ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯನೀತಿಯಿಲ್ಲದ ಮುಷರಫ್‌ ನಾಡಿನಲ್ಲಿ ಮುಖ್ತಾರನ್‌ ಎಂಬ ಕುಸುಮಬಾಲೆ!

By Staff
|
Google Oneindia Kannada News


ಕೀಳು ಜಾತಿಯ ಹುಡುಗನೊಬ್ಬ ಮೇಲ್ಜಾತಿ ಹುಡುಗಿಯ ಅತ್ಯಾಚಾರ ಮಾಡಿದ್ದಕ್ಕೆ ಪ್ರತೀಕಾರವಾಗಿ ಕೀಳುಜಾತಿಯ ಹುಡುಗಿ ಸಹ ಮೇಲ್ಜಾತಿಯವರಿಂದ ಅತ್ಯಾಚಾರಕ್ಕೆ ಒಳಗಾಗಬೇಕೆಂದು ಪಂಚಾಯಿತಿ ಸೇರಿದ ಮುಖಂಡರು ಎಲ್ಲರ ಸಮ್ಮುಖದಲ್ಲಿ ತೀರ್ಪು ನೀಡಿದರು. ಅಗ ಎಲ್ಲರ ಕಣ್ಣು ಬಿದ್ದಿದ್ದು ಮುಖ್ತಾರನ್‌ ಮಾಯಿ ಮೇಲೆ!

  • ವಿಶ್ವೇಶ್ವರ ಭಟ್‌
  • Mukhtaran Maiಕಳೆದ ಹತ್ತು ದಿನಗಳಿಂದ ಅಕೆ ಮನಸ್ಸಿನಲ್ಲಿ ಗಪ್ಪ ಹೊಡೆದು ಕುಳಿತುಬಿಟ್ಟಿದ್ದಾಳೆ. ಅದೇ ಸ್ನಿಗ್ಧ ಮುಖ ಮುದ್ರೆ, ಭಾವುಕ, ಅಮಾಯಕ ಕಂಗಳು, ಪುನಃ ಪುನಃ ನೋಡಬೇಕೆನ್ನುವ, ಪ್ರತಿ ಸಲ ನೋಡಿದಾಗಳೂ ‘ಪಾಪದವಳು’ಎಂದೆನಿಸುವ, ಅದರೆ ಮನಸ್ಸಿನ ತುಂಬಾ ಕೆಚ್ಚು, ಕಳಕಳಿ ತುಂಬಿಕೊಂಡಿರುವ, ಮನಸ್ಸಿನ ಮೂಲೆಯಲ್ಲಿದ್ದ ಈ ಭಾವ ಹೃದಯದ ರಂಗಸ್ಥಳಕ್ಕೆ ಬರುವ ಹೊತ್ತಿಗೆ ಅಭಿಮಾನ ಮೂಡುವಂಥ ಹೆಣ್ಣು ಮಗಳು. ಅಕೆಯ ಕತೆಗಳಿಗೆ ಕಿವಿಗೊಟ್ಟು ಕೇಳುತ್ತಿದ್ದರೆ ಯಾವುದೋ ಅರ್ತನಾದ ಕಿವಿಯಾಳಗೆ ಮೊರೆಯುತ್ತಿರುವಂತೆ ಭಾಸವಾಗುತ್ತಿತ್ತು.

    ಅಂದ ಹಾಗೆ ನಾನು ಹೇಳುತ್ತಿರುವುದು ಮುಖ್ತಾರನ್‌ ಮಾಯಿ ಅವಳ ಕತೆ. ‘ಇನ್‌ ದಿ ನೇಮ್‌ ಅಫ್‌ ಅನರ್‌’ ಎಂಬ ಪುಸ್ತಕ ಓದಿದ್ದರೆ ನೀವು ಇದನ್ನು ಓದಬೇಕಿಲ್ಲ. .ಇಲ್ಲದಿದ್ದರೆ ನಾನು ಅಕೆ ಕತೆ ಹೇಳುತ್ತೇನೆ ಕೇಳಿ.

    ಈಕೆ ಕತೆ ಅರಂಭವಾಗುವುದು ಪಾಕಿಸ್ತಾನದಲ್ಲಿ . ಅಲ್ಲಿನ ಮುಜಫರ್‌ಗಢ ಜಿಲ್ಲೆಯ ಜತೋಯ್‌ ಎಂಬ ಪ್ರದೇಶದ ಮೀರವಾಲ್‌ ಎಂಬ ಕುಗ್ರಾಮದಲ್ಲಿ ಹುಟ್ಟಿದ ಮುಖ್ತಾರನ್‌ ಬೀಬಿ ಅಲಿಯಾಸ್‌ ಮುಖ್ತಾರನ್‌ ಮಾಯಿ ಈ ಕತೆಯ ನಾಯಕಿ. ನಾಗರಿಕ ಸಮಾಜ ಬಯಸುವ ಸಾಮಾನ್ಯ ಸೌಲಭ್ಯಗಳಿಂದಲೂ ವಂಚಿತವಾದ ಊರದು.

    ರಸ್ತೆ, ಶಾಲೆ, ಕರೆಂಟು, ಬಸ್ಸು, ಟೆಲಿಫೋನ್‌ ಅಂದ್ರೆ ಅಲ್ಲಿನ ಜನರಿಗೆ ಏನೆಂದೇ ಗೊತ್ತಿಲ್ಲ. ನೂರಾರು ಕಚ್ಚಾ ಗುಡಿಸಲುಗಳಿರುವ ಅ ಗ್ರಾಮದಲ್ಲಿ ಬಾಳುವುದೇ ಘನ ಘೋರ ಶಾಪ. ಜತೆಯಲ್ಲಿ ವಿಪರೀತ ಕಟ್ಟು ಪಾಡು, ಮೂಢನಂಬಿಕೆ, ಮೇಲ್ಜಾತಿ, ಕೆಳಜಾತಿಯೆಂಬ ಭೇದ-ಭಾವ, ಈ ಊರಿನಲ್ಲಿ ಸುಮಾರು ಐದು ವರ್ಷಗಳ ಹಿಂದೆ ನಡೆದ ಘಟನೆಯಾಂದು ಇಡೀ ಜಗತ್ತನ್ನೇ ತಲ್ಲಣಗೊಳಿಸಿತು. ಈ ಶಾಪಗ್ರಸ್ತ ಗ್ರಾಮದ ಮಹಿಳೆಯಾಬ್ಬಳು ರಾತ್ರಿ ಬೆಳಗಾಗುವುದರೊಳಗೆ ವಿಶ್ವದಾದ್ಯಂತ ಗಮನ ಸೆಳೆದಳು.

    ಅಂದು ನಡೆದಿದ್ದು ಇಷ್ಟೆ. ಮುಖ್ತಾರನ್‌ ಮಾಯಿ ಸಹೋದರ ಶಕೂರ್‌ ಎಂಬಾತ ಮಸ್ತೋಯ್‌ ಎಂಬ ಮೇಲ್ಜಾತಿಗೆ ಸೇರಿದ ಸಲ್ಮಾ ಎಂಬ ಹುಡುಗಿಯ ಹಿಂದೆ ಬಿದ್ದ. ವಯಸ್ಸಿನಲ್ಲಿ ಸಲ್ಮಾ ದೊಡ್ಡ ವಳಾಗಿದ್ದರಿಂದ ಹಾಗೂ ಅತ ಟಟ್ಲಾ ಎಂಬ ಕೀಳು ಜಾತಿಗೆ ಸೇರಿದವನಾಗಿದ್ದರಿಂದ ಈ ಸಂಬಂಧವನ್ನು ಯಾರು ಒಪ್ಪುವುದಿಲ್ಲವೆಂಬುದು ಹುಡುಗ-ಹುಡುಗಿಗೆ ಗೊತ್ತಿತ್ತು. ಅದರೂ ಪ್ರೇಮದ ಸೆಳೆತ. ಶಕೂರ್‌ನನ್ನು ಕರೆದು ಹುಡುಗಿ ಕಡೆಯವರು ಧಮಕಿ ಹಾಕಿದರು. ಶಕೂರ್‌ ಕೆಲ ದಿನ ಸುಮ್ಮನಾದರೂ, ಪುನಃ ಸಲ್ಮಾ ಹಿಂದೆ ಬಿದ್ದ. ಇದಕ್ಕೆ ಅಕೆಯ ಸಮ್ಮತಿಯೂ ಇತ್ತು.

    ಅದರೆ ಮುಸ್ತೋಯ್‌ ಜಾತಿಗೆ ಸೇರಿದ ಧುರೀಣರು ಈ ಬೆಳವಣಿಗೆ ಕಂಡು ಕುದ್ದು ಹೋದರು. ಸಲ್ಮಾಳನ್ನು ಅತ್ಯಾಚಾರ ಮಾಡಿದ ಸುಳ್ಳು ಅರೋಪ ಹೊರಿಸಿ ಶಕೂರ್‌ನನ್ನು ಅಪಹರಿಸಿ ಹಿಗ್ಗಾಮುಗ್ಗಾ ಥಳಿಸಿದರು. ಅಂದು ಅತ ಬದುಕುಳಿದದ್ದೇ ಹೆಚ್ಚು. ಅಷ್ಟಕ್ಕೇ ಸುಮ್ಮನಾಗದ ಮಸ್ತೋಯ್‌ ಮುಖಂಡರು ಊರಿನಲ್ಲಿ ಪಂಚಾಯಿತಿ ಮಾಡಿದರು. ಕೀಳು ಜಾತಿಯ ಹುಡುಗನೊಬ್ಬ ಮೇಲ್ಜಾತಿ ಹುಡುಗಿಯ ಅತ್ಯಾಚಾರ ಮಾಡಿದ್ದಕ್ಕೆ ಪ್ರತೀಕಾರವಾಗಿ ಕೀಳುಜಾತಿಯ ಹುಡುಗಿ ಸಹ ಮೇಲ್ಜಾತಿಯವರಿಂದ ಅತ್ಯಾಚಾರಕ್ಕೆ ಒಳಗಾಗಬೇಕೆಂದು ಪಂಚಾಯಿತಿ ಸೇರಿದ ಮುಖಂಡರು ಎಲ್ಲರ ಸಮ್ಮುಖದಲ್ಲಿ ತೀರ್ಪು ನೀಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X