ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಷ್ಕಾಮಕರ್ಮ ಚಿಂತನೆಯ ಭಗವದ್ಗೀತೆಗಾಗಿ ಕಚ್ಚಾಟ. ಹಹಾ

By * ಡಾ.ಸುಚೇತನ ಸ್ವರೂಪ, ತುಮಕೂರು
|
Google Oneindia Kannada News

Bhagavad Gita introduction in schools
ಶಾಲೆಗಳಲ್ಲಿ ಭಗವದ್ಗೀತೆ ವಾಚನ ಕುರಿತಂತೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆ ಕುರಿತು ಭಗವದ್ಗೀತೆಯೇ ಬೋಧಿಸುವಂತೆ ಭಾವಾತಿರೇಕಕ್ಕೆ ಅವಕಾಶ ನೀಡದ ರೀತಿ ಯೋಚಿಸಬೇಕಾಗಿದೆ.

ಸಾಮಾನ್ಯವಾಗಿ ನಂಬಿಕೊಂಡಂತೆ ಮಹಾಭಾರತ, ರಾಮಾಯಣದ ನಂತರದ ಕೃತಿ ಅಲ್ಲ. ಒಂದು ಅಂದಾಜಿನ ಪ್ರಕಾರ ರಾಮಾಯಾಣ ಉಪನಿಷತ್ ಕಾಲದ ಅಂದರೆ ಕ್ರಿ. ಪೂ. 5 ನೇ ಶತಮಾನದ ರಚನೆಯಾಗಿರಬಹುದಾದರೆ, ಮೂಲ ಮಹಾಭಾರತದ ಕಾಲ ಕನಿಷ್ಠ 2 ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆ. ಅಂದರೆ ಮಹಾಭಾರತವನ್ನು ಕ್ರಿ. ಪೂ. 8 ಅಥವಾ 9 ನೇ ಶತಮಾನದಲ್ಲಿ ವ್ಯಾಸರು ರಚಿಸಿರಬಹುದು ಎಂದು ಅಂದಾಜು ಮಹಾಭಾರತ ವೇದ ಪೂರ್ವ ಕಾಲದ ಕಥೆ.

ಆ ದೃಷ್ಟಿಯಿಂದ ನೋಡುವುದಾದಲ್ಲಿ ಜಗತ್ತಿನ ಅತ್ಯಂತ ಸುಂದರ ಸಂಯೋಜನೆಯಾದ ಭಗವದ್ಗೀತೆ ಮೂಲ ಭಾರತದ ಭಾಗವಲ್ಲ. ಯಾರೋ ಜಾಣರು ಅದನ್ನು ಕ್ರಿ.ಶ 4ನೇ ಶತಮಾನದ ಆಜುಬಾಜಿನಲ್ಲಿ ಸೇರ್ಪಡೆ ಮಾಡಿರಬಹುದೆಂಬ ಅಂದಾಜಿದೆ.

ಭಗವದ್ಗೀತೆಯಲ್ಲಿ ಬಳಕೆಯಾಗಿರುವ ಭಾಷೆ ಅತೀ ಮಧುರವಾದದ್ದು, ವಿಷಯ ಮಂಡಿಸುವ ಕ್ರಮ ಕೂಡ ಅತ್ಯಂತ ವಿನೂತನ. ಇಡೀ ಭಗವದ್ಗೀತೆಯ ಸಾರವನ್ನು ಒಂದೇ ಒಂದು ಪದದಲ್ಲಿ ಹೇಳಿ ಎಂದು ನಿರ್ಬಂಧಿಸುವುದಾದರೆ ಆ ಪದ 'ನಿಷ್ಕಾಮಕರ್ಮ' ವಲ್ಲದೆ ಬೇರೆಯಾಗಿರಲು ಸಾಧ್ಯವಿಲ್ಲ.

ನಿಷ್ಕಾಮಕರ್ಮ ಸಿದ್ಧಾಂತ ಲ್ಯಾಟಿನ್ ಫಿಲಾಸಫರುಗಳಿಗೂ ಸಮಾನವಾದುದು. ಆ ಪರಿಕಲ್ಪನೆಯನ್ನು ಭಗವದ್ಗೀತೆಯನ್ನು ರಚಿಸಿದಾತ ಲ್ಯಾಟಿನ್ ಮೂಲದ ಎಫಿಕ್ಯೂರಿಯನ್ ಪರಂಪರೆಯಿಂದ ಪಡೆದಿರಬಹುದು ಎಂದು ಕೆಲವರು ಅಂದಾಜು ಮಾಡುತ್ತಾರೆ. ಗ್ರೀಕ್‌ನ ಪೈಥಾಗೊರಸ್ ಉಪನಿಷತ್ತುಗಳಿಂದಲೂ ಪ್ರಭಾವಿತನಾಗಿರಬಹುದು ಎಂಬ ಮಾತಿದೆ. ಆ ಕಾರಣ ಯಾರನ್ನು ಯಾರು ಪ್ರಭಾವಿಸಿದರು ಎಂಬ ವಿಚಾರದಲ್ಲಿ ಇಷ್ಟೆ ಸರಿ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಒಂದು ಮಾತಂತೂ ಸತ್ಯ. ನಿಷ್ಕಾಮಕರ್ಮ ಸಿದ್ಧಾಂತ ಸಂಪೂರ್ಣ ಭಾರತದ್ದೇನಲ್ಲ. ಆದರೆ ಅದನ್ನು ಭಗವದ್ಗೀತೆಯಲ್ಲಿ ಮಂಡಿಸುವ ರೀತಿ ಮಾತ್ರ ಇಂದಿಗೂ ಅತ್ಯಂತ ವಿನೂತನವಾದುದು. ನಿಷ್ಕಾಮಕರ್ಮ ಮತ್ತು ನಿರ್ಭಾವುಕ ಚಿಂತನಕ್ರಮವನ್ನು ಪ್ರೇರೇಪಿಸುವ ಭಗವದ್ಗೀತೆಯ ಹೆಸರಿನಲ್ಲಿ ಕಚ್ಚಾಡುವುದು ಎಷ್ಟು ಸರಿ?

English summary
Controversy over the introduction of Bhagavad Gita in schools is not a good idea. One has to accept the preachings of Bhagavad Gita opines Dr. Suchetana Swarupa from Tumkur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X