ನ್ಯಾಯನೀತಿಯಿಲ್ಲದ ಮುಷರಫ್ ನಾಡಿನಲ್ಲಿ ಮುಖ್ತಾರನ್ ಎಂಬ ಕುಸುಮಬಾಲೆ!
ನ್ಯೂಯಾಕ್ ಟೈಮ್ಸ್ ವರದಿಗಾರ ನಿಕೋಲಸ್ ಕ್ರಿಸ್ಟಾಫ್ ಅಕೆಯ ಸಂದರ್ಶನ ಪ್ರಕಟಿಸಿದ್ದರಿಂದ ಅಮೇರಿಕದಿಂದ 1.60 ಲಕ್ಷ ಡಾಲರ್ ಹಣ ಬಂದಿತು. ಅ ಹಣದಲ್ಲಿ ಮುಖ್ತಾರನ್ ಅಸ್ಪತ್ರೆ, ಹೈಸ್ಕೂಲ್ ತೆರೆದಳು. ಶಾಲಾ ಬಸ್ಸು, ಅಂಬುಲೆನ್ಸ್ ಖರೀದಿಸಿದಳು. ಅಕೆಯನ್ನು ನೋಡಲು ಭೇಟಿಯಾಗಲು ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಯಿತು.ಅಕೆ ಕೈಗೆತ್ತಿಕೊಂಡ ಯೋಜನೆಗಳಿಗೆ ಹಣ ಸಹಾಯ ಮಾಡಲು ಜನ ಮುಂದೆ ಬರತೊಡಗಿದರು.
ಸ್ವತಃ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಮುಖ್ತರ್‌ಳನ್ನು ವೈಟ್ ಹೌಸ್‌ಗೆ ಕರೆಸಿ ಸನ್ಮಾನ ಮಾಡಿದ. ನ್ಯೂಯಾರ್ಕ್‌ನಲ್ಲಿ ಮೇಯರ್ ಅಕೆಗೆಂದು ಭವ್ಯ ಔತಣ ಕೊಟ್ಟು ಸತ್ಕರಿಸಿದ. ಅಮೆರಿಕಕ್ಕೆ ಮುಖ್ತಾರನ್ ಪದೇ ಪದೇ ಪಯಣಿಸಲಾರಂಭಿಸಿದಳು. ಏನಿಲ್ಲ ವೆಂದರೂ ತಿಂಗಳಿಗೊಂದು ಅಮಂತ್ರಣ ಬರಲಾರಂಭಿಸಿತು. ಪ್ರತಿಷ್ಠಿತ ‘ಗ್ಲಾಮರ್’ ಪತ್ರಿಕೆ ವರ್ಷದ(2005) ಜಾಗತಿಕ ಮಹಿಳೆ ಎಂದು ಮುಖಪುಟ ಲೇಖನ ಮಾಡಿ ಗೌರವಿಸಿತು. ತೃತೀಯ ಜಗತ್ತಿನ ಶೋಷಿತ, ಅಶಿಕ್ಷಿತ ಮಹಿಳೆಯರ ಧೀಮಂತ ನಾಯಕಿ ಎಂಬಂತೆ ಅಮೆರಿಕದಲ್ಲಿ ಅಕೆಯನ್ನು ಕರೆಯಲಾರಂಭಿಸಿದರು.
ಅಷ್ಟೇ ಸಾಕಾಯಿತು, ಪಾಕ್ ಅಧ್ಯಕ್ಷನ ಕಣ್ಣು ಕೆಂಪಾಗಲು, ವಿದೇಶಗಳಲ್ಲಿ ತನಗೆ ಸಿಗದ ಪ್ರಚಾರ, ಜನಪ್ರಿಯತೆ ಈ ಯಕಃಶ್ಚಿತ್ ಹೆಂಗಸಿಗೆ ಸಿಗುತ್ತಿರುವುದನ್ನು ಕಂಡು ಮುಷರಫ್‌ಗೆ ಹೇಗಾಗಿರಬೇಡ? ಇದಕ್ಕೆ ಸರಿಯಾಗಿ ಅತನ ಭಟ್ಟ ಂಗಿಗಳು ‘ವಿದೇಶ ಗಳಲ್ಲೂ ಅಕೆ ಪಾಕ್ ಬಗ್ಗೆ ಕೆಟ್ಟ ಮಾತನಾಡುತ್ತಿದ್ದ್ದಾಳೆ. ದೇಶದ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾಳೆ. ನಿಮ್ಮ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದಾಳೆ’ ಎಂದು ತಿದಿಯೂದಿದರು. ಇದನ್ನು ಕೇಳಿ ಮುಷರಫ್ ಪಿತ್ತ ನೆತ್ತಿಗೇರಿತು.
ಪರಿಣಾಮವಾಗಿ ದೇಶಬಿಟ್ಟು ಹೋಗದಂತೆ ಛ್ಡಿಜಿಠಠಿ ್ಚಟ್ಞಠ್ಟಿಟ್ಝ ್ಝಜಿಠಠಿ ಗೆ ಅವಳನ್ನು ಸೇರಿಸಲು ಅದೇಶಿಸಿದ. ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಂಡ. ಇದನ್ನು ಮುಖ್ತಾರನ್ ಪ್ರತಿಭಟಿಸಿದಾಗ ದೊಡ್ಡ ಸುದ್ದಿಯಾಯಿತು. ಅಗ ಅಧಿಕಾರಿಗಳು ಅಕೆಯನ್ನು ಅಪಹರಿಸಿ ಗೃಹಬಂಧನದಲ್ಲಿರಿಸಿದರು. ಮುಖ್ತಾರನ್ ಸುಮ್ಮನಾಗಲಿಲ್ಲ. ಸರಕಾರದಿಂದ ಅಗುತ್ತಿರುವ ಕಿರುಕುಳವನ್ನು ಬಹಿರಂಗಪಡಿಸಿದಾಗ ಮೊದಲಿಗಿಂತ ಹೆಚ್ಚು ಗಟ್ಟಿಯಾದಳು, ಗಣ್ಯಳಾದಳು. ಅಧ್ಯಕ್ಷರಿಗೆ ತಲೆ ಕೆಟ್ಟು ಹೋಯಿತು.
ಮುಷರಫ್ ಬಲಗೈ ಬಂಟ ಬ್ರಿಗೇಡಿಯರ್ ಇಜಾಜ್ ಷಾ, ಮುಖ್ತಾರನ್ ಅಮೆರಿಕ ಪ್ರವಾಸದಲ್ಲಿರುವಾಗ ಜತೆಗಿರುವ ಅಮ್ನಾ ಬುಟ್ಟರ್‌ಳನ್ನು ಸಂಪರ್ಕಿಸಿ, ‘ನಿಮ್ಮಿಬ್ಬರ ನಡೆ-ನುಡಿಯನ್ನು ಗಮನಿಸುತ್ತಿದ್ದೇವೆ. ಪಾಕ್ ಗುಪ್ತದಳ ನಿಮ್ಮ ಹಿಂದೆ ಬಿದ್ದಿದೆ. ಒಂದು ವೇಳೆ ನೀವು ಸುಮ್ಮನಾಗದಿದ್ದರೆ, ಪಾಕ್ ಮಾನ ಹರಾಜು ಹಾಕುವುದನ್ನು ನಿಲ್ಲಿಸದಿದ್ದರೆ ಸಾಯಿಸುತ್ತೇನೆ. ಅಮೆರಿಕದ ಕರಿಯರಿಗೆ ನಾಲ್ಕು ಕಾಸು ಬಿಸಾಕಿದರೆ ನಿಮ್ಮನ್ನು ಮುಗಿಸುವುದು ದೊಡ್ಡ ಮಾತಲ್ಲ‘ ಎಂದ. ಮುಖ್ತಾರನ್ ಸೊಪ್ಪು ಹಾಕಲಿಲ್ಲ.
2005ರ ಕೊನೆಯಲ್ಲಿ ವಿಶ್ವಸಂಸ್ಥೆಯಲ್ಲಿ ಮುಖ್ತಾರನ್ ವಿಶೇಷ ಉಪನ್ಯಾಸ ನಿಗದಿಯಾಗಿತ್ತು. ಹೇಗಾದರೂ ಮಾಡಿ ಈ ಕಾರ್ಯಕ್ರಮ ರದ್ದುಪಡಿಸುವಂತೆ ಮುಷರಫ್ ಒತ್ತಡ ಹೇರಿದ. ಪಾಕ್ ರಾಯಭಾರಿ ಹಠಕ್ಕೆ ಬಿದ್ದು ಉಪನ್ಯಾಸ ರದ್ದಾಗುವಂತೆ ನೋಡಿಕೊಂಡ ಇದಾದ ಬಳಿಕ ಕಿರುಕುಳ ಜಾಸ್ತಿಯಾಯಿತು. ಅಕೆಯ ಫೋನ್ ಅನ್ನು ಕದ್ದಾಲಿಸಲಾರಂಭಿಸಿದರು. ಮುಷರಫ್ ಮುಖವಾಣಿಯಾಗಿರುವ ಪತ್ರಿಕೆಗಳಲ್ಲಿ ಅಕೆಯನ್ನು ‘ದೇಶ ದ್ರೋಹಿ, ಭಾರತದ ಏಜೆಂಟ್’ ಎಂದು ಬಿಂಬಿಸಲಾಯಿತು. ಪೋಲೀಸರು ಅಕೆಯ ಚಲನವಲನಗಳ ಮೇಲೆ ಕಣ್ಣಿಡಲಾರಂಭಿಸಿದರು. ಹೆಣ್ಣು ಮಗಳು ಎಲ್ಲವನ್ನೂ ಸಹಿಸಿಕೊಂಡಳು. ಹಾಗೆಂದು ಯಾವ ಕೆಲಸವನ್ನೂ ನಿಲ್ಲಿಸಲಿಲ್ಲ.
ಕೇವಲ ನಾಲ್ಕು ವರ್ಷಗಳಲ್ಲಿ ಎಲ್ಲರೂ ಅಚ್ಚರಿಪಡುವ ರೀತಿಯಲ್ಲಿ ಮುಖ್ತಾರನ್ ತನ್ನ ಶಾಲೆಗಳನ್ನು ಕಟ್ಟಿದ್ದಾಳೆ. ಅಲ್ಲಿ ಕಲಿತ ಹೆಣ್ಣು ಮಕ್ಕಳು ಡಾಕ್ಟರ್, ಎಂಜಿನಿಯರ್ ಅಗುವ ಕನಸು ಕಾಣುತ್ತಿದ್ದಾರೆ. ಇಂದು ಮುಖ್ತಾರನ್ ಮನೆಯನ್ನೊಮ್ಮೆ ನೋಡಬೇಕು. ಏನಿಲ್ಲ ವೆಂದರೂ ಅಕೆ ಅಲ್ಲಿ 50-60 ಮಂದಿ ಹೆಣ್ಣು ಮಕ್ಕಳು ಕಾಣುತ್ತಾರೆ.
ಗಂಡನಿಂದ ತಿರಸ್ಕೃತರಾದವರು, ಮೂಗು, ಮೊಲೆ ಕೊಯ್ಯಿಸಿಕೊಂಡವರು. ಅತ್ಯಾಚಾರಕ್ಕೊಳಗಾದವರು, ಶೋಷಿತರು, ಬಡ ಹೆಂಗಸರು ಮುಖ್ತಾರನ್ ಕೋಣೆಯಲ್ಲಿ ಅಶ್ರಮ ಪಡೆಯುತ್ತಾರೆ. ಅವರಿಗೆ ವಕೀಲ, ವೈದ್ಯರ ನೆರವನ್ನು ಒದಗಿಸಿ ಕೊಡುತ್ತಾಳೆ. ಅತ್ಯಾಚಾರಕ್ಕೊಳಗಾದ ಡಾ. ಶಾಜಿಯಾ ಖಾಲೀದ್‌ರಂಥವರಿಗೆ ಮುಖ್ತಾರನ್ ಸ್ಫೂರ್ತಿಯಾಗಿದ್ದಾಳೆ. ಇಂದು ಶಾಜಿಯಾ ಅತ್ಯಾಚಾರ ವಿರೋಧಿ ನಾಯಕಿ. ಇಂದು ಮುಖ್ತಾರನ್ ಎಲ್ಲೇ ಹೋದರೂ ಜನ ಬೃಹತ್ ಪ್ರಮಾಣದಲ್ಲಿ ಸೇರುತ್ತಿದ್ದಾರೆ.
ಅಕೆ ಕತೆ ಕೇಳುತ್ತಿದ್ದರೆ ಮುಖ್ತಾರನ್ ‘ಹೀರೋ’ಳಂತೆ ಭಾಸವಾಗುತ್ತಿದ್ದಳು!
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications