ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯನೀತಿಯಿಲ್ಲದ ಮುಷರಫ್‌ ನಾಡಿನಲ್ಲಿ ಮುಖ್ತಾರನ್‌ ಎಂಬ ಕುಸುಮಬಾಲೆ!

By Staff
|
Google Oneindia Kannada News


ಅಗ ಎಲ್ಲರ ಕಣ್ಣು ಬಿದ್ದಿದ್ದು ಮುಖ್ತಾರನ್‌ ಮಾಯಿ ಮೇಲೆ. ಈ ಕ್ರೂರ ಶಿಕ್ಷೆ ವಿರೋಧಿಸುವ ಛಾತಿ ಅಲ್ಲಿದ್ದವರಲ್ಲಿ ಯಾರಿಗೂ ಇರಲಿಲ್ಲ. ಬಾಯ್ಮುಚ್ಚಿಕೊಂಡು ತೆಪ್ಪಗಿದ್ದರು. ನ್ಯಾಯ ಪಂಚಾಯಿತಿ ನಡೆಯುತ್ತಿದ್ದ ಜಾಗದಿಂದ ಸುಮಾರು ನೂರು ಮೀಟರ್‌ ದೂರದಲ್ಲಿ ಮುಖ್ತಾರನ್‌ ನಿಂತಿದ್ದಳು. ತೀರ್ಪು ಹೊರಬೀಳುತ್ತಿದ್ದಂತೆ ಸಲ್ಮಾಳ ಸಹೋದರ ಅಬ್ದುಲ್‌ ಖಲೀಖ್‌ ಪಿಸ್ತೂಲ್‌ ಹಿಡಿದು ಬೆದರಿಸಿ ತನ್ನ ಮೂರ್ನಾಲ್ಕು ಸ್ನೇಹಿತರ ಜತೆಗೂಡಿ ಮುಖ್ತಾರನ್‌ಳನ್ನು ಎಲ್ಲರೆದುರೇ ಎತ್ತಿಕೊಂಡು ಪಕ್ಕದಲ್ಲಿದ್ದ ಪಾಳು ಕಟ್ಟಡದೊಳಗೆ ಹೋಗಿ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರವೆಸಗಿದ.

ಅತನ ಕಾಮಪಿಪಾಸು ಸ್ನೇಹಿತರೂ ಅಕೆ ಮೇಲೆ ಮುಗಿಬಿದ್ದರು. ಮಾನಸಿಕವಾಗಿ ಜರ್ಝರಿತಳಾಗಿ ಮುಖ್ತಾರನ್‌ ಮಲಗಿದ್ದರೆ, ಈ ನೀಚರು ಅಕೆಯನ್ನೆಬ್ಬಿಸಿ ಊರಿನ ಬೀದಿಯಲ್ಲಿ ಅಲೆದಾಡಿಸಿ ಮೆರವಣಿಗೆ ಮಾಡಿದರು. ಹರಿದ ಖಮೀಜ್‌ ಬಿಟ್ಟರೆ ಅಕೆ ಮೈಮೇಲೆ ಬಟ್ಟೆ ಗಳಿರಲಿಲ್ಲ. ದುಃಖತಪ್ತ ಮುಖ್ತಾರನ್‌ ದಾರಿಯಲ್ಲಿ ನಡೆದು ಹೋಗುತ್ತಿದ್ದರೆ, ಮೇಲ್ಜಾತಿಯ ಜನ ಮನೆ ಹೊರಗಡೆ ನಿಂತು ಸಂತಸದಿಂದ ಕೇಕೆ ಹಾಕಿ ಕುಣಿಯುತ್ತಿದ್ದರು.

ಅದೇ ದಿನ ಸಾಯಂಕಾಲ ಸಲ್ಮಾಳ ಕಡೆಯವರು ಪೊಲೀಸ್‌ ಠಾಣೆಗೆ ಹೋಗಿ ಎರಡೂ ಕಡೆಯವರು ವಿವಾದವನ್ನು ಬಗೆಹರಿಸಿಕೊಂಡಿದ್ದಾಗಿಯೂ, ಶಕೂರ್‌ನ ವಿರುದ್ಧದ ದೂರನ್ನು ವಾಪಸ್‌ ಪಡೆಯುತ್ತಿರುವುದಾಗಿಯೂ ತಿಳಿಸಿದರು. ಆರ ಪಾಲಿಗೆ ಇತ್ಯರ್ಥವಾಗಿತ್ತು.

ಇತ್ತ ಮುಖ್ತಾರನ್‌ ಮಾನಸಿಕ ಅಘಾತದಿಂದ ಕುಸಿದು ಹೋಗಿದ್ದಳು. ಅವಮಾನದಿಂದ ಬೆಂದು ಹೋದ ಅಕೆ ಮನೆಯಿಂದ ಹೊರ ಬರಲಾಗದೇ ತೀವ್ರ ಸಂಕಟಪಡುತ್ತಿದ್ದಳು. ಅತ್ನ ಹತ್ಯೆಗೆ ಯೋಚಿಸಿ ಮನಸ್ಸನ್ನು ನಿಯಂತ್ರಿಸಿಕೊಂಡಿದ್ದಳು. ಮನಸ್ಸು ನೇಣು ಕುಣಿಕೆಗೆ ಸಿಕ್ಕಿ ಬೀಳುತ್ತಿದ್ದರೂ, ಗಟ್ಟಿ ಮನದಿಂದ ಎದ್ದು ನಿಂತ ಮುಖ್ತಾರನ್‌, ಅ ಅವಮಾನಗಳನ್ನೆಲ್ಲ ಸಿಟ್ಟನ್ನಾಗಿ ಗಂಟು ಕಟ್ಟಿಕೊಂಡು ಸೆಟೆದು ಎದ್ದು ನಿಂತಳು. ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದವರ ವಿರುದ್ಧ ದನಿಯೆತ್ತಿ ಹೋರಾಡಲು ನಿರ್ಧರಿಸಿದಳು. ತಂದೆ -ತಾಯಿ, ಸಹೋದರ ಹಾಗೂ ಬಂಧುಗಳು ತಡೆದರು. ‘ಪ್ರತಿಭಟನೆ, ಹೋರಾಟ ಅಂದ್ರೆ ಅ ದುರುಳರು ನಿನ್ನ ಜೀವಕ್ಕೆ ಸಂಚಕಾರ ತರಲೂ ಹೇಸುವವರಲ್ಲ. ಮನೆಯಲ್ಲಿ ತೆಪ್ಪಗೆ ಬಿದ್ದಿರು’ ಎಂದು ಬುದ್ಧಿ ಮಾತು ಹೇಳಿದರು. ಒಂದು ವೇಳೆ ಮುಖ್ತಾರನ್‌ ಸುಮ್ಮನಾಗಿದ್ದರೆ, ಇದೂ ಸಹ ಅಸಂಖ್ಯ ಅತ್ಯಾಚಾರ ಪ್ರಕರಣಗಳಲ್ಲಿ ಮತ್ತೊಂದಾಗಿ ಪರಿಸಮಾಪ್ತಿಯಾಗುತ್ತಿತ್ತು.

ಅದರೆ ಮುಖ್ತಾರನ್‌ ಇಟ್ಟ ಹೆಜ್ಜೆ ಹಿಂದಕ್ಕಿಡಲಿಲ್ಲ. ತನ್ನ ಶೀಲಹರಣ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ಎಂದು ಶಪಥಗೈದಳು. ಜತೋಯ್‌ ಪೊಲೀಸ್‌ ಠಾಣೆಗೆ ಹೋಗಿ ಅತ್ಯಾಚಾರಿಗಳ ವಿರುದ್ಧ ದೂರು ನೀಡಿದಳು. ಯಾವಾಗ ಕೇಸು ದಾಖಲಾಯಿತೋ, ಪಾಕ್‌ ಪತ್ರಿಕೆಗಳಲ್ಲಿ ಈ ಸುದ್ದಿ ಜೋರಾಗಿ ಬರಲಾರಂಭಿಸಿತು. ಈ ಘಟನೆಯನ್ನು ಬಿಬಿಸಿ ಬಿತ್ತರಿಸಿತು. ಟೈಮ್‌ ಮ್ಯಾಗಜೀನ್‌ ಹಾಗೂ ‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆ ಸಹ ವರದಿ ಮಾಡಿದವು. ಅಷ್ಟೇ ಅಲ್ಲ. ಸಂಪಾದಕೀಯ ಬರೆದು ಖಂಡಿಸಿದವು.

ಇಷ್ಟಾದರೂ ಮುಸ್ತೋಯ್‌ ಮುಖಂಡರು ಸುಮ್ಮನಾಗಲಿಲ್ಲ. ಕೇಸು ವಾಪಸ್‌ ಪಡೆಯುವಂತೆ ಒತ್ತಡ ಹೇರಲಾರಂಭಿಸಿದರು. ಅಕೆಯ ತಂದೆ ತಾಯಿಗಲು ಉಸಾಬರಿ ಬೇಡವೆಂದು ಸುಮ್ಮನಿರುವಂತೆ ತಿಳಿಸಿದರು. ಅದರೆ ಮುಖ್ತಾರನ್‌ ಕೇಳಲಿಲ್ಲ. ಶೀಲಹರಣ ಮಾಡಿದವರು ಜೀವಹರಣ ಮಾಡಿದರೂ ಸೈ, ಬಿಡುವುದಿಲ್ಲ ಎಂದು ಹಠಕ್ಕೆ ಬಿದ್ದವರಂತೆ ಹೋರಾಟಕ್ಕೆ ನಿಂತಳು.

ಪಾಕ್‌ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶ, ಮುಖ್ತಾರನ್‌ ಮೇಲಿನ ಅತ್ಯಾಚಾರ 21ನೇ ಶತಮಾನದ ಅತ್ಯಂತ ಘೋರ ಅಪರಾಧ ಎಂದ. ಕೇಸನ್ನು ಸರಿಯಾಗಿ ವಿಚಾರಣೆ ನಡೆಸದ್ದಕ್ಕಾಗಿ ಕೋರ್ಟ್‌ನ್ನು ತರಾಟೆಗೆ ತೆಗೆದುಕೊಂಡ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದರೂ, ಅರೋಪಿಗಳು ಉಚ್ಚ ನ್ಯಾಯಾಲಯಕ್ಕೆ ಹೋಗಿ ಶಿಕ್ಷೆ ಪ್ರಮಾಣ ಕಡಿಮೆಗೊಳಿಸಿಕೊಂಡರು. ಮುಖ್ತಾರನ್‌ಗೆ ಐದು ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್‌ ತೀರ್ಪು ನೀಡಿತು. ಸ್ವತಃ ಅಧ್ಯಕ್ಷ ಜನರಲ್‌ ಮುಷರಫ್‌ ಪರಿಹಾರದ ಚೆಕ್‌ ನೀಡಿದರು.

ಅಲ್ಲಿಗೆ ಅವಳ ಹೋರಾಟಕ್ಕೆ ಅರ್ಧ ಜಯ ಲಭಿಸಿದಂತಾಗಿತ್ತು. ಅದರೆ ತನ್ನ ಸುತ್ತಲಿನ ಸಮಾಜದಲ್ಲಿ ಬೇರುಬಿಟ್ಟಿರುವ ಜಾತಿ ಪದ್ಧತಿ, ಜಮೀನ್ದಾರಿಕೆ ಪದ್ಧತಿ ವಿರುದ್ಧ ಹೋರಾಡಲು ಅಕೆ ನಿರ್ಧರಿಸಿದಳು. ಅದಕ್ಕಿರುವ ಏಕೈಕ ಮಾರ್ಗವೆಂದರೆ ಐದು ಜನರನ್ನು ಸುಶಿಕ್ಷಿತರನ್ನಾಗಿ ಮಾಡುವುದು. ಪರಿಹಾರ ರೂಪದಲ್ಲಿ ಬಂದ ಹಣದಲ್ಲಿ ಅಕೆ ತನ್ನ ಊರಿನಲ್ಲಿ ಒಂದು ಶಾಲೆ ತೆರೆದಳು. ಮನೆಯಲ್ಲಿದ್ದ ಒಡವೆಗಳನ್ನು ಮಾರಿ ಶಾಲೆಗೆ ಪೀಠೋಪಕರಣ ತಂದಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X