• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psychology: ಮಾನಸಿಕ ದೈಹಿಕ ಅಸ್ವಸ್ಥತೆಗಳು ಹಾಗೂ ಪರಿಹಾರ

By ರೇಖಾ ಬೆಳವಾಡಿ, ಆಪ್ತಸಲಹೆಗಾರರು
|
Google Oneindia Kannada News

ಗೃಹಿಣಿ ಯಶೋಧಾ ಬಹಳ ದಿನಗಳಿಂದ ತೀವ್ರ ಹೊಟ್ಟೆ ನೋವು ಎಂದು ವೈದ್ಯರನ್ನು ಕಾಣುತ್ತಾಳೆ. ತೆಗೆದುಕೊಂಡ ಮಾತ್ರೆ ಇಂದ ಸ್ವಲ್ಪ ಮಟ್ಟಿಗೆ ಹೊಟ್ಟೆನೋವು ಕಡಿಮೆಯಾಗುತ್ತದೆ. ಆದರೆ ಪದೇ ಪದೇ ಹೊಟ್ಟೆ ನೋವೆಂದು ವೈದ್ಯರ ಬಳಿ ಹೋಗುತ್ತಿರುತ್ತಾಳೆ. ಕುಟುಂಬದವರು ಸಹ ಸಹಕರಿಸುತ್ತಾರೆ. ಎಲ್ಲಾ ರೀತಿಯ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ತಪಾಸಣೆ ವರದಿಯಲ್ಲಿ (report) ಯಾವುದೇ ಚಿಂತಾಜನಕ ಅಂಶ ಗೋಚರಿಸುವುದಿಲ್ಲ. ಎಲ್ಲವೂ ಸಾಮಾನ್ಯವಾಗಿರುತ್ತದೆ (normal). ಹೊಟ್ಟೆ ನೋವಿನ ಕಾರಣ ತಿಳಿಯುವುದಿಲ್ಲ.

ತನಗೇನೋ ಆಗಿದೆ, ಈ ವೈದ್ಯರಿಗೆ ತಿಳಿಯುತ್ತಿಲ್ಲ, ಸಮಸ್ಯೆಗೆ ಯಾವುದೇ ಪರಿಹಾರ ಸಿಗುತ್ತಿಲ್ಲ ಎಂದು ಬೇರೊಂದು ವೈದ್ಯರ ಹತ್ತಿರ ಹೋಗುತ್ತಾಳೆ. ಅಲ್ಲಿಯೂ ಸಹ ರಿಪೋರ್ಟ್ ನಾರ್ಮಲ್ ಎಂದು ಬಂದಾಗ ಮತ್ತೊಂದು ವೈದ್ಯರ ಬಳಿ ಹೋಗುತ್ತಾಳೆ.

ಜೀವನದಲ್ಲಿ ''ಸಿಲುಕಿ ಹಾಕಿಕೊಂಡ'' ಭಾವನೆ, ಹೊರಬರೋದು ಹೇಗೆ?ಜೀವನದಲ್ಲಿ ''ಸಿಲುಕಿ ಹಾಕಿಕೊಂಡ'' ಭಾವನೆ, ಹೊರಬರೋದು ಹೇಗೆ?

ಹೀಗೆ ಅದೆಷ್ಟೋ ವೈದ್ಯರನ್ನು ಬದಲಿಸಿದ್ದಾಳೆ. ನೋವಿನ ಕಾರಣ ತಿಳಿಯುತ್ತಿಲ್ಲ. ಕುಟುಂಬ ಹಾಗು ಆಪ್ತರು ಯಶೋಧಾ ನಾಟಕವಾಡುತ್ತಿರಬಹುದು ಎಂದು ತಿಳಿಯುತ್ತಾರೆ.

ಮತ್ತೆ ಮತ್ತೆ ಜ್ವರದ ಅನುಭವ

ಮತ್ತೆ ಮತ್ತೆ ಜ್ವರದ ಅನುಭವ

ರೋಹಿತ್‌ಗೆ ರಾತ್ರಿಯ ಹೊತ್ತಲ್ಲಿ ಮೈ ಕೆಂಡದಂತೆ ಬಿಸಿ ಯಾಗುತ್ತಿದೆ ಎಂದು ಅನಿಸುತ್ತದೆ. ಜ್ವರದ ಅನುಭವ. ಮುಟ್ಟಿದರೆ ಜ್ವರವೇನೂ ಇಲ್ಲ. ಮೈ ಬಿಸಿಯೂ ಸಹ ಇಲ್ಲ. ಪದೇ ಪದೇ thermometer ಇಂದ ದೇಹದ ತಾಪಮಾನ ನೋಡಿಕೊಳ್ಳುತ್ತಿರುತ್ತಾನೆ. ಜ್ವರವಿಲ್ಲ ಆದರೂ ಏಕೆ ಹೀಗಾಗುತ್ತಿದೆ ಎಂದು ತಿಳಿಯುತ್ತಿಲ್ಲ. ಒಂದು ರೀತಿಯ ಸೋಲುವಂಥ ಸುಸ್ತು. ಯಾರ ಬಳಿಯೂ ಹೇಳಿಕೊಳ್ಳಲು ಆಗುತ್ತಿಲ್ಲ. ಮೈ ಕೈ ನೋವು ಸೆಳೆತ. ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ.

ದಿನದ ಸಮಯದಲ್ಲಿ ಮೈ ಬಿಸಿ ಅನಿಸುವುದಾಗಲೀ, ನೋವು ಸೆಳೆತವಾಗಲೀ ಅಷ್ಟಾಗಿ ಇರುವುದಿಲ್ಲ. ಆದರೂ ರಾತ್ರಿ ನಿದ್ದೆ ಸರಿಯಾಗದ ಕಾರಣ ಓದು ಬರಹ ಕಾಲೇಜಿನ ವಿಷಯದಲ್ಲಿ ಚಟುವಟಿಕೆ ಇಂದ ಭಾಗವಹಿಸಲು ಆಗುತ್ತಿಲ್ಲ. ಅಲ್ಲದೇ ರಾತ್ರಿ ಎಲ್ಲಾ ಪದೇ ಪದೇ ಎದ್ದು ದೀಪ ಹಾಕಿ ಓಡಾಡುತ್ತಿರುತ್ತಾನೆ. ರೋಹಿತ್‌ನ ವಿಚಿತ್ರ ವರ್ತನೆ ಕಂಡು ಅದೇ ಕೊಠಡಿಯಲ್ಲಿರುವ ಅವನ ಗೆಳೆಯನಿಗೆ ಕಿರಿ ಕಿರಿ ಉಂಟಾಗಿ ಕೊಠಡಿ‌ ಬದಲಿಸಲು ನಿರ್ಧರಿಸುತ್ತಾನೆ.

ರಾಹುಲ್ ತನ್ನ ಕುಟುಂಬದ ವೈದ್ಯರಲ್ಲಿ‌ ತನ್ನ ಸಮಸ್ಯೆ ಹೇಳಿಕೊಂಡಾಗ, ಈ ಸಮಸ್ಯೆಯು ಕೇವಲ ದೇಹಕ್ಕೆ ಸಂಬಂಧಿಸದೆ, ದೇಹ ಮತ್ತು‌ ಮನಸ್ಸು ಎರಡಕ್ಕೂ ಸಂಬಂಧಿತವಾಗಿರುವುದರಿಂದ ಮಾನಸಿಕ ತಜ್ಞರು ಹಾಗು ಆಪ್ತ ಸಮಾಲೋಚನೆಯ ನೆರವನ್ನು ಪಡೆಯಲು ತಿಳಿಸುತ್ತಾರೆ.

ತನಗೆ ಏನೋ ಆಗಿಬಿಟ್ಟಿದೆ ಎಂಬ ಭಯ

ತನಗೆ ಏನೋ ಆಗಿಬಿಟ್ಟಿದೆ ಎಂಬ ಭಯ

ನಮ್ಮಲ್ಲೂ ಅನೇಕರು ಈ ಸ್ಥಿತಿಯಲ್ಲಿ ಇರಬಹುದು. ದೇಹದ ವಿವಿಧ ಭಾಗಗಳಲ್ಲಿ‌ ನೋವು ಸೆಳೆತ, ಉರಿ, ಅನುಭವಿಸುತ್ತಿರಬಹುದು. ದಿನಕ್ಕೊಂದು ಭಾಗದಲ್ಲಿ ನೋವು ಕಾಣುತ್ತಿರಬಹುದು. ತನಗೆ ಏನೋ ಆಗಿಬಿಟ್ಟಿದೆ ಎಂಬ ಭಯ ಆವರಿಸುತ್ತದೆ.

ಎಲ್ಲಾ ರೀತಿಯ ವೈದ್ಯಕೀಯ ತಪಾಸಣೆಯಲ್ಲೂ ಯಾವುದೇ ಚಿಂತಾಜನಕ ಅಂಶಗಳು ಕಾಣುವುದಿಲ್ಲ. ದೇಹದ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುತ್ತವೆ. ಎಲ್ಲವೂ ಸರಿ ಇದೆ ಎಂದ ಮೇಲೆ ನೋವು, ಸೆಳೆತ, ಉರಿ ಏಕೆ ಎಂಬ ಗೊಂದಲ, ಆತಂಕದಲ್ಲೇ ದಿನ ರಾತ್ರಿ ಕಳೆಯುತ್ತಾರೆ. ಮನೆಯವರು ಅಕ್ಕಪಕ್ಕದವರು ತಾನು ನಾಟಕವಾಡುತ್ತಿದ್ದೇನೆ ಎಂದು ತಪ್ಪು ತಿಳಿದುಕೊಳ್ಳುತ್ತಾರೆ ಎಂದು ಕೊರಗುವಂತಾಗುತ್ತದೆ.

ದಿನ ನಿತ್ಯವೂ ಯಾರಿಗೆ ತಾನೆ ತನ್ನ ಜೊತೆ ಆಸ್ಪತ್ರೆಗೆ ಬರಲು ಸಾಧ್ಯ? ತನ್ನಿಂದ ಎಲ್ಲರ ಸಮಯ ಹಾಗು ಹಣ ವ್ಯರ್ಥ ಎಂಬುದೂ ಸಹ ಎನಿಸುತ್ತದೆ. ಖಿನ್ನತೆ ಇಂದ ಸಾಮಾಜಿಕವಾಗಿ ದೂರವಾಗಿಬಿಡುತ್ತಾರೆ.

ಈ ಸ್ಥಿತಿಯನ್ನು ಮಾನಸಿಕ ದೈಹಿಕ ಅಸ್ವಸ್ಥತೆಗಳು (Psycho Somatic Disorders) ಎನ್ನುತ್ತಾರೆ.

ಮಾನಸಿಕ ಸಮಸ್ಯೆಗಳು, ನೋವು, ಒತ್ತಡ ದೇಹದ ವಿವಿಧ ಭಾಗಗಳಲ್ಲಿ ನೋವು, ಉರಿ, ಸೆಳೆತ ಹಾಗು ಇನ್ನೂ ಅನೇಕ ರೀತಿಯಲ್ಲಿ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತದೆ.

ಎರಡು ಅಂಶಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ

ಎರಡು ಅಂಶಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ

ಮಾನಸಿಕ ದೈಹಿಕ ಲಕ್ಷಣಗಳು ಹಾಗು ಅಸ್ವಸ್ಥತೆ ಬಗ್ಗೆ ಎರಡು ಅಂಶಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ

* ಮೊದಲನೆಯದಾಗಿ ಮಾನಸಿಕ ದೈಹಿಕ ಅಸ್ವಸ್ಥತೆಯ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಹಾಗು ದಿನದಿಂದ ದಿನಕ್ಕೆ ಬದಲಾಗಬಹುದು.

* ಎರಡನೆಯದು ಸರಿಯಾದ ದೈಹಿಕ ತಪಾಸಣೆ ಮಾಡಿಸಿಕೊಂಡು, ಗಂಭೀರವಾದ ಯಾವುದೇ ದೈಹಿಕ ಸಂಬಂಧಿ ಸಮಸ್ಯೆಗಳು ಇಲ್ಲ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯ.

Psychology: ಆಲೋಚನೆ ನಿಗ್ರಹ, ದುರ್ಬಲ ಮನಸ್ಸು ಹತೋಟಿ ಹೇಗೆ?

ಸಾಮಾನ್ಯವಾಗಿ ಕಾಣುವ ಲಕ್ಷಣಗಳು

* ಉಬ್ಬು ಹೊಟ್ಟೆ
* ಮಲಬದ್ಧತೆ
* ಹೊಟ್ಟೆ ನೋವು
* ವಿವಿಧ ಭಾಗಗಳಲ್ಲಿ ನೋವು, ಸೆಳೆತ, ಉರಿ
* ಅಂಗೈ ಬೆವರಿಕೆ
* ಸೋಲು, ಸುಸ್ತು
* ಸ್ನಾಯುಗಳ ನೋವು
* ಬೆನ್ನು ನೋವು
* ಹೃದಯ ಬಡಿತದಲ್ಲಿ ಹೆಚ್ಚಳ
* ರಕ್ತದ ಒತ್ತಡದಲ್ಲಿ ಹೆಚ್ಚಳ
* ಉಸಿರಾಟದ ಸಮಸ್ಯೆಗಳು
* ನರಗಳ ಸಮಸ್ಯೆ
* ಎದೆ ನೋವು
* ಕುತ್ತಿಗೆ ಹಾಗು ಭುಜದಲ್ಲಿ ಒತ್ತಡ ನೋವು
* ನಿದ್ರಾಹೀನತೆ
* ಚರ್ಮದ ಸಮಸ್ಯೆಗಳು (psoriasis, rashes etc)

ಕಾರಣಗಳು
* ಅಸ್ತವ್ಯಸ್ತ ಜೀವನ ಶೈಲಿ
* ಮಾನಸಿಕ ನೋವು,
* ಭಾವನಾತ್ಮಕ ಸಮಸ್ಯೆಗಳು - ಭಾವನೆಗಳನ್ನು ಗುರುತಿಸುವಲ್ಲಿ ಹಾಗು ವ್ಯಕ್ತಪಡಿಸುವಲ್ಲಿ ತೊಂದರೆ
* ಕುಟುಂಬ, ಕೆಲಸ, ವೈಯುಕ್ತಿಕ ಒತ್ತಡಗಳು
* ಖಿನ್ನತೆ (history of depression in family)
* ಅಸಹಜ ಆತಂಕ (history of anxiety in family)
* ಜೀವನದ ಹಂತದಲ್ಲಿನ ಕೆಲವು ಬದಲಾವಣೆಗಳು
* ಆಘಾತಕಾರಿ ಘಟನೆಗಳ ಅನುಭವ
* ಬಾಲ್ಯದಲ್ಲಿನ ನಿರ್ಲಕ್ಷ್ಯ
* ಬಾಲ್ಯಾವಸ್ಥೆಯಲ್ಲಿನ ಆಘಾತಕಾರಿ ಅನುಭವಗಳು (childhood trauma) ಇತರೆ ಅಂಶಗಳು
ಇತರೆ ಅಂಶಗಳು

ಇತರೆ ಅಂಶಗಳು

ದೇಹದ ಮೇಲೆ ಪರಿಣಾಮ ಬೀರುತ್ತವೆ. ಮಾನಸಿಕ‌ ನೋವು ಒತ್ತಡ ವಿವಿಧ ನೋವು ಇತರ ಸಮಸ್ಯೆಯ ರೂಪದಲ್ಲಿ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ.

ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಅತಿ ಒತ್ತಡ, ಜೀರ್ಣ ವ್ಯವಸ್ಥೆ, ಹೃದಯ ಸಂಬಂಧಿ ತೊಂದರೆಗಳನ್ನು ಉಂಟುಮಾಡುತ್ತದೆ.
ದೀರ್ಘಕಾಲದ ವ್ಯಕ್ತಪಡಿಸಲಾಗದ ನೋವು, ಹತಾಶೆ, ಒತ್ತಡದಲ್ಲಿ ಬಿಡುಗಡೆಯಾದ ಹಾರ್ಮೋನ್‌ಗಳ ಮಟ್ಟದಲ್ಲಿ ಏರಿಳಿತಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯ (immune system) ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿ, ಅಸ್ವಸ್ಥತೆಗಳು ಉಲ್ಬಣವಾಗುತ್ತದೆ.

ಒಸಿಡಿ ಲಕ್ಷಣಗಳೇನು? ಒಸಿಡಿಗೆ ಔಷಧ ಹಾಗು ಮನೋಚಿಕಿತ್ಸೆ ಏನಿದೆ?

ಮಕ್ಕಳು ಮತ್ತು ಹದಿಹರೆಯ‌ವಯಸ್ಸಿನಲ್ಲಿ ಕೂಡ ಈ ಸಮಸ್ಯೆಗಳನ್ನು ಕಾಣಬಹುದು. ಓದಿನ‌ ಒತ್ತಡ, ಕುಟುಂಬದಲ್ಲಿ ಸಮಸ್ಯೆಗಳು, ಸಮವಯಸ್ಕರ ಒತ್ತಡ ಗಳು (peer pressure) ಕಾರಣ ಮಕ್ಕಳಲ್ಲಿ ಹೆಚ್ಚಾಗಿ ಹೊಟ್ಟೆ ನೋವು, ಉಸಿರಾಟದ ತೊಂದರೆ (short breaths) ಇನ್ನೂ ಅನೇಕ ಲಕ್ಷಣಗಳು ದೈನಂದಿನ ಚಟುವಟಿಕೆಗಳನ್ನು ನಿಭಾಯಿಸುವಲ್ಲಿ ಅಡ್ಡಿಯಾಗಬಹುದು. ಇದು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಅಡೆತಡೆ ಉಂಟುಮಾಡುತ್ತದೆ.

ಗಂಭೀರವಾಗಿ ಪರಿಗಣಿಸಬೇಕೇ?

ಗಂಭೀರವಾಗಿ ಪರಿಗಣಿಸಬೇಕೇ?

ಮಾನಸಿಕ ದೈಹಿಕ ಅಸ್ವಸ್ಥತೆಯನ್ನು ಗಂಭೀರವಾಗಿ ಪರಿಗಣಿಸಬೇಕೇ?

ಇದು ದೈನಂದಿನ ಚಟುವಟಿಕೆಗಳನ್ನು ಸಮರ್ಥ ವಾಗಿ ನಿಭಾಯಿಸಲು ಅಡ್ಡಿಯಾಗುವುದು.
ದೀರ್ಘಕಾಲದ ರೋಗ ಲಕ್ಷಣಗಳು, ಒತ್ತಡ, ಆತಂಕದಿಂದ ವ್ಯಕ್ತಿಯ ‌ದೈಹಿಕ, ಮಾನಸಿಕ, ಸಾಮಾಜಿಕ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುವುದು. ಆರೋಗ್ಯ ಸಮಸ್ಯೆಗಳು ಉಲ್ಬಣವಾಗುವುದು. ಇದು ಕುಟುಂಬ ಮೇಲೂ ಪರಿಣಾಮ ಬೀರಬಹುದು. ಆದ ಕಾರಣ ಸೂಕ್ತ ಪರಿಹಾರ, ನಿರ್ವಹಣೆ ಮತ್ತು ಚಿಕಿತ್ಸೆ ಪಡೆಯುವುದು ಮುಖ್ಯ.

ಹೀಗಿರುವಾಗ ದೈಹಿಕ ನೋವಿಗೆ ಔಷಧ/ ಚಿಕಿತ್ಸೆಯ ಜೊತೆಗೆ ಮಾನಸಿಕ‌ ಆರೋಗ್ಯ ಸುಧಾರಣೆಯೂ ಬಹಳ ಅಗತ್ಯ.

Body shaming ಭಯಬಿಡಿ; ಭಿನ್ನತೆಗಳನ್ನು ಸಹಜವಾಗಿ ಒಪ್ಪಿಕೊಳ್ಳಿ
ಚಿಕಿತ್ಸೆಗಳು ಮತ್ತು ನಿರ್ವಹಣೆ

ಚಿಕಿತ್ಸೆಗಳು ಮತ್ತು ನಿರ್ವಹಣೆ

* ಸುತ್ತಮುತ್ತಲ ಆಗುಹೋಗುಗಳು ಎಲ್ಲವೂ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ವಾಸ್ತವವನ್ನು ಅರಿಯುವ ಪ್ರಯತ್ನ ಮುಖ್ಯ.

* ಜೀವನ ಕ್ರಮದಲ್ಲಿ ಸುಧಾರಣೆ
* ಉತ್ತಮ ಆಹಾರ ಪಧ್ಧತಿ
* ವ್ಯಾಯಾಮ
* ಸಾಕಷ್ಟು ನಿದ್ರೆ, ವಿಶ್ರಾಂತಿ ಪಡೆಯಿರಿ
* ಧನಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳುವುದು

* ಭಾವನೆಗಳು, ಸಮಸ್ಯೆಗಳನ್ನು ಹತ್ತಿಕ್ಕದೆ ಮುಕ್ತವಾಗಿ ಮಾತನಾಡುವುದು.

* ಒತ್ತಡ ನಿರ್ವಹಣಾ ಕ್ರಮಗಳು - ಧ್ಯಾನ
* ಪ್ರಗತಿಶೀಲ ಸ್ನಾಯುವಿನ ವಿಶ್ರಾಂತಿ (Progressive muscle relaxation)

* ಮಾನಸಿಕ ತಜ್ಞರು (psychiatrist or psychologist) ಹಾಗು ಆಪ್ತ ಸಲಹೆಯ (counselling) ನೆರವು ಪಡೆಯುವುದು

* ಸೂಕ್ತ ಮಾನಸಿಕ ಚಿಕಿತ್ಸೆ (Psychotherapy)

* CBT- Cognitive Behavior Therapy

ಅರಿವಿನ ವರ್ತನೆಯ ಚಿಕಿತ್ಸೆ
ಇದು ವ್ಯಕ್ತಿಗೆ ತನ್ನ ಪರಿಸ್ಥಿತಿ ಹಾಗು ಸಂದರ್ಭಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆದು, ಸಮಸ್ಯೆ ಯನ್ನು ನಿಭಾಯಿಸಲು, ಪರಿಹರಿಸಲು ಹೊಸ ಮಾರ್ಗಗಳನ್ನು ಕಲಿಯಲು ಸಹಾಯ ಮಾಡುತ್ತದೆ.

* ಸೂಕ್ತ ವೈದ್ಯಕೀಯ ತಪಾಸಣೆ - ಔಷಧಗಳು

* ಖಿನ್ನತೆ ಶಮನಕಾರಿಗಳು (anti depressants)
* ವ್ಯಕ್ತಿ ತನ್ನ ಸಾಮರ್ಥ್ಯದ ಕಡೆ ಗಮನ ಹರಿಸುವುದು.

ಕುಟುಂಬದ ಪಾತ್ರ ಹಾಗು ಸಹಕಾರ ಅಗತ್ಯ

ಕುಟುಂಬದ ಪಾತ್ರ ಹಾಗು ಸಹಕಾರ ಅಗತ್ಯ

* ಭಾವನಾತ್ಮಕ ಅಗತ್ಯತೆಗಳನ್ನು ಪೊರೈಸಬಹುದು
* ಮುಕ್ತ ಹಾಗು ಪರಿಣಾಮಕಾರಿ ಸಂವಹನ
* ಭಾವನೆಗಳನ್ನು ಹತ್ತಿಕ್ಕದೆ ಮುಕ್ತವಾಗಿ ಮಾತನಾಡುವುದನ್ನು ಉತ್ತೇಜಿಸುವುದು ಉತ್ತಮ
* ಕುಟುಂಬದ ಬೆಂಬಲ ಸದಾ ಇದೆ ಎಂಬ ಧನಾತ್ಮಕ ಭಾವನೆ ಮೂಡಿಸುವುದು ಒಳ್ಳೆಯದು.
* ಕುಟುಂಬದವರಲ್ಲಿ ಮಾನಸಿಕ ಸ್ವಸ್ಥತೆ ಸಮಸ್ಯೆಗಳು, ನಿರ್ವಹಣಾ ಕ್ರಮಗಳ ಬಗ್ಗೆ ಅರಿವನ್ನು ಮೂಡಿಸುವುದು
* ಈ ಸಮಸ್ಯೆ ಇಂದ ಬಳಲುತ್ತಿರುವವರ ಬಗ್ಗೆ ಪ್ರೀತಿ ಸಹನೆ ಅಗತ್ಯ.


ಮಾನಸಿಕ ದೈಹಿಕ ಅಸ್ವಸ್ಥತೆಗಳು ಆಗಾಗ ಜೀವನದಲ್ಲಿ ಕಾಣಿಸಿಕೊಳ್ಳಬಹುದು. ಬಂದು ಹೋಗಬಹುದು. ಕಾರಣ ಹಾಗು ಲಕ್ಷಣಗಳನ್ನು ತಿಳಿದುಕೊಂಡು, ಕಾಲಾನಂತರದಲ್ಲಿ ಅವುಗಳನ್ನು ನಿರ್ವಹಿಸಲು ಕಲಿಯಬಹುದು. ಉತ್ತಮ ಜೀವನ ನಡೆಸಬಹುದು ಕೂಡ. ನೆರವನ್ನು ಪಡೆಯಿರಿ. ಧನಾತ್ಮಕವಾದ ಯೋಚಿಸಿ.‌

English summary
Psychosomatic disorder is a psychological condition involving the occurrence of physical symptoms, involving both mind and body, explained in Kannada by Rekha Belvadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X