Virat Kohli: ವಿರಾಟ್ ಕೊಹ್ಲಿಗೆ ಕನ್ನಡ ಬರಲ್ಲ - ನಾರ್ಥಿಗಳು ಯಾಕೆ ಕಲಿಯಬೇಕು: ತುಳು ಬೆಂಬಲಿತರ ಪ್ರಶ್ನೆ, ಕನ್ನಡಿಗರ ಆಕ್ರೋಶ
Virat Kohli: ಇಷ್ಟು ವರ್ಷಗಳ ಕಾಲ ಆರ್‌ಸಿಬಿ ಜೊತೆ ಇದ್ದ ವಿರಾಟ್ ಕೊಹ್ಲಿ ಕನ್ನಡ ಕಲಿಯಲಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಮಾಡಲಾಗಿರುವ ಪೋಸ್ಟ್‌ವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಕನ್ನಡಪರ ಹೋರಾಟಗಾರರನ್ನು ಗುರಿಯಾಗಿಸಿಕೊಂಡು ಮಾಡಲಾಗಿರುವ ಈ ಪೋಸ್ಟ್‌ಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಳು ಭಾಷೆಗೆ ಬೆಂಬಲ ನೀಡುವ ಸೋಷಿಯಲ್ ಮೀಡಿಯಾ ಪುಟದಿಂದ ಈ ಪೋಸ್ಟ್ ಮಾಡಲಾಗಿದೆ.
ಕನ್ನಡ - ಕನ್ನಡಿಗರ ಬಗ್ಗೆ Bolther Memes ಎನ್ನುವ ಸೋಷಿಯಲ್ ಮೀಡಿಯಾದಿಂದ ಮಾಡಿರುವ ಪೋಸ್ಟ್‌ವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. "ಇಷ್ಟು ವರ್ಷಗಳ ಕಾಲ ಆರ್‌ಸಿಬಿ ಜೊತೆ ಇದ್ದ ವಿರಾಟ್ ಕೊಹ್ಲಿಗೆ ಕನ್ನಡ ಬಾರದಿದ್ದರೂ ಪರವಾಗಿಲ್ಲ, ಆದರೆ ಊರಿಗೆ ಕೆಲಸಕ್ಕೆ ಬಂದವರು ಒಂದು ತಿಂಗಳಲ್ಲಿ ಕನ್ನಡ ಕಲಿಯಬೇಕು - ಇಂತಿ ಒರಲಾಟಗಾರರು" ಎಂದು ಈ ಪುಟದಿಂದ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಪೋಸ್ಟ್‌ಗೆ ಕನ್ನಡಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Virat Kohli: ಕನ್ನಡಿಗರಿಂದ ತೀಕ್ಷ್ಣ ಪ್ರತಿಕ್ರಿಯೆ
ಇನ್ನು ಕನ್ನಡಿಗರು ಈ ಬರಹಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮಂಜುನಾಥ ಆರ್. ಎಂಜೆ ಎನ್ನುವವರು ತಲೆಬುಡ ಇಲ್ಲದ ಪ್ರಶ್ನೆ. ಕೊಹ್ಲಿ ಇಲ್ಲಿ ಬಂದು ವರ್ಷಗಟ್ಟಲೆ ಸಂಸಾರ ಸಮೇತ ಇಲ್ಲ. ಬೆಂಗಳೂರಿನಲ್ಲಿ ಮೂರು ತಿಂಗಳು ಇದ್ರೆ ಖಂಡಿತ ಕಲಿಯುತ್ತಾರೆ. ಬೇರೆಯವರಿಂದ ಬಂದು ಜೀವ ಕಟ್ಟಿಕೊಳ್ಳೋರು, ವರ್ಷಗಟ್ಟಲೆ ಇಲ್ಲೆ ಇದ್ದರೂ ಕನ್ನಡ ಕಲಿಯೋದಕ್ಕೆ ಆಗಲ್ಲ ಅಂದಾಗ ಇಲ್ಲಿ ಇರೋದಕ್ಕೆ ಯೋಗ್ಯತೆ ಇಲ್ಲ ಅಂತ ಅರ್ಥ. "ಅವ್ರು ಇಲ್ಲಿ ಮೆರೆಯುತ್ತಾರೆ ಅಂದ್ರೆ ನಿಮ್ಮಂಥವರು ಇರ್ತೀರಾ ಅಲ್ವಾ ಅದಕ್ಕೆ ಅವರಿಗೆ ನಮ್ಮ ನಾಡು ನುಡಿ ಅಂದ್ರೆ ಅಸಡ್ಡೆ ಕರ್ನಾಟಕದಲ್ಲಿ ಹುಟ್ಟಿ ಬೆಳೆದು ವಲಸೆ ಬಂದವರ ಪರವಾಗಿ ಮಾತಾಡ್ತೀರಾ ಅದಕ್ಕೆ ಅವರಿಗೆ ಕೊಂಬು" ನಿಮ್ಮಥವರಿಂದ ಕರ್ನಾಟಕದಲ್ಲಿ ನಾಡು ನುಡಿ ವಿಚಾರದಲ್ಲಿ ಸಮಸ್ಯೆಗಳು ಆಗ್ತಾ ಇರೋದು ಎಂದಿದ್ದಾರೆ.
ಅನಿಲ್ ಎನ್ನುವವರು ಭಾಷೆ ಬರದೇ ಇದ್ದರೆ ಏನು ನಷ್ಟ ಇಲ್ಲ. ಆದರೆ ಹೃದಯದಲ್ಲಿ ಕನ್ನಡ ಕರ್ನಾಟಕ ದ ಮೇಲೆ ಅವರಿಗೆ ತುಂಬಾ ಗೌರವ ಇದೆ. ಅದಕ್ಕಾಗಿ ಅವರು ಇಷ್ಟು ವರ್ಷ ಇಲ್ಲೆ ಉಳಿದರು ಎಂದಿದ್ದಾರೆ.
ಮಾದೇಶ್ ಕನ್ನಡಿಗ ಎನ್ನುವವರು, ವಿದ್ಯಾಭ್ಯಾಸದ ನಂತರ ಬದುಕು ಕಟ್ಟಿಕೊಳ್ಳುವುದಕ್ಕೆ ಬೆಂಗಳೂರು ನಗರ ಬೇಕು. ಆದರೆ ಕರ್ನಾಟಕ ಮತ್ತು ಕನ್ನಡಿಗರು ಎಂದರೆ ಒಂದು ರೀತಿಯ ಅಸಡ್ಡೆ.. ಅಷ್ಟೊಂದು ಸ್ವಾಭಿಮಾನ ಇರೋರು ಇಂದು ಬೆಂಗಳೂರಿನಲ್ಲಿ ವಾಸಿಸುತ್ತಿರುವ 2 ಲಕ್ಷಕ್ಕೂ ಅಧಿಕ ತುಳು ಭಾಷಿಗಾರನ್ನು ನಿಮ್ಮ ಒಂದೂವರೆ ಜಿಲ್ಲೆಗೆ ರಿಟರ್ನ್ ಕರೆಸಿಕೊಂಡು ಜೀವನಕ್ಕೆ ಒಂದು ದಾರಿ ಮಾಡಿಕೊಡಿ ನೋಡೋಣ...ಅದು ಆಗುವುದಿಲ್ಲ ಕನ್ನಡ ಮತ್ತು ಕನ್ನಡಿಗರನ್ನು ಹೀಯಾಳಿಸುವುದೇ ದೊಡ್ಡ ಸಾಧನೆ ಎಂದು ಕೊಂಡಿದ್ದೀರಾ ..ನಿಮ್ಮಂತಹ ಕೆಲವು ಅವಿವೇಕಿಗಳಿಂದ ನಮ್ಮೊಟ್ಟಿಗೆ ಕೆಲಸ ಮಾಡುವ ತುಳು ಭಾಷಿಕರನ್ನು ಅನುಮಾನದ ದೃಷ್ಟಿಯಿಂದ ನೋಡುವಂತ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹರಕಂಗಿ ಪ್ರಭುರಾಜ್ ಎನ್ನುವವರು, ಇಷ್ಟು ವರ್ಷ ಮುಂಬೈಯಲ್ಲೇ ಇದ್ದ ಪೂರ್ತಿ ಬಾಲಿವುಡ್ ನಟ - ನಟಿಯರು ಮರಾಠಿ ಕಲಿಯದಿದ್ರೂ ಪರವಾಗಿಲ್ಲ.. ಟ್ಯಾಕ್ಸಿ ಆಟೋ ಡ್ರೈವರುಗಳು ಮಾತ್ರ ಮರಾಠಿ ಕಲಿಯಬೇಕು ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications