Virat Kohli: ಘನತೆಗೆ ತಕ್ಕ ಆಟ ಇಲ್ಲ; ವಿರಾಟ್ ಕೊಹ್ಲಿ ಬದಲಿಗೆ ಬೆಥೆಲ್ ಆಡಿಸುವ ಸೂಚನೆ ನೀಡಿದ್ರಾ ಭಾರತದ ಮಾಜಿ ಕ್ರಿಕೆಟಿಗ?
Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್‌ನಲ್ಲಿ ಸುಮಾರು 60ರ ಸರಾಸರಿ ಮತ್ತು 163ರ ಸ್ಟ್ರೈಕ್ ರೇಟ್‌ನಲ್ಲಿ 179 ರನ್ ಗಳಿಸಿದ್ದಾರೆ. ಆದರೂ ಸಹ, ಅವರ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹಿಂದೆ ಕೆಕೆಆರ್ ಪರ ಆಡಿದ್ದ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಿದ ಇನಿಂಗ್ಸ್ ಅನ್ನು "ಅತ್ಯಂತ ನಿಧಾನಗತಿಯದ್ದು" ಎಂದು ಟೀಕಿಸಿದ್ದಾರೆ. ಅಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 240 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದ ಪಂದ್ಯದಲ್ಲಿ, ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 50 ರನ್ ಗಳಿಸಿ ಔಟಾಗಿದ್ದರು.

ಕೊಹ್ಲಿ ವಿರುದ್ಧ ಅಸಮಾಧಾನ
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಅವರ ಆರಂಭಿಕ ಜೊತೆಗಾರ ಫಿಲ್ ಸಾಲ್ಟ್ ತಂಡಕ್ಕೆ ನೀಡಿದ ಉತ್ತಮ ಆರಂಭವನ್ನು ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಶ್ಲಾಘಿಸಿದ್ದಾರೆ. ಆದರೆ, ಆಕಾಶ್ ಚೋಪ್ರಾ ಮಾತ್ರ ಕೊಹ್ಲಿ ಅವರ ನಿಧಾನಗತಿಯ ಆಟದ ವಿರುದ್ಧ ಅಸಮಾಧನ ಹೊರಹಾಕಿದ್ದಾರೆ.
'ಘನತೆಗೆ ತಕ್ಕ ಆಟ ಆಡದ ಕೊಹ್ಲಿ'
"ವಿರಾಟ್ ಕೊಹ್ಲಿ ನಿಜಕ್ಕೂ ಅತ್ಯಂತ ನಿಧಾನಗತಿಯಲ್ಲಿ ರನ್ ಗಳಿಸಿದರು. ಪಂದ್ಯದ ಸನ್ನಿವೇಶವನ್ನು ಗಮನಿಸುವುದಾದರೆ, ನೀವು ಪಂದ್ಯ ಗೆದ್ದಿರುವುದರಿಂದ ಇದು ದೊಡ್ಡ ವಿಷಯ ಎನಿಸದಿರಬಹುದು. ಆದರೆ, ಕ್ರಿಕೆಟ್ ದೃಷ್ಟಿಕೋನದಿಂದ ನೋಡಿದರೆ, ಅದು ಅತ್ಯಂತ ನಿಧಾನಗತಿಯ ಇನಿಂಗ್ಸ್ ಆಗಿತ್ತು. ಇಂತಹ ಆಟ ಈ ಪಂದ್ಯಕ್ಕೆ ತಕ್ಕುದಾದುದಲ್ಲ ಮತ್ತು ಇದು ವಿರಾಟ್ ಅವರ ಘನತೆಗೆ ತಕ್ಕಂತದ್ದೂ ಅಲ್ಲ," ಎಂದು ಹೇಳಿದ್ದಾರೆ.
"ವಿರಾಟ್ ಕೊಹ್ಲಿ ಅವರು ಕೇವಲ 'ವೈಡ್ ಬಾಲ್'ಗಳಿಗಾಗಿ ಎರಡು ರಿವ್ಯೂಗಳನ್ನು ವ್ಯರ್ಥ ಮಾಡಿದರು. ಇದು ಅವರ ಆ ಕ್ಷಣದ ಮನಸ್ಥಿತಿಯನ್ನು ನನಗೆ ತೋರಿಸಿಕೊಟ್ಟಿತು. ಅಷ್ಟೇ ಅಲ್ಲದೆ, ಅವರು ಗಾಯದ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಕೇವಲ 36 ಎಸೆತಗಳಲ್ಲಿ 78 ರನ್ ಗಳಿಸಿದ ರೀತಿ ಇದೆಯಲ್ಲ, ಅದು ಇಂದಿನ ದಿನಗಳಲ್ಲಿ ಟಿ20 ಕ್ರಿಕೆಟ್ ಮತ್ತು ಮುಖ್ಯವಾಗಿ ಐಪಿಎಲ್ ಆಟದ ಶೈಲಿಯಾಗಿದೆ, ಎಂದು ಹೇಳಿದರು.
ಫಿಲ್ ಸಾಲ್ಟ್ ಹೊಗಳಿದ ಚೋಪ್ರಾ
"ಫಿಲ್ ಸಾಲ್ಟ್ ಅವರು ಆಕ್ರಮಣಕಾರಿ ಬ್ಯಾಟಿಂಗ್ ಆಡಿದರು. ಅವರ ಬದಲಿಗೆ ಜಾಕೋಬ್ ಬೆಥೆಲ್ ಅವರನ್ನು ಆಡಿಸಬಹುದೇ ಎಂದು ನಾನು ಯೋಚಿಸುತ್ತಿದ್ದೆ. ಆದರೆ ಸಾಲ್ಟ್ ತಮ್ಮ ಆಟದ ಮೂಲಕ 'ಸರ್ ಸುಮ್ಮನಿರಿ, ನಾನಿನ್ನೂ ಇಲ್ಲೇ ಇದ್ದೇನೆ ಎಂದು ಹೇಳಿದಂತಿದೆ. ಫಿಲ್ ಸಾಲ್ಟ್ ಅವರ ಬ್ಯಾಟಿಂಗ್ ಅತ್ಯುನ್ನತ ಮಟ್ಟದ್ದಾಗಿತ್ತು. ಏಕೆಂದರೆ ತಂಡಕ್ಕೆ ಉತ್ತಮ ಆರಂಭದ ಅಗತ್ಯವಿತ್ತು. ಅದು 100 ರನ್‌ಗಳಿಗೂ ಹೆಚ್ಚಿನ ಮೊತ್ತದ ಆರಂಭಿಕ ಜೊತೆಯಾಟವಾಗಿತ್ತು. ಫಿಲ್ ಸಾಲ್ಟ್ ಒಮ್ಮೆ ಹೊಡೆಯಲು ಶುರು ಮಾಡಿದರೆ, ಅವರು ಸ್ಟಾಪ್ ಮಾಡುವುದೇ ಇಲ್ಲ," ಎಂದು ಹೇಳಿದರು.
"ನಾಯಕ ರಜತ್ ಪಾಟಿದಾರ್ ಕೂಡ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರು ಕಳೆದ ಇಡೀ ವರ್ಷದಲ್ಲಿ 14 ಸಿಕ್ಸರ್‌ಗಳನ್ನು ಬಾರಿಸಿದ್ದರು. ಆದರೆ, ಈ ಬಾರಿ ಈಗಾಗಲೇ 18 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಕೇವಲ ನಾಲ್ಕು ಇನಿಂಗ್ಸ್‌ಗಳಲ್ಲಿ ಇಂತಹ ಭಯಾನಕ ವೇಗವನ್ನು ಅವರಿಂದ ನಾವು ನೋಡುತ್ತಿದ್ದೇವೆ," ಎಂದು ಹೊಗಳಿದರು. ಅಲ್ಲದೆ, ಪಾಟಿದಾರ್ ನಾಯಕತ್ವದ ಜೊತೆ ಬ್ಯಾಟಿಂಗ್ ಕೂಡ ಕೂಡ ಚೆನ್ನಾಗಿ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅವರು ಭಾರತದ ತಂಡಕ್ಕೆ ಮರಳಲಿದ್ದಾರೆ," ಎಂದು ಚೋಪ್ರಾ ಭವಿಷ್ಯ ನುಡಿದಿದ್ಧಾರೆ. ಒಟ್ಟಿನಲ್ಲಿ ಹೇಳುವುದಾದರೆ, ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಅವರ ಬದಲಿಗೆ ಜಾಕೋಬ್ ಬೆಥೆಲ್ ಅವರಿಗೆ ಅವಕಾಶ ನೀಡಿ ಎಂದು ಹೇಳಿದಂತಿದೆ.
-
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್‌ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
Praful Hinge: ಒಂದೇ ರಾತ್ರಿಯಲ್ಲಿ ಚೇಂಜ್ ಆಯ್ತು ಪ್ರಫುಲ್ ಲಕ್, 3 ಲಕ್ಷ ದಾಟಿದ ಇನ್ಸ್ಟಾಗ್ರಾಂ ಫಾಲೋವರ್ಸ್ -
ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಮುಳುಗಿದ ಅನುಷ್ಕಾ-ಅನನ್ಯಾ ಬಿರ್ಲಾ: ನೆಟ್ಟಿಗರ ಮನಗೆದ್ದ ಆ ಹ್ಯಾಂಡ್ಶೇಕ್ ವಿಡಿಯೋ -
ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ಬೌಲರ್ಗಳಿಗೆ ಬೆವರಿಳಿಸಿದ ಆರ್‌ಸಿಬಿ ಫಿಲ್ ಸಾಲ್ಟ್ -
Virat Kohli: ವಿರಾಟ್ ಕೊಹ್ಲಿಗೆ ಕನ್ನಡ ಬರಲ್ಲ - ನಾರ್ಥಿಗಳು ಯಾಕೆ ಕಲಿಯಬೇಕು: ತುಳು ಬೆಂಬಲಿತರ ಪ್ರಶ್ನೆ, ಕನ್ನಡಿಗರ ಆಕ್ರೋಶ -
ಆಶಾ ಭೋಸ್ಲೆಗೆ ಮುಂಬೈ ಇಂಡಿಯನ್ಸ್-ಆರ್‌ಸಿಬಿ ಪಂದ್ಯದಲ್ಲಿ ಗೌರವ ನಮನ, ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದ ಆಟಗಾರರು -
ವಾಂಖೆಡೆಯಲ್ಲಿ ಆರ್‌ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಮೈದಾನದಲ್ಲಿ ಲೆಜೆಂಡ್ ಬೌಲರ್ಗಳ ಮೇಲೆ ಸವಾರಿ, ಬಸ್ನಲ್ಲಿ ಸ್ವಿಚ್, ಲೈಟ್, ಎಸಿ ಜೊತೆ ಕಿಲಾಡಿ ಆಟ; ವೈಭವ್ ವಿಡಿಯೋ ಭಾರಿ ವೈರಲ್ -
IPL 2026: ಎಸ್ಆರ್ಎಚ್-ಆರ್ಆರ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಇಶಾನ್ ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್, ಪ್ರಫುಲ್ ಹಿಂಗೆ, ಸಾಕಿಬ್ ಹುಸೇನ್ ಮಾರಕ ಬೌಲಿಂಗ್ ದಾಳಿಗೆ ಮಣಿದ ಆರ್ಆರ್ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್











Click it and Unblock the Notifications