಪ್ಲೇ ಆಗುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದ್ದಳು. ಇದು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, "ಸಿಬಿಎಸ್‌ಇ ನಮ್ಮನ್ನು ಅಧಿಕೃತವಾಗಿ ರಿಕ್‌ರೋಲ್ ಮಾಡಿದೆ" ಎಂದು ವಿದ್ಯಾರ್ಥಿಗಳು ಮೀಮ್‌ಗಳನ್ನು ಹಂಚಿಕೊಂಡಿದ್ದಾರೆ. "ಪರೀಕ್ಷೆಗಿಂತ ಕ್ಯೂಆರ್ ಕೋಡ್ ಹೆಚ್ಚು ವೈರಲ್ ಆಗಿದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, "ಕ್ಯೂಆರ್ ಕೋಡ್ ಅನ್ನು ಭದ್ರತೆಗಾಗಿ ಬಳಸಲಾಗುತ್ತದೆ. ಆದರೆ ಅದರಲ್ಲಿಯೇ ಈ ರೀತಿ ಎಡವಟ್ಟಾದರೆ ಮಂಡಳಿಯನ್ನು ನಂಬುವುದಾದರೂ ಹೇಗೆ? ನಿಮ್ಮ ಕೈಯಲ್ಲಿ ವಿದ್ಯಾರ್ಥಿಗಳ ಭವಿಷ್ಯವಿದೆ ಎಂಬುದನ್ನು ಮರೆಯಬೇಡಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಬಿಎಸ್‌ಇ ಸ್ಪಷ್ಟನೆ
ವಿವಾದ ತಾರಕಕ್ಕೇರುತ್ತಿದ್ದಂತೆಯೇ ಎಚ್ಚೆತ್ತ ಸಿಬಿಎಸ್‌ಇ, ಮಾರ್ಚ್ 10ರಂದು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದೆ. "ಪ್ರಶ್ನೆಪತ್ರಿಕೆಯ ನೈಜತೆಯನ್ನು ಪರಿಶೀಲಿಸಲು ಮತ್ತು ಭದ್ರತೆಯ ದೃಷ್ಟಿಯಿಂದ ಕ್ಯೂಆರ್ ಕೋಡ್‌ಗಳನ್ನು ಮುದ್ರಿಸಲಾಗುತ್ತದೆ. ಆದರೆ ಕೆಲವು ಗಣಿತ ಪ್ರಶ್ನೆಪತ್ರಿಕೆಯ ಸೆಟ್‌ಗಳಲ್ಲಿ ಈ ಕೋಡ್ ಸ್ಕ್ಯಾನ್ ಮಾಡಿದಾಗ ಯೂಟ್ಯೂಬ್ ವಿಡಿಯೋಗೆ ಲಿಂಕ್ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಪ್ರಶ್ನೆಪತ್ರಿಕೆಯ ನೈಜತೆಯ ಬಗ್ಗೆ ಆತಂಕ ಸೃಷ್ಟಿಯಾಗಿದೆ" ಎಂದು ಮಂಡಳಿ ಒಪ್ಪಿಕೊಂಡಿದೆ.
"ಬೋರ್ಡ್ ಈ ಮೂಲಕ ಸ್ಪಷ್ಟಪಡಿಸುವುದೇನೆಂದರೆ, ಎಲ್ಲಾ ಪ್ರಶ್ನೆಪತ್ರಿಕೆಗಳು ನೈಜವಾಗಿವೆ ಹಾಗೂ ಸುರಕ್ಷಿತವಾಗಿವೆ. ಪರೀಕ್ಷೆಯ ಭದ್ರತೆಗೆ ಯಾವುದೇ ಚ್ಯುತಿ ಬಂದಿಲ್ಲ. ಈ ವಿಚಾರವನ್ನು ಮಂಡಳಿಯು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಸಿಬಿಎಸ್‌ಇ ಅಭಯ ನೀಡಿದೆ.
In today’s episode of how serious our examination conducting authorities are- presenting to you CBSE class 12th board maths paper which has a QR code that opens rickroll’s song on YouTube 🤷🏿♂️ pic.twitter.com/gvQcsVvGVp
— Nehr_who? (@Nher_who) March 9, 2026
ಸಿಬಿಎಸ್‌ಇ 2019 ರಿಂದ ಪ್ರಶ್ನೆಪತ್ರಿಕೆಗಳ ಮೇಲೆ ಕ್ಯೂಆರ್ ಕೋಡ್ ಮುದ್ರಿಸುವುದನ್ನು ಕಡ್ಡಾಯಗೊಳಿಸಿದೆ. 2018ರಲ್ಲಿ ಅರ್ಥಶಾಸ್ತ್ರ ಮತ್ತು ಗಣಿತ ಪ್ರಶ್ನೆಪತ್ರಿಕೆಗಳು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದ ನಂತರ, ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿತ್ತು. ಪ್ರತಿಯೊಂದು ಕ್ಯೂಆರ್ ಕೋಡ್‌ನಲ್ಲಿ ವಿಷಯ, ಪರೀಕ್ಷೆಯ ದಿನಾಂಕ, ಪ್ರಶ್ನೆಪತ್ರಿಕೆಯ ಸೆಟ್ ಮತ್ತು ಪ್ರಿಂಟಿಂಗ್ ಬ್ಯಾಚ್‌ನಂತಹ ಮಾಹಿತಿಯನ್ನು ಅಡಗಿಸಿಡಲಾಗಿರುತ್ತದೆ. ಇದು ಕೇವಲ ಅಧಿಕಾರಿಗಳ ಆಂತರಿಕ ಪರಿಶೀಲನೆಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ, ತಾಂತ್ರಿಕ ದೋಷವೋ ಅಥವಾ ಕಿಡಿಗೇಡಿಗಳ ಕೃತ್ಯವೋ ಎಂಬಂತೆ ಇಂಟರ್ನೆಟ್‌ನ ಅತಿ ಹಳೆಯ ಪ್ರ್ಯಾಂಕ್ ಒಂದು ಬೋರ್ಡ್ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಕಾಣಿಸಿಕೊಂಡಿರುವುದು ಇದೀಗ ಶಿಕ್ಷಣ ವಲಯದಲ್ಲಿ ಅಚ್ಚರಿ ಮೂಡಿಸಿದೆ.
-
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Property: ಆಸ್ತಿದಾರರಿಗೆ 2026 ವರ್ಷ ಅದೃಷ್ಟ: ರಿಯಲ್ ಎಸ್ಟೇಟ್ನಲ್ಲಿ ಹೊಸ ಸಂಚಲನ, ಮನೆ ಮಾರಾಟ ಭರ್ಜರಿ ಹೆಚ್ಚಳ -
SSLC ಪರೀಕ್ಷೆಗೆ ಹಾಜರಾತಿ ಶಾಕ್: ನಿಯಮ ಉಲ್ಲಂಘಿಸಿದ 35,000 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Kiara Advani: ವಿಜಯ್ ದೇವರಕೊಂಡ ಮೇಲೆ ಕಿಯಾರಾ ಅಡ್ವಾಣಿಗೆ ಕ್ರಶ್: ರಾಣಾ ಶೋನಲ್ಲಿ ಬಹಿರಂಗವಾದ ಹಳೆಯ ರಹಸ್ಯ, ವೈರಲ್ -
Amruthadhare Serial: ಟ್ವಿಸ್ಟ್ ಮೇಲೆ ಟ್ವಿಸ್ಟ್: ಮಲ್ಲಿ ಮದುವೆ ಬಳಿಕ ಹೊಸ ತಿರುವು, ಜೆಡಿ ಪ್ಲ್ಯಾನ್ಗೆ ಸುನೀಲ್ ವಿಲನ್ -
Nepal: ಇರಾನ್ ಯುದ್ಧದ ನಡುವೆ ದೊಡ್ಡ ಸುದ್ದಿಯಾಗದ ನೇಪಾಳದ ಹೊಸ ಜೆನ್ ಜೀ ಸರ್ಕಾರ: ಗೋಪಾಲಕೃಷ್ಣ ಕುಂಟಿನಿ ಬರಹ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ












Click it and Unblock the Notifications