ಜಾತಿ ವಿಹೀನರ ಮನೆಯ ಜ್ಯೋತಿ ದಟ್ಸ್ ಕನ್ನಡ.ಕಾಂ

* ಶಾಮ್
ಪ್ರತಿದಿನ ತಪ್ಪದೆ ಭೇಟಿಕೊಡುವ ದಟ್ಸ್ ಕನ್ನಡ ಅಂತರ್ಜಾಲ ತಾಣದ ಆಪ್ತಮಿತ್ರರು(Loyal Visitors) ಆಗಾಗ ಬಂದುಹೋಗಿ ಮಾಡುವ ಬಂಧು-ಭಗಿನಿಯರು(unique visitors) ಅಂತರ್ಜಾಲ ಮಾರ್ಗದಲ್ಲಿ ಕನ್ನಡ ಹುಡುಕುತ್ತಾ ಬಾಯಾರಿ thatkskannada ಕೊಂಡಿಗೆ ಢಿಕ್ಕಿಹೊಡೆದು ಬಂದಿಳಿಯುವ ಹೊಸ ಗೆಳೆಯ ಗೆಳತಿಯರಿಗೆಲ್ಲ(New Visitor) ಹೊಸವರ್ಷ 2010ರ ಹೃತ್ಪೂರ್ವಕ ಶುಭಾಶಯಗಳು. ದಟ್ಸ್ ಕನ್ನಡ ಡಾಟ್ ಕಾಂ ಎಂದರೆ ಜಾತಿ ವಿಹೀನರ ಮನೆಯ ಕನ್ನಡ ಜ್ಯೋತಿ.
ಪಾಶ್ಚಿಮಾತ್ಯರ ಹೊಸ ಕ್ಯಾಲೆಂಡರ್ ಸಂವತ್ಸರದ ಮುನ್ನಾದಿನವಾದ ಇಂದು ನಮ್ಮ ಕನ್ನಡದ ಜಾಗತಿಕ ಹಳ್ಳಿಮನೆಗೆ ನಿಮಗೆ ಮತ್ತೊಮ್ಮೆ ಸ್ವಾಗತಕೋರಲು ಅತೀವ ಸಂತೋಷವಾಗುತ್ತಿದೆ. ಕಾರಣ ಸ್ಪಷ್ಟ. ನಮ್ಮ ಓದುಗರಿಗೆ ನಾವು ಕೊಡಬಹುದಾದ ಏಕಮೇವ ಬಳುವಳಿಯೆಂದರೆ ತ್ವರಿತಗತಿಯ ಮಾಹಿತಿ ಹಾಗೂ ತಾಣದಲ್ಲಿ ಸುಲಭ, ಸುಸೂತ್ರ ವಿಹಾರಕ್ಕೆ ಹೊರಡಲು ನಿಮಗೆ ಇನ್ನಷ್ಟು ಅನುಕೂಲವಾಗುವ ವಿನ್ಯಾಸ.
ಇಂದಿನಿಂದ ಅಂತಹ ಇನ್ನೊಂದು ಹೊಸ ನಮೂನೆಯ ವಿನ್ಯಾಸವನ್ನು ನಿಮ್ಮ ಕಣ್ಣೆದುರು ತೆರೆದಿಡುತ್ತಿದ್ದೇನೆ. ಕಾಲಕಾಲಕ್ಕೆ ತಾಣವನ್ನು ನವೀಕರಿಸುವ, ಅಲಂಕರಿಸುವ ಮತ್ತು ಕನ್ನಡ ಓದುಗರ ಚಕಚಕ ಓದುವ ಚಡಪಡಿಕೆಯನ್ನು ತೃಪ್ತಿಗೊಳಿಸುವ ಉದ್ದೇಶವೇ ನೂತನ ವಿನ್ಯಾಸದ ಉದ್ದೇಶ. ನಮ್ಮ ತಾಣ ಆರಂಭವಾದಾಗಿನಿಂದ ಇದುವರೆಗೆ ವರ್ಷಕ್ಕೊಮ್ಮೆಯಂತೆ ವಿನ್ಯಾಸ ಪುನರ್ರೂಪಿಸಬೇಕೆಂಬ ನಮ್ಮ ಸಂಕಲ್ಪ ಇವತ್ತು ಮತ್ತೊಮ್ಮೆ ಸಾಕಾರವಾಗಿದೆ. ಅಂದಹಾಗೆ, 2010 ದಟ್ಸ್ ಕನ್ನಡ ತಾಣಕ್ಕೆ ದಶಮಾನೋತ್ಸವ ವರ್ಷ. ಈ ಸಂದರ್ಭಕ್ಕೆ ನಾವು ನೀಡಿರುವ ದಟ್ಸ್ ಕನ್ನಡದ ಹೊಸ ವೆಬ್ ನೋಟ ನಿಮಗೆ ಆಸಕ್ತಿದಾಯಕವೂ, ತೃಪ್ತಿದಾಯಕವಾಗಿಯೂ ಇದೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದೇನೆ.
ವೇಷಗಳು ಬದಲಾಗಬಹುದು, ಸ್ವಭಾವ ಬದಲಾಗುವಂಥದಲ್ಲ. ಪ್ರಧಾನವಾಗಿ ಕನ್ನಡನಾಡಿನ ಆಗುಹೋಗುಗಳು, ಪ್ರಜಾಪ್ರತಿನಿಧಿ ವ್ಯವಸ್ಥೆಯ ನಮ್ಮ ಕರ್ನಾಟಕದ ಜನತಂತ್ರ, ನಿರಂತರ ಬದಲಾವಣೆಗೆ ಪಕ್ಕಾಗಿರುವ ಕಾಲಮಾನಗಳು ಹಾಗೂ ಕನ್ನಡ ಚಲನಚಿತ್ರ ಪ್ರೇಮಿಗಳಿಗೆ ಉದ್ಯಮ ಉತ್ಪತ್ತಿ ಮಾಡುವ ಕಸರಸದೌತಣಗಳ ಸಮಾರಾಧನೆ ಮಾಡುವುದೇ ನಮ್ಮ ಕಾಯಕ ಮತ್ತು ಆಕಾಂಕ್ಷೆ. ಈ ಕಾಯಕವನ್ನು ಇನ್ನಷ್ಟು ಆಸ್ಥೆಯಿಂದ ಮಾಡುವುದಕ್ಕೆ ನಿಮ್ಮ ಪ್ರೋತ್ಸಾಹ ಮತ್ತು ಪಾಲುದಾರಿಕೆಯನ್ನು ನಾನು ಮತ್ತು ನನ್ನ ತಂಡ ಆತಂಕ ಮತ್ತು ಕುತೂಹಲದಿಂದ ಎದುರು ನೋಡುತ್ತಲೇ ಇರುತ್ತೇವೆ.
ಹೊಸವರ್ಷದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶಾಂತಿ ಮತ್ತು ಸಂಪತ್ತು ಪ್ರಾಪ್ತವಾಗಲಿ ಎನ್ನುವುದು ನನ್ನ ಈ ನಾಲಕ್ಕು ವಾಕ್ಯಗಳಲ್ಲಿ ಅಡಗಿರುವ ಆಶಯ. ಪ್ರತಿಯಾಗಿ, ತಾವೂ ಕೂಡ ನಮಗೆ ಅದನ್ನೇ ಬಯಸುತ್ತೀರೆಂಬ ಭರವಸೆ ಇಟ್ಟುಕೊಳ್ಳೋಣವೆ?
-
LPG Price: ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ಭಾರೀ ಏರಿಕೆ: ಇಲ್ಲಿದೆ ಮಾರ್ಚ್ 1ರ ದರಪಟ್ಟಿ -
Gold Rate Today: ಆಭರಣ ಪ್ರಿಯರ ಗಮನಕ್ಕೆ: ಬೆಂಗಳೂರಿನಲ್ಲಿ ಇಂದು ಚಿನ್ನ-ಬೆಳ್ಳಿ ದರ ಹೇಗಿದೆ? ಇಲ್ಲಿದೆ ಮಾಹಿತಿ -
National Highway: ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿಯ ಮಹತ್ವದ ಅಪ್ಡೇಟ್ -
ಬೇರೆ ದೇಶಗಳಂತೆ ಭಾರತೀಯರಿಗೆ ಭಯದಿಂದ ನಿದ್ರಿಸುವ ಪರಿಸ್ಥಿತಿ ಅಲ್ಲ: ನಿವೃತ್ತ ಸೇನಾಧಿಕಾರಿ ಸುನೀಲ್ ಕುಮಾರ್ ಶಾಸ್ತ್ರಿ -
ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸಾರಡ್ಕ ಬರಹ -
Thalapathy Vijay: 400 ಕೋಟಿ ಆಸ್ತಿಗೆ ಒಡತಿ, ಲಂಡನ್ ಬೆಡಗಿ: ಯಾವ ಸಿನಿಮಾಗೂ ಕಡಿಮೆ ಇಲ್ಲ ದಳಪತಿ ವಿಜಯ್-ಸಂಗೀತಾ ಲವ್ ಸ್ಟೋರಿ -
Karnataka Weather: ಕರ್ನಾಟಕದ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬಿಸಿಲೂ ಹೆಚ್ಚು -
ಮಾರ್ಚ್ 3, 2026 – ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಕೇತುಗ್ರಸ್ತ ಮಹಾ ಚಂದ್ರಗ್ರಹಣ: ದ್ವಾದಶ ರಾಶಿಗಳ ಫಲಿತಾಂಶ -
ಕರ್ನಾಟಕದ 4 ರೈಲು ನಿಲ್ದಾಣ ಸೇರಿ 76 ಕಡೆ ಪ್ರಯಾಣಿಕರ ನಿಲುಗಡೆ ತಾಣ ನಿರ್ಮಾಣ, ಏನಿದರ ಪ್ರಯೋಜನ? -
ಅಮೆರಿಕಕ್ಕೆ ಸೆಡ್ಡು ಹೊಡೆದು 16,800 ಕೋಟಿ ರೂ ಒಪ್ಪಂದ ಕಡಿದುಕೊಂಡ ಆಂತ್ರೋಪಿಕ್: ಬೆಂಗಳೂರು ಟೆಕ್ಕಿ ಮೆಚ್ಚುಗೆ -
ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಹೇಗಿದ್ರು ನೋಡಿ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್ -
ಹರ್ಮೂಜ್ ಜಲಸಂಧಿ ಬಂದ್: ಭಾರತಕ್ಕೆ ತಟ್ಟಲಿದೆ ತೈಲ ದರದ ಬಿಸಿ, ಆರ್ಥಿಕತೆಗೂ ಭಾರಿ ಹೊಡೆತ












Click it and Unblock the Notifications