ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗುವಿನ ಶತ್ರುಗಳು ಮನೆಯಲ್ಲೇ ಇದ್ದಾರೆ

By Staff
|
Google Oneindia Kannada News

Child abuse
ಬೇಕಾದರೆ ಹತ್ತು ಮಕ್ಕಳನ್ನು ಹೆರಬಹುದು, ಆದರೆ ಒಂದು ಮಗುವನ್ನು ಶ್ರದ್ಧೆಯಿಂದ ಬೆಳೆಸುವುದು ತುಂಬಾ ಕಷ್ಟ ಅಲ್ವಾ? ಇದು ಕಲಿಯುಗ ತಾಯೀ, ಕಲಿಯುಗಾ..

* ಧವಳ

ಮಗು ಮನೆಯ ನಂದಾದೀಪ. ಮಗು ಹುಟ್ಟಿದಾಗ ತನ್ನ ಹೆಣ್ತನ ಪೂರ್ಣ ಆಗುತ್ತದೆ ಎಂದು ವಿಶ್ವದಲ್ಲಿರುವ ಹೆಚ್ಚಿನ ಹೆಣ್ಣು ಮಕ್ಕಳ ನಂಬುಗೆ! ವಿಸ್ಮಯ,ಕಲ್ಪನೆ,ವಿಶ್ಲೇಷಣೆ ಏನೆ ಇರಲಿ ಆದರೆ ಮಗು ಮಹದಾನಂದ ತರುವ ಬದುಕಿನ ಭಾಗ. ಇದು ಎಲ್ಲರು ಒಪ್ಪಿಕೊಳ್ಳಬೇಕಾದ ಸಂಗತಿ!ತಾಯಿತಂದೆಗೆ ತಮ್ಮ ಕಂದ ಅಂದ್ರೆ ಪಂಚಪ್ರಾಣ. ಆದರೆ ಒಮ್ಮೊಮ್ಮೆ ದೂರ್ವಾಸ, ಜಮದಗ್ನಿ, ಹಿಟ್ಲರ್, ಸ್ಟಾಲಿನ್, ಲಾಡೆನ್ ರನ್ನು ಮೈಮೇಲೆ ಆವಾಹಿಸಿಕೊಂಡು ಮಗು ಎಲ್ಲಿಯೂ ಬದುಕದಂತೆ ಮಾಡಿಬಿಡ್ತಾರೆ. ಇದು ತಾಯ್ತಂದೆಯರ ಒನ್ ಅಮಾಂಗ್ ಡ ಬೆಸ್ಟ್ ಕ್ವಾಲಿಟಿ.

ಇವರು ಆ ಸಂದರ್ಭದಲ್ಲಿ ಮಾಡುವ ದಾಳಿಯಿಂದ ಮಗುವಿನ ಸ್ಥಿತಿಯು ಹೇಗಿರಬಹುದು ಅನ್ನುವುದು ಊಹಿಸಲು ಸಾಧ್ಯವಿಲ್ಲ.ತನ್ನ ನೋವು ದುಃಖ ಹೇಳಲಾಗದ ಪರಿಸ್ಥಿತಿಯಿಂದ ಆ ಕಂದ ಎಷ್ಟು ಹೆದರಿ ಬಳಲಿರುತ್ತೆ ಅನ್ನುವ ವಿವರಣೆ ಈಗ ಬೇಕಿಲ್ಲ !

* ಅಪ್ಪ ಅಮ್ಮನ ಕೋಪಕ್ಕೆ ಬಲಿಪಶುವಾದ ಮಕ್ಕಳು ತಮ್ಮ ಪ್ರಾಣವನ್ನೇ ತೆತ್ತಿರುವ ಅನೇಕ ಪ್ರಕರಣಗಳು ನಮ್ಮ ಕಣ್ಣಿನ ಮುಂದಿದೆ. ಜೀವ ಉಳಿದಿರುವ ಅನೇಕ ಕಂದಮ್ಮಗಳು ಶಾರೀರಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ವೈಕಲ್ಯ ಹೊಂದಿರುವ ಪ್ರಕರಣಗಳು ಇಲ್ಲದೆ ಇಲ್ಲ.ನಮಗೆ ತಿಳಿಯದಂತೆ ನಾವು ಮಾಡುವ ಕ್ರೌರ್ಯ ಎಂತಹುದು ಅನ್ನುವ ಬಗ್ಗೆ ಸ್ವಲ್ಪ ಗಮನ ಕೊಡೋಣ. ನಮ್ಮಲ್ಲಿರುವ ರಾಕ್ಷಸಿ ಪ್ರವೃತ್ತಿಯನ್ನು ದೂರ ಮಾಡಿಕೊಳ್ಳೋಣ.

* ದೈಹಿಕ ಹಿಂಸೆ :
ಗಂಡ ಹೆಂಡತಿ ಅಂದ ಮೇಲೆ ಜಗಳ ಕಾಮನ್! ಆದರೆ ಕೆಲವು ಸಂದರ್ಭಗಳಲ್ಲಿ ಪೋಷಕರ ದೈಹಿಕ ಮತ್ತು ಮಾನಸಿಕ ಸಮಸ್ಯೆಯು,ವಿಚ್ಛೇದನ ,ಸಂಗಾತಿಗಳಲ್ಲಿ ಒಬ್ಬರ ಮರಣ,ಆರ್ಥಿಕ ಸಮಸ್ಯೆ,ಕೌಟುಂಬಿಕ ಸಮಸ್ಯೆಗಳು ಮಕ್ಕಳ ಮೇಲೆ ತಮ್ಮ ಕೋಪ ತೋರಿಸುವುದಕ್ಕೆ ಕಾರಣ ಆಗುತ್ತದೆ.ಯಾಕೆ ಅಂದ್ರೆ ಮಕ್ಕಳೇ ತಾನೇ ಸುಲಭ ಸಿಗುವ ವಸ್ತುಗಳು. ಪರಿಣಾಮ ಕ್ರೂರವಾಗಿ ಅವರೊಂದಿಗೆ ವರ್ತಿಸುತ್ತಾರೆ ತಾಯ್ತಂದೆಯರು.

*ಮಕ್ಕಳು ಕಡಿಮೆ ಇಲ್ಲ : ಕೆಲವು ಮಕ್ಕಳ ವರ್ತನೆಯು ಸಹ ಪರಿಸ್ಥಿತಿ ವಿಕೋಪಕ್ಕೆ ಹೋಗುವುದಕ್ಕೆ ಕಾರಣ ಆಗುತ್ತದೆ.ದಿನವಿಡೀ ಅಳ್ತಾ ಇರೋದು, ವಿಸರ್ಜನಾ ಕಾರ್ಯಕ್ರಮ !ಸುಳ್ಳು ಹೇಳುವುದು,ಹಣ ಕದಿಯುವುದು,ಗದ್ದಲ ಗಲಾಟೆಯಲ್ಲಿ ಇರುವುದು ಎಷ್ಟು ಅಂತ ?!ಎಷ್ಟು ಅಂತ ಸಹಿಸ್ತಾರೆ,ಸಾಮಾನ್ಯವಾಗಿ ಮಕ್ಕಳ ಜೊತೆ ಹೆಚ್ಚಿನ ಒಡನಾಟ ತಾಯಿಯದು,ಆಕೆ ಎಲ್ಲದರ ನಡುವೆ ಈ ಸಮಸ್ಯೆಯನ್ನು ತಮ್ಮ ತಲೆ ಮೇಲೆ ಹೊರುವ ಪರಿಸ್ಥಿತಿ ಎದುರಾದಾಗ ಆಕೆಯ ಕಣ್ಣಿಗೆ ಕಾಣುವುದು ತಾನು ಹೆತ್ತ ಈ ಕಂದಮ್ಮ.ಈ ಕಾರಣದಿಂದ ತಾನೇ ಮಗು ತಂದೆಗಿಂತ ತಾಯಿಯ ಬಳಿಯಲ್ಲಿ ಹೆಚ್ಚಿನ ಕಜ್ಜಾಯ ಪಡೆಯೋದು?!

* ಹೀಗೆ ಅಸಹನೆ ತೋರ್ತಾರೆ :
ಕಪಾಳಕ್ಕೆ ಪಟಪಟ ಹೊಡೆಯುವುದು,ದೊಡ್ಡ ತುತ್ತು ಬಾಯಲ್ಲಿ ತುರುಕುವುದು, ಮುಷ್ಟಿ ಬಿಗಿ ಹಿಡಿದು ಗುದ್ದುವುದು,ಕಚ್ಚುವುದು, ಒದೆ ಮೇಲ್ ಒದೆ ! ಇದು ಮಕ್ಕಳಲ್ಲಿ ದೈಹಿಕ ಮಾತ್ರವಲ್ಲ ಮಾನಸಿಕ ತೊಂದರೆಯನ್ನು ಉಂಟುಮಾಡುತ್ತದೆ. ಕೆಲವರಂತೂ ಮಗುವನ್ನು ಗಟ್ಟಿಯಾಗಿ ಅವಚಿ ಹಿಡಿದು ತಮ್ಮ ಕೋಪ ತೋರಿಸ್ತಾರ. ಇದರಿಂದ ಶೇಕನ್ ಬೇಬಿ ಸಿಂಡ್ರೋಮ್ ಅನ್ನುವ ನಮಗೆ ಹೆಸರೇ ಗೊತ್ತಿಲ್ಲದ ಸಮಸ್ಯೆ ಮಗುವಿನಲ್ಲಿ ಉಂಟಾಗುತ್ತದೆ. ಇದು ಮೆದುಳಿನಲ್ಲಿ ರಕ್ತನಾಳಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ.ಸಾವು ಕೆಲವು ಸರ್ತಿ ಖಚಿತ ಆಗುತ್ತದೆ.ಬುದ್ಧಿ ಕೆಡುವ ಸಂಭವ ಇಲ್ಲದೆ ಇಲ್ಲ.ಕೆಲವು ಮಹಾನ್ ತಾಯ್ತಂದೆಯರು ಏನ್ ಮಾಡ್ತಾರೆ ಗೊತ್ತ ? ಮಗು ರಾತ್ರಿವೇಳೆಯಲ್ಲಿ ತಮ್ಮ ನಿದ್ರೆಗೆ ಭಂಗ ತರುತ್ತೆ ಅಂತ ಮಾದಕ ಪದಾರ್ಥವನ್ನು ಹಾಲು ಇಲ್ವೆ ಆಹಾರ ಪದಾರ್ಥಗಳಲ್ಲಿ ಮಿಕ್ಸ್ ಮಾಡಿ ಕುಡಿಸುತ್ತಾರೆ.ಇದು ಎಂತಹ ಪರಿಣಾಮ ಬಿರುತ್ತೆ?

ಇಂತವರಿಗೆ ಮಾನಸಿಕ ತಜ್ಞ ಬಳಿ ಕೌನ್ಸಿಲಿಂಗ್ ಕೊಡಿಸುವುದು ಬಿಟ್ರೆ ಮತ್ತೇನು ಪರಿಹಾರ ಇದೆ?ಕಂದಮ್ಮನನ್ನು ನಿರ್ಲಕ್ಷವಾಗಿ ನೋಡೋದು,ಪ್ರೀತಿ ತೋರದೆ ಇರುವುದು,ಹೆದರಿಸುವುದು,ಏನೆ ಹೇಳಿದರು ನಂಬದೆ ಇರುವುದು,ಕೌಟುಂಬಿಕ ಸಮಸ್ಯೆಗಳು ಇವೆಲ್ಲ ಮನದ ಮೇಲೆ ಪರಿಣಾಮ ಬೀರುತ್ತದೆ.ಕೆಲವು ತಾಯಿತಂದೆ ಮಗುವಿಗೆ ಊಟ ನೀರು ಸಹ ಕೊಡಲ್ಲ ಕಣ್ರೀ ಪಾಪ! ಮನೆಯೊಳಗೇ ಕೂಡಿ ಹಾಕಿ ಅಡ್ಡಾಡಲು ಹೊರಟು ಹೋಗ್ತಾರೆ,ಇವೆಲ್ಲ ಎಷ್ಟು ದುಃಖ ವಿಷಯ ಅಲ್ವೇ!

* ಹೆಣ್ಣುಮಕ್ಕಳೇ ಇತ್ತ ನೋಡಿ !

ಹೆಣ್ಣು ವೀಕರ್ ಸೆಕ್ಸ್ ಅಂತಾರೆ ತಿಳಿದವರು.ಆದ್ರೆ ಅದು ತಪ್ಪು ಅಂತ ಕೆಲವು ಅಧ್ಯಯನಗಳು ರುಜುವಾತು ಮಾಡಿದೆ ಗೊತ್ತ! ಆಗಷ್ಟೇ ಹುಟ್ಟಿದ ಹೆಣ್ಣು ಮಗುವಿಗಿಂತ ಗಂಡು ಮಗುವೆ ಹೆಚ್ಚು ದುರ್ಬಲ ಆಗಿರುತ್ತದೆಯಂತೆ.ಸುಮಾರು 66,000 ಮಕ್ಕಳನ್ನು ಅಧ್ಯಯನ ಮಾಡಿ ಈ ಅಂಶ ಕಂಡು ಹಿಡಿದಿದ್ದಾರೆ ತಜ್ಞರು. ಸಾಮಾನ್ಯವಾಗಿ ಗಂಡು ಪಿಂಡ ತಾಯಿಯ ಹೊಟ್ಟೆಯಲ್ಲಿ ಇದ್ದಾಗಿನಿಂದ ಮಗುವಾಗಿ ಹೊರಗೆ ಬರುವವರೆಗೂ ಅನೇಕ ರೀತಿಯ ಸಮಸ್ಯೆಗಳು ಎದುರಿಸ ಬೇಕಾಗುತ್ತದೆ. ಹೆರಿಗೆ ತೊಂದರೆ,ಸಿಜೇರಿಯನ್,ಆಪರೇಶನ್,ಹೀಗೆ ಅನೇಕ ಕಷ್ಟಕರ ಘಟ್ಟ ಗಂಡು ಎನ್ನುವ ಜೀವಿ ಎದುರಿಸುತ್ತದೆಯಂತೆ. ಇದನ್ನು ಕಂಡು ಹಿಡಿದವರು ಟೆಲ್ ಅವಿ ಯುನಿವರ್ಸಿಟಿಯ ಗಂಡು ತಜ್ಞರು!

ಆದರೆ ಉದರದಲ್ಲಿ ಇಟ್ಟುಕೊಂಡು,ಪ್ರತಿಯೊಂದು ಸಮಸ್ಯೆ ಸ್ವಯಂ ಎದುರಿಸಿ,ಬಳಿಕ ತನ್ನ ಪ್ರಾಣವನ್ನೇ ಪಣವಾಗಿಟ್ಟು,ಜೀವ ಕೊಡುವ ತಾಯಿಗೆ ಇವರ ಬಳಿ ಬೆಲೆ ಇಲ್ಲ ಅಂತಾಯಿತು, ಬಿಡಿ ನಾವ್ಯಾಕೆ ಬೇಸರ ಪಡಬೇಕು ಅವರವರ ಭಾವಕ್ಕೆ !ವಿಷಯ ಏನೆ ಆಗಿರಲಿ ಪೋಷಕರು ತಮ್ಮ ಉಸಿರಾದ ಮಗುವಿನ ಬಗ್ಗೆ ಸ್ವಲ್ಪ ಇನ್ನಷ್ಟು ಎಚ್ಚರವಾಗಿ ಇದ್ದು, ಜಾಗ್ರತೆಯಿಂದ ನೋಡಿಕೊಂಡರೆ ಮನೆ ಹಾಗೂ ಸಮಾಜಕ್ಕೆ ಒಳ್ಳೆಯದು ಇದು ನನ್ನ ಅಭಿಪ್ರಾಯ, ನಿಮ್ಮದು ?

ಔಚ್ : ಒಂದು ರಾತ್ರಿ ಮನೆಗೆ ಕಳ್ಳ ನುಗ್ಗಿದ.ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನೆಲ್ಲ ದೋಚಿ ಗಂಟು ಕಟ್ಟಿದ. ಅಮ್ಮ ಮಲಗಿದ್ದಳು. ಬಾಲಕ ಎದ್ದಿದ್ದ. "ನನ್ನ ಸ್ಕೂಲ್ ಬ್ಯಾಗನ್ನೂ ತೆಗೆದುಕೊಂಡು ಹೋಗು ಇಲ್ಲದಿದ್ದರೆ ಅಮ್ಮನ್ನ ಎಬ್ಬಿಸಿ ಬಿಡ್ತೀನಿ" ಬಾಲಕ ಕಳ್ಳನನ್ನು ಹೆದರಿಸಿದ. ಕಳ್ಳನಿಗೆ ಮಗುವನ್ನು ಎದುರಿಸುವುದು ಸಾಧ್ಯವಾಗಲಿಲ್ಲ.

Read and Circulate :

Daddy...it hurts
My name is Chris,
I am three,
My eyes are swollen..
I cannot see.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X