Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral

ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ನಡೆದ ಫ್ಲ್ಯಾಶ್ ಮಾಬ್ (flash mob) ಕಾರ್ಯಕ್ರಮದಲ್ಲಿ ಪ್ರೊಫೆಸರ್‌ ಒಬ್ಬರು ವಿದ್ಯಾರ್ಥಿಗಳ ಜೊತೆ ಸೇರಿ ಭರ್ಜರಿ ಸ್ಟೆಪ್ಸ್ ಹಾಕಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಪ್ರೊಫೆಸರ್ ಅವರ ಡಾನ್ಸ್ ಕೌಶಲ್ಯ ಹಾಗೂ ಹುಮ್ಮಸ್ಸಿಗೆ ನೆಟ್ಟಿಗರು ಮತ್ತು ವಿದ್ಯಾರ್ಥಿಗಳು ಫಿದಾ ಆಗಿದ್ದು, ಎಲ್ಲರ ಮನಗೆಲ್ಲುವಲ್ಲಿ ಈ ವಿಡಿಯೋ ಯಶಸ್ವಿಯಾಗಿದೆ.

ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಗಣಿತ ವಿಭಾಗದ ಪ್ರೊಫೆಸರ್ ಆಗಿರುವ ಪ್ರಿಯದರ್ಶಿನಿ ಶಿವರಾಮು ಅವರೇ ಈ ವೈರಲ್ ವಿಡಿಯೋದ ರೂವಾರಿ. ಕಾಲೇಜಿನ ಆವರಣದಲ್ಲಿ ನಡೆದ ಫ್ಲ್ಯಾಶ್ ಮಾಬ್‌ ಕಾರ್ಯಕ್ರಮದಲ್ಲಿ ಪ್ರಿಯದರ್ಶಿನಿ ಅವರು ಸೂಪರ್ ಹಿಟ್ ಕ್ಲಾಸಿಕ್ ಹಾಡಾದ 'ಮುಕ್ಕಾಲ ಮುಕ್ಕಾಬುಲ' ಟ್ರ್ಯಾಕ್‌ಗೆ ಅತ್ಯದ್ಭುತವಾಗಿ ಹೆಜ್ಜೆ ಹಾಕಿದ್ದಾರೆ. ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುತ್ತಾ, ಕೇಕೆ ಹಾಕುತ್ತಾ ಪ್ರೊಫೆಸರ್ ಡಾನ್ಸ್‌ಗೆ ಹುರಿದುಂಬಿಸುತ್ತಿರುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು.

Bengaluru

ಈ ವಿಡಿಯೋವನ್ನು ಪ್ರಿಯದರ್ಶಿನಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಇದು ಬಹುದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪ್ರೊಫೆಸರ್ ಅವರ ಹುಮ್ಮಸ್ಸು ಮತ್ತು ಶಕ್ತಿಶಾಲಿ ಡಾನ್ಸ್ ಸ್ಟೆಪ್ಸ್‌ಗೆ ಇಂಟರ್ನೆಟ್ ಬಳಕೆದಾರರು ಮೆಚ್ಚುಗೆಯ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಕಾಮೆಂಟ್‌ಗಳ ವಿಭಾಗದಲ್ಲಿ ವಿದ್ಯಾರ್ಥಿಗಳು ಹಾಗೂ ನೆಟ್ಟಿಗರು ಪ್ರೀತಿಯಿಂದ ಅವರನ್ನು ಹೊಗಳಿದ್ದಾರೆ.

"ಮ್ಯಾಮ್, ನೀವು ಯಾವಾಗಲೂ ಹೀಗೆಯೇ ರಾಕ್ ಮಾಡುತ್ತೀರಿ," ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು, "ಯಾವಾಗಲೂ ಅದೇ ಎನರ್ಜಿಯನ್ನು ಹೊಂದಿರುತ್ತೀರಿ ಮತ್ತು ಅದನ್ನೇ ಎಲ್ಲರಿಗೂ ಹಂಚುತ್ತೀರಿ ಮ್ಯಾಮ್. ನಿಮ್ಮ ಶಕ್ತಿ ನಿಜಕ್ಕೂ ಸೋಂಕಿನಂತೆ ಹರಡುತ್ತದೆ (contagious)," ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವರು, "ಮ್ಯಾಮ್ ನೀವು ಅದ್ಭುತವಾಗಿ ಡಾನ್ಸ್ ಮಾಡಿದ್ದೀರಿ," "ನೀವು ಆಲ್‌ರೌಂಡರ್ ಮ್ಯಾಮ್," "ಯಾವಾಗಲೂ ಫೈರ್ ಮ್ಯಾಮ್," ಎಂದು ಬಣ್ಣಿಸಿದ್ದಾರೆ.

ಕೆಲವು ಬಳಕೆದಾರರು ಈ ಐಕಾನಿಕ್ ಡಾನ್ಸ್ ಸ್ಟೆಪ್ಸ್‌ಗಳನ್ನು ಸ್ವಲ್ಪ ವಿಭಿನ್ನವಾಗಿ ವಿಶ್ಲೇಷಣೆ ಮಾಡಿದ್ದಾರೆ. ಪ್ರೊಫೆಸರ್ ಅವರ ಎನರ್ಜಿ ಹಾಗೂ ಹೆಜ್ಜೆಗಳನ್ನು ಕರಾಟೆಯಂತಹ ಮಾರ್ಷಲ್ ಆರ್ಟ್ಸ್‌ಗೆ ಹೋಲಿಸಿದ್ದಾರೆ. "ವೈಬ್ ಜೊತೆ ಬಾಕ್ಸಿಂಗ್: ಎಡ ಸ್ಟ್ರೈಟ್, ಸಲೀಸಾಗಿ ಬಲ ಅಪ್ಪರ್ ಕಟ್, ಎಡ ಅಪ್ಪರ್ ಕಟ್, ಬಲ ಅಪ್ಪರ್ ಕಟ್," ಎಂದು ಬಳಕೆದಾರರೊಬ್ಬರು ತಮಾಷೆಯಾಗಿ ಬರೆದಿದ್ದಾರೆ.

ಮತ್ತೊಬ್ಬ ನೆಟ್ಟಿಗರು, "ಉಪನ್ಯಾಸಕಿ ವರ್ಸಸ್ ಡಾನ್ಸರ್ (Lecturer X Dancer)," ಎಂದು ಕಾಮೆಂಟ್ ಮಾಡುವ ಮೂಲಕ ಶಿಕ್ಷಕಿಯ ಅದ್ಭುತ ಎನರ್ಜಿಯನ್ನು ಕೊಂಡಾಡಿದ್ದಾರೆ. ಒಟ್ಟಿನಲ್ಲಿ, ಗಣಿತದಂತಹ ಕಠಿಣ ವಿಷಯವನ್ನು ಬೋಧಿಸುವ ಪ್ರೊಫೆಸರ್ ಕ್ಯಾಂಪಸ್‌ನಲ್ಲಿ ಇಷ್ಟೊಂದು ಲವಲವಿಕೆಯಿಂದ ನೃತ್ಯ ಮಾಡಿರುವುದು ಎಲ್ಲರಲ್ಲೂ ಅಚ್ಚರಿ ಹಾಗೂ ಸಂತಸ ಮೂಡಿಸಿದೆ. ವಿದ್ಯಾರ್ಥಿಗಳಿಗಂತೂ ತಮ್ಮ ನೆಚ್ಚಿನ ಪ್ರೊಫೆಸರ್ ಅವರ ಈ ಹೊಸ ಅವತಾರವನ್ನು ನೋಡಿ ಇನ್ನಿಲ್ಲದ ಖುಷಿ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+