BMTC ಬಸ್ ಪ್ರಯಾಣಿಕರ ದುಸ್ಥಿತಿ ಬದಲಾಗಿಲ್ಲ! ಸಂಚಾರಕ್ಕಾಗಿ ತಪಸ್ಸಿನಂತೆ ಜನ ಕಾಯಬೇಕಿದೆ: ತೇಜಸ್ವಿ ಸೂರ್ಯ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೂಲಭೂತ ಸಮಸ್ಯೆಗಳ ಕುರಿತು ನಿತ್ಯವು ದೂರುಗಳು ಕೇಳಿ ಬರುತ್ತಿವೆ. ನಗರದಲ್ಲಿ ಬಿಎಂಟಿಸಿ ಬಸ್‌ಗಾಗಿ ಪ್ರಯಾಣಿಕರು ಕಾಯುವುದೇ ದೊಡ್ಡ ತಪಸ್ಸಾದಂತಾಗಿದೆ. ಸ್ವತಃ ಬಸ್‌ನಲ್ಲಿ ಪ್ರಯಾಣಿಸಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಬಳಿಕ ಸಂಸದ ತೇಜಸ್ವಿ ಸೂರ್ಯ ಅವರು ನಗರದಲ್ಲಿ ಬಿಎಂಟಿಸಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.
ನೆನ್ನೆ ಸೋಮವಾರ ಕತ್ರಿಗುಪ್ಪೆಯಿಂದ ಬನಶಂಕರಿವರೆಗೆ ಬಿಎಂಟಿಸಿ ಬಸ್‌ನಲ್ಲಿ ಸಂಚಾರ ಮಾಡಿದರು. ಈ ವೇಳೆ ಪ್ರಯಾಣಿಕರು ದೈನಂದಿನ ಸಂಚಾರದ ವೇಳೆ ಅನುಭವಿಸುವ ಸಮಸ್ಯೆಗಳನ್ನು ಆಲಿಸಿದ ವಿಡಿಯೋವನ್ನು ಅವರು ಎಕ್ಸ್ ಪೊಸ್ಟ್ ಮಾಡಿದ್ದಾರೆ. ಪ್ರಯಾಣಿಕರಿಗೆ ಪ್ರತಿನಿತ್ಯ ಇದೇ ಗೋಳಾದರೆ, ಜನ ಕೆಲಸ- ಕಾರ್ಯ ಮಾಡಬೇಕಾ ಅಥವಾ ರಸ್ತೆಯಲ್ಲೇ ಕಾಲ ಕಳೆಯಬೇಕಾ ಉತ್ತರಿಸಿ ಮುಖ್ಯಮಂತ್ರಿಗಳೇ? ಎಂದು ಡಿಕೆ ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿ ಆಗ್ರಹಿಸಿದ್ದಾರೆ.

ಬೆಂಗಳೂರಿನ ಸಾರಿಗೆ ಸ್ಥಿತಿ ಬದಲಾಗಿಲ್ಲ!
ಸುಮಾರು ಏಳೆಂಟು ತಿಂಗಳ ಹಿಂದೆ ನಗರದ ಬಿಎಂಟಿಸಿ ಬಸ್ ಪ್ರಯಾಣಿಕರ ಸಮಸ್ಯೆ ಸೇರಿ ವಿವಿಧ ವಿಷಯಗಳು ಕುರಿತು ಮಾಡಿದ್ದ ಪೊಸ್ಟ್ ಅನ್ನು ಸೂರ್ಯ ಮರು ಟ್ವೀಟ್ ಮಾಡಿದ್ದಾರೆ. ಎಂಟು ತಿಂಗಳ ನಂತರ ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ, ಹೊಸ ಉಪಮುಖ್ಯಮಂತ್ರಿ, ಹೊಸ ಸಾರಿಗೆ ಸಚಿವರು ಆಯ್ಕೆ ಆಗಿದ್ದಾರೆ. ಹೊಸ ಸರ್ಕಾರ ರಚನೆ ಬಳಿಕವು ಬೆಂಗಳೂರಿನ ಸಾರಿಗೆ ಸ್ಥಿತಿ ಬದಲಾಗಿಲ್ಲ. ಅದೇ ಹಳೇ ಕಥೆ ಮುಂದುವರಿದಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಬಿಎಂಟಿಸಿ ಬಸ್‌ಗಳಿಗೆ ಜನ ರಸ್ತೆಗಳಲ್ಲೇ ಕಾಯುವಂತಾಗಿದೆ ಎಂದು ತಿಂಗಳುಗಳ ಹಿಂದೆಯೇ ಈ ಬಗ್ಗೆ ಮನವಿ ಮಾಡಿದ್ದೆ. ಈ ಸಮಸ್ಯೆ ಪರಿಹಾರವಾಗದ ಹಿನ್ನೆಲೆಯಲ್ಲಿ ಆದರೆ ಬಿಎಂಟಿಸಿ ಪ್ರಯಾಣಿಕರು ಇನ್ನೂ ಬಸ್‌ಗಳಿಗಾಗಿ ಹೆಚ್ಚಿನ ಸಮಯ ರಸ್ತೆಯಲ್ಲೇ ಕಾಯುವಂತಾಗಿದೆ. ನಿತ್ಯ ಜನರು ತಮ್ಮ ಸಮಯವನ್ನು ರಸ್ತೆಬದಿಯಲ್ಲಿ ಕಾಯುತ್ತಾ ಕೆಲಸ ಮಾಡಬೇಕೇ ಅಥವಾ ನಿಂತು ಕಾಯಬೇಕೇ? ಎಂದು ಪ್ರಶ್ನಿಸಿದ್ದಾರೆ.
ನೂತನ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಮತ್ತು ವಿವಿಧ ಸಾರಿಗೆ ಇಲಾಖೆಗಳು ಬೆಂಗಳೂರಿಗೆ ವಿಶ್ವಾಸಾರ್ಹ, ಸಾರ್ವಜನಿಕ ಸ್ನೇಹಿ ಸಾರಿಗೆ ವ್ಯವಸ್ಥೆ ಕಲ್ಪಿಸುವತ್ತ ಆದ್ಯತೆ ನೀಡಬೇಕು. ದೂರದೃಷ್ಟಿ ಸಹಿತ ಕೆಲಸ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಬಸ್‌ಗಳ ಸಂಖ್ಯೆ 15000ಕ್ಕೆ ಹೆಚ್ಚಿಸುವುದು ಅಗತ್ಯ
ಸಾರಿಗೆ ವ್ಯವಸ್ಥೆ ಯಶಸ್ವಿಯಾಗಲು ಉತ್ತಮ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳಿರಬೇಕು. ಸದ್ಯ ಬೆಂಗಳೂರಿನಲ್ಲಿರುವ ಬಿಎಂಟಿಸಿ ಬಸ್‌ಗಳು ದೈನಂದಿನ ಕಾರ್ಯಾಚರಣೆಗೆ ಸಾಲದು. ಆದ್ದರಿಂದ ಸರ್ಕಾರ ಬಸ್‌ಗಳನ್ನು ಸಂಖ್ಯೆಯನ್ನು 15000 ಕ್ಕೆ ಹೆಚ್ಚಿಸಬೇಕು. ಪ್ರತಿಯೊಬ್ಬ ನಾಗರಿಕನು ನಗರದಲ್ಲಿ ಎಲ್ಲಿಯಾದರೂ ಐದು ನಿಮಿಷಗಳಲ್ಲಿ ಬಸ್ ಪ್ರವೇಶಿಸಲು ಸಾಧ್ಯವಾಗುವಂತೆ ವ್ಯಾಪ್ತಿ ವಿಸ್ತರಿಸಬೇಕು. ಮುಖ್ಯವಾಗಿ ಖಾಸಗಿ ಪಾಲುದಾರಿಕೆಯನ್ನೂ ಪ್ರೋತ್ಸಾಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಇದರೊಂದಿಗೆ ಜಂಕ್ಷನ್‌ಗಳು, ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ಅಭಿವೃದ್ಧಿ, ಆಧುನಿಕ ಸಿಗ್ನಲ್ ಸಮಯದ ಮರುವಿನ್ಯಾಸಗೊಳಿಸಬೇಕು. ಡೇಟಾ ಚಾಲಿತ ಏಕಮುಖ ವ್ಯವಸ್ಥೆ, ಒತ್ತುವರಿ ತಡೆಯುವುದು ಸೇರಿ ಮೂಲಸೌಕರ್ಯಗಳಿಗೆ ಒತ್ತು ನೀಡುವಂತೆ ಅವರು ಕೋರಿದ್ದಾರೆ.
Eight months later.
— Tejasvi Surya (@Tejasvi_Surya) June 30, 2026
A new Chief Minister. A new Deputy Chief Minister. A new Transport Minister.
Yet the same story continues in Bengaluru.
I had raised this issue months ago, but BMTC commuters are still left waiting endlessly for buses. Should people spend their time… https://t.co/4Lb6f0ihvZ














Click it and Unblock the Notifications