• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psychology: ಆಲೋಚನೆ ನಿಗ್ರಹ, ದುರ್ಬಲ ಮನಸ್ಸು ಹತೋಟಿ ಹೇಗೆ?

By ರೇಖಾ ಬೆಳವಾಡಿ, ಆಪ್ತಸಲಹೆಗಾರರು
|
Google Oneindia Kannada News

ನೀವು ಗುಲಾಬಿ ಬಣ್ಣದ ಆನೆಯ ಬಗ್ಗೆ ಯೋಚಿಸಬೇಡಿ ಎಂದು ನಾನು ನಿಮಗೆ ಹೇಳಿದರೆ ಏನಾಗಬಹುದು? ಒಮ್ಮೆ ಪ್ರಯತ್ನಿಸಿ ನೋಡಿ.

ನೀವು ಯಾವುದರ ಬಗ್ಗೆಯಾದರೂ ಯೋಚಿಸಿ ಆದರೆ ದೊಡ್ಡ ಸನ್ ಗ್ಲಾಸ್ ಹಾಕಿರುವ, ಗುಲಾಬಿ ಬಣ್ಣದ ಕೋಟು ಹಾಕಿರುವ, ಗುಲಾಬಿ ಬಣ್ಣದ ಆನೆಯ ಬಗ್ಗೆ ಮಾತ್ರ ಯೋಚನೆ ಮಾಡಬೇಡಿ.

Psychology: Psychology: "ವಯಸ್ಸು" ಆಯ್ತು ಬಿಡು; ಈ ವಯಸ್ಸಿಗೆ (ಬ್ರಾಕೆಟ್) ಬೇಕೇ?

ನನ್ನ ಮಾತನ್ನು ಗಮನವಿಟ್ಟು ಕೇಳಿ, ಗಂಭೀರವಾಗಿ ಪರಿಗಣಿಸಿ. ಬೇರೆ ಯಾವುದೇ ವಿಚಾರದ ಬಗ್ಗೆ ಯೋಚಿಸಿ ಆದರೆ ಗುಲಾಬಿ ಬಣ್ಣದ ಆನೆಯ ಬಗ್ಗೆ ಮಾತ್ರ ಯೋಚಿಸಬೇಡಿ.

ಏನಾದರೂ ಆಗಲಿ, ಗುಲಾಬಿ ಆನೆಯ ಬಗ್ಗೆ ಮೂರು ನಿಮಿಷಗಳ ಕಾಲ ಯೋಚಿಸದೆ ಇರಲು ಪ್ರಯತ್ನಿಸಿ.
ಈಗ ಹೇಳಿ, ನೀವು ಗುಲಾಬಿ ಆನೆಯ ಬಗ್ಗೆ ಯೋಚಿಸದೇ ಇರಲು ಸಾಧ್ಯವಾಯಿತೇ? ಬಹುಶಃ ಇರಲಿಕ್ಕಿಲ್ಲ.

ಹಾಗಾದರೆ ಇದರ ಅರ್ಥವೇನು?: ನಾವು ಯಾವ ವಿಚಾರದ ಬಗ್ಗೆ ಪ್ರಯತ್ನಾಪೂರ್ವಕವಾಗಿ ಯೋಚಿಸಬಾರದೆಂದು ಯೋಚಿಸುತ್ತೇವೋ, ಆ ಆಲೋಚನೆಗಳು ಇನ್ನೂ ದಟ್ಟವಾಗಿ ಬೆಳೆಯುತ್ತಾ ಹೋಗುತ್ತದೆ. ಮನೋವಿಜ್ಞಾನದಲ್ಲಿ ಇದನ್ನು ''ಐರಾನಿಕ್ ಪ್ರೊಸೆಸ್ ಥಿಯರಿ'' ಎನ್ನುತ್ತಾರೆ. ಈ ಮೂಲಕ ಕೆಲವು ಆಲೋಚನೆಗಳನ್ನು ನಿಗ್ರಹಿಸುವ ಉದ್ದೇಶಪೂರ್ವಕ ಪ್ರಯತ್ನಗಳು ವಾಸ್ತವವಾಗಿ ಆಲೋಚನೆಗಳು ಗಾಢವಾಗಿ ಹೊರಹೊಮ್ಮುವ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ.

ನಮ್ಮ ಭಾವನೆಗಳ ಮೇಲೆ ಬಹಳವಾಗಿ ಪ್ರಭಾವ

ನಮ್ಮ ಭಾವನೆಗಳ ಮೇಲೆ ಬಹಳವಾಗಿ ಪ್ರಭಾವ

ನಮ್ಮ ಆಲೋಚನೆಗಳು ನಮ್ಮ ಭಾವನೆಗಳ ಮೇಲೆ ಬಹಳವಾಗಿ ಪ್ರಭಾವ ಬೀರುತ್ತದೆ. ಆಲೋಚನೆಗಳು ಧನಾತ್ಮಕವಾಗಿಯೂ ಇರಬಹುದು. ನಕಾರಾತ್ಮಕ ಆಲೋಚನೆಗಳೂ ಬರಬಹುದು. ನಮ್ಮ ಮಾತು ಮತ್ತು ಕೆಲಸ, ನಮ್ಮನ್ನು ನಾವು ಹೇಗೆ ನೋಡುತ್ತೇವೆ ಎಂಬುದರ ಮೇಲೆ ಪ್ರಭಾವ ಬೀರುತ್ತದೆ . ಧನಾತ್ಮಕವಾಗಿ ಯೋಚನೆಗಳು ವ್ಯಕ್ತಿಯ ಸಾಮರ್ಥ್ಯವನ್ನು ಇನ್ನಷ್ಟು ಬಲಗೊಳಿಸಬಹುದು. ನಕಾರಾತ್ಮಕ ಆಲೋಚನೆಗಳು ವ್ಯಕ್ತಿಯ ಸಾಮರ್ಥ್ಯವನ್ನು ದುರ್ಬಲಗೊಳಿಸಬಹುದು.

ಒಸಿಡಿ ಲಕ್ಷಣಗಳೇನು? ಒಸಿಡಿಗೆ ಔಷಧ ಹಾಗು ಮನೋಚಿಕಿತ್ಸೆ ಏನಿದೆ?ಒಸಿಡಿ ಲಕ್ಷಣಗಳೇನು? ಒಸಿಡಿಗೆ ಔಷಧ ಹಾಗು ಮನೋಚಿಕಿತ್ಸೆ ಏನಿದೆ?

ನಕಾರಾತ್ಮಕ ಆಲೋಚನೆ ಸುಲಭವಾಗಿ ಹೋಗಲ್ಲ

ನಕಾರಾತ್ಮಕ ಆಲೋಚನೆ ಸುಲಭವಾಗಿ ಹೋಗಲ್ಲ

ನಕಾರಾತ್ಮಕತೆ ಇಂದ ಬಳಲುತ್ತಿದ್ದರೆ, ನಾವು ಯೋಚಿಸಲು ಬಯಸದ ಆಲೋಚನೆಗಳು, ಚಿಂತನೆಗಳ ಬಗ್ಗೆ ಯೋಚಿಸದಿರುವುದು ನಿಜವಾಗಿಯೂ ಸಾಧ್ಯವಿಲ್ಲ. ಹೀಗಿರುವಾಗ ಮನಸ್ಸು ಶಾಂತಿಯುತವಾಗಿರಲು ಹೇಗೆ ಸಾಧ್ಯ?. ನಕಾರಾತ್ಮಕ ಆಲೋಚನೆಗಳು ಬರುವಷ್ಟೇ ಸುಲಭವಾಗಿ ಹೋಗುವುದಿಲ್ಲ. ನಾವು ಎಷ್ಟು ಹತ್ತಿಕ್ಕುವ ಪ್ರಯತ್ನ ಮಾಡುತ್ತೇವೋ ಅಷ್ಟೇ ಗಾಢವಾಗಿ ಬೆಳೆಯುತ್ತಾ ಹೋಗುತ್ತದೆ. ಮತ್ತೊಬ್ಬರಿಗೆ ''ಅದರ ಬಗ್ಗೆ ಯೋಚಿಸಬೇಡ ಎಲ್ಲ ಸರಿಹೋಗುವುದು'' ಎಂದು ಹೇಳಿದರೂ ಕೂಡ ಪದೇ ಪದೇ ಕಾಡುವ ಆಲೋಚನೆಗಳ ತಳಮಳದ ಬಗ್ಗೆ ಅರಿವು ಇದ್ದೇ ಇರುತ್ತದೆ. ಇದೊಂದು ಅಸಹಾಯಕ ಪರಿಸ್ಥಿತಿ.

ಚಿಂತೆ ಮಾಡುವ ಒಂದು ಲಕ್ಷಣ ಹೀಗಿರುತ್ತೆ...

ಚಿಂತೆ ಮಾಡುವ ಒಂದು ಲಕ್ಷಣ ಹೀಗಿರುತ್ತೆ...

ಚಿಂತೆ ಮಾಡುವ ಒಂದು ಲಕ್ಷಣವೆಂದರೆ ''ಆಗಿದ್ದರ ಬಗ್ಗೆ ಪದೇ ಪದೇ ಯೋಚನೆ ಮಾಡುವುದೇ '' ಹೊರತು ಅದಕ್ಕೆ ಕಾರಣ ಕಂಡುಹಿಡಿಯುವುದಾಗಲೀ ಅಥವಾ ಮುಂದಿನ ಪರಿಹಾರದ ಬಗ್ಗೆ ಯೋಚನೆ ಮಾಡದಿರುವುದು. ಪ್ರಶ್ನೆ ಯಲ್ಲೇ ಸಿಕ್ಕು ಹಾಕಿಕೊಲ್ಳುತ್ತೇವೆಯೇ ಹೊರತು ಸಮಾಧಾನ ಹುಡುಕುವ ಸಾಮರ್ಥ್ಯ ಅಡಗಿರುತ್ತದೆ . ಮೂಲಭೂತವಾಗಿ ಮನಸ್ಸು ನಕಣಾರಾತ್ಮಕ ಯೋಚನೆಗಳ ಬಗ್ಗೆ ಯೋಚಿಸದಿರುವಂತೆ ಮಾಡುವ ಪ್ರಕ್ರಿಯೆಯೇ , ಯೋಚನೆಗಳು ಸಮೀಪ ಸುಳಿಯುವಂತೆ ಮಾಡುತ್ತದೆ.
ಹಾಗಾದರೆ ನಮ್ಮ ಒಳನುಗ್ಗುವ ಆಲೋಚನೆಗಳ ಬಗ್ಗೆ ಯೋಚಿಸುವುದನ್ನು ಹೇಗೆ ನಿಲ್ಲಿಸಬಹುದು.

Body shaming ಭಯಬಿಡಿ; ಭಿನ್ನತೆಗಳನ್ನು ಸಹಜವಾಗಿ ಒಪ್ಪಿಕೊಳ್ಳಿBody shaming ಭಯಬಿಡಿ; ಭಿನ್ನತೆಗಳನ್ನು ಸಹಜವಾಗಿ ಒಪ್ಪಿಕೊಳ್ಳಿ

ಸಕಾರಾತ್ಮಕ ಬಾಷೆಯನ್ನಾಗಿ ಬದಲಾಯಿಸಬಹುದು

ಸಕಾರಾತ್ಮಕ ಬಾಷೆಯನ್ನಾಗಿ ಬದಲಾಯಿಸಬಹುದು

ನಕಾರಾತ್ಮಕ ಭಾಷೆಯು, ಸಕಾರಾತ್ಮಕ ಬಾಷೆಯನ್ನಾಗಿ ಬದಲಾಯಿಸಬಹುದು.
ಮೊದಲನೆಯದಾಗಿ - ನಮಗೆ ಯಾವುದು ಸಂತೋಷದಾಯಕವಲ್ಲ ಎಂಬುದರ ಬಗ್ಗೆ ಮಾತನಾಡುವುದು, ನಿರಾಶೆ ವ್ಯಕ್ತಪಡಿಸುವುದು ಹೆಚ್ಚು. ಈ ಭರದಲ್ಲಿ ನಮಗೆ ಸಂತೋಷದಾಯಕವಾದ ಅನೇಕ ವಿಚಾರಗಳ ಬಗ್ಗೆ ಮಾತಾಡುವುದೇ ಇಲ್ಲ. ಆದರೆ, ಸಕಾರಾತ್ಮಕವಾಗಿ ಯೋಚಿಸಿದರೆ, ತಕ್ಕಡಿಯಲ್ಲಿ ಸಕಾರಾತ್ಮಕ ಆಲೋಚನೆಗಳೇ ಹೆಚ್ಚಾಗಿ ತೂಗುವುದಲ್ಲವೇ. ಇದು ಸಾಧ್ಯ.
ಈಗ ನಿಮಗೆ ನೀವೆ ಕೆಲವು ಪ್ರಶ್ನೆ ಹಾಕಿಕೊಂಡು , ಉತ್ತರ ಕಂಡುಹಿಡಿದುಕೊಳ್ಳಿ.
* ನೀವು ಚಿಂತೆ ಮಾಡುವ ವಿಷಯಗಳು ಯಾವುವು?
* ನೀವು ಏನನ್ನು ಸಾಧಿಸಲು ಬಯಸುತ್ತೀರಿ?
* ಇದರ ಬಗ್ಗೆ ನೀವು ಏನು ಮಾಡಬಹುದಾಗಿದೆ?
* ಚಿಂತೆ ಮಾಡುವುದರಿಂದ ನನಗಾಗುವ ಪ್ರಯೋಜನಗಳೇನು?
ಉತ್ತರಗಳನ್ನು ಒಂದೆಡೆ ಪಟ್ಟಿ ಮಾಡಿದಾಗ, ನಿಮ್ಮ ಪ್ರಶ್ನೆಗಳು ಹಾಗು ಅದಕ್ಕೆ ಪರಿಹಾರ ನಿಮಗೇ ಸ್ಪಷ್ಟವಾಗಿ ಗೋಚರಿಸುತ್ತಿದೆ. ನಕಾರಾತ್ಮಕ ಚಿಂತನೆಗಳನ್ನು, ಸಕಾರಾತ್ಮಕವನ್ನಾಗಿ ಪರಿವರ್ತಿಸುವ ಸಾಮರ್ಥ್ಯ, ಶಕ್ತಿ ಮನುಷ್ಯನಿಗಿದೆ.

2) ನಿಮ್ಮನ್ನು ನೀವು ವಿಚಲಿತಗೊಳಿಸಿ

2) ನಿಮ್ಮನ್ನು ನೀವು ವಿಚಲಿತಗೊಳಿಸಿ

ನಮಗೆ ನಾವು ಹೊಸ ಆಲೋಚನೆಯೊಂದನ್ನು ಅಣಿ ಮಾಡಿದಾಗ, ಸ್ವಾಭಾವಿಕವಾಗಿ ಹೊಸ ಆಲೋಚನೆಯಲ್ಲಿ ಸಕಾರಾತ್ಮಕ, ಸಾಮರ್ಥ್ಯ ಬೆಂಬಲಿಸುವ ವಿಚಾರದಲ್ಲಿ ತೊಡಗಿಸಿಕೊಳ್ಳುವುದು ಒಳಿತು. ಇದರಿಂದ ನಕಾರಾತ್ಮಕ ಚಿಂತನೆ ಕಡಿಮೆಯಾಗುತ್ತಾ ಹೋಗುತ್ತದೆ. ಇದು ಹೇಗೆ ಎಂದರೆ ಮನಸ್ಸು ಖಾಲಿ ತೋಟದಂತೆ. ಹೊಸ ಗಿಡಡಗಳನ್ನು ಹೆಚ್ಚಾಗಿ ನೆಟ್ಟು ಪೋಷಿಸಿದರೆ, ಕಳೆ ಬೆಳೆಯಲು ಜಾಗವೇ ಇರುವುದಿಲ್ಲ. ಅಲ್ಲೊಂದು ಇಲ್ಲೊಂದು ಹುಟ್ಟುವ ಕಳೆ ಇಂದ ಅಷ್ಟಾಗಿ ನಷ್ಟ ಇಲ್ಲ ಅಲ್ಲದೇ ಸುಲಭವಾಗಿ ಕಿತ್ತು ಹಾಕಬಹುದು.

ಚಂಚಲ ಮನಸ್ಸನ್ನು ಹತೋಟಿಗೆ ತರಲು ಧ್ಯಾನ ಪರಿಣಾಮಕಾರಿ ಮಾರ್ಗಚಂಚಲ ಮನಸ್ಸನ್ನು ಹತೋಟಿಗೆ ತರಲು ಧ್ಯಾನ ಪರಿಣಾಮಕಾರಿ ಮಾರ್ಗ

ಉಪಯುಕ್ತ ಆಲೋಚನೆಯೊಂದಿಗೆ ಬದಲಿಸಿ

ಉಪಯುಕ್ತ ಆಲೋಚನೆಯೊಂದಿಗೆ ಬದಲಿಸಿ

3) ಪ್ರತಿ ದಿನ ಸಾವಿರಾರು ಯೋಚನೆಗಳು ನಮ್ಮನ್ನು ಸುಳಿಯುತ್ತವೆ‌. ಕಳೆದ ಎರಡು ಗಂಟೆಗಳಲ್ಲಿ ಯಾವ ಯೋಚನೆಗಳು ನಮ್ಮನ್ನು ಆವರಿಸಿದ್ದವು ಎಂದು ಒಮ್ಮೆ ಗಮನಿಸಿ. ಉದಾಹರಣೆಗೆ
ಊಟಕ್ಕೆ ಏನು ತಯಾರಿ ಮಾಡಬೇಕು?
ನಾಳೆ ಮೀಟಿಂಗ್ ಅಲ್ಲಿ ಏನೇನು ವಿಷಯ ಚರ್ಚೆಯಾಗಬಹುದು?
ಒಂದು ಮಿಲಿಯನ್ ಗೆದ್ದರೆ ಏನು ಮಾಡಬಹುದು?
ಮುಂದಿನ ಅಂಕಣಕ್ಕೆ ಯಾವ ವಿಷಯ ಆಯ್ಕೆ ಮಾಡಬಹುದು?
ನೆನ್ನೆ ವಾರ್ತೆಯಲ್ಲಿ ಕೊರೋನಾ ಪ್ರಕರಣಗಳು ಜಾಸ್ಥಿಯಾಗಿದೆ ಎಂದಿದ್ದಾರೆ ಏನಾಗುವುದೋ ಏನೋ?
ಮುಂದಿನ ಲಸಿಕೆ ಯಾವ ಕಾಲಕ್ಕೆ ಸಿಗುವುದೋ ಏನೋ? ಹೀಗೆ ಹಲವಾರು
ಪ್ರತೀ ಆಲೋಚನೆಗಳಿಗೆ ಸಮವಾದ ಪ್ರಾಮುಖ್ಯತೆ ನೀಡಿದ್ದೀರಾ?ಯಾವ ಆಲೋಚನೆಗೆ ಹೆಚ್ಚಿನ ಸಮಯ ಹಿಡಿಯಿತು? ಆ ಆಲೋಚನೆಯ ವಿಷಯ ನಿಮ್ಮ ಹಿಡಿತದಲ್ಲಷ್ಟೇ ಇದೆಯೇ? ಇದ್ದರೆ ಸರಿ, ಇಲ್ಲದಿದ್ದರೆ ಉಪಯುಕ್ತವಲ್ಲದ ಸಮಯ ವ್ಯರ್ಥವಾಗುತ್ತಿರುವ ಆಲೋಚನೆಯನ್ನು ಮತ್ತೊಂದು ಉಪಯುಕ್ತ ಆಲೋಚನೆಯೊಂದಿಗೆ ಬದಲಿಸಿ.

ನಕಾರಾತ್ಮಕ ಆಲೋಚನಾ ಸಮಯ

ನಕಾರಾತ್ಮಕ ಆಲೋಚನಾ ಸಮಯ

4) NTT- negative thought time.. ನಕಾರಾತ್ಮಕ ಆಲೋಚನಾ ಸಮಯವನ್ನು ಪಾಲಿಸಿ. ದಿನದಲ್ಲಿ ಹತ್ತು ನಿಮಿಷಗಳು ಮೀಸಲಿಟ್ಟು , ಪಟ್ಟಿಮಾಡಿದ ದಿನದ ನಕಾರಾತ್ಮಕ ಯೋಚನೆಗಳು , ವಿಷಯಗಳು ಹಾಗು ಸಮಯವನ್ನು ವಿಶ್ಲೇಷಣೆ ಮಾಡಿ. ಖಂಡಿತವಾಗಿ ಸಹಕಾರಿ.
5) ನೀವು ಬದಲಾಯಿಸಬೇಕು ಎನ್ನುವ ಯೋಚನೆ ಗುರುತಿಸಿ. ಆಲೋಚನೆಗೆ ಧ್ವನಿ ನೀಡಿ. ಯೋಚನೆಗಳಯ ಧ್ವನಿಯಾದಾಗ ಸ್ಪಷ್ಟತೆ ದೊರೆಯುತ್ತದೆ.
6) ನೀವು ಪ್ರೀತಿಸುವ, ಇಷ್ಟಪಡುವ ವಿಷಯಗಳನ್ನು ಪ್ರಜ್ಞಾಪೂರ್ವಕವಾಗಿ ಪ್ರಶಂಸಿಸಿ.

ಮನವೆಂಬ ಮರ್ಕಟವ ತಡೆಯಲಾರೆನೊ ದೇವಮನವೆಂಬ ಮರ್ಕಟವ ತಡೆಯಲಾರೆನೊ ದೇವ

ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಿ

ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಿ

7) ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ಅದರ ಬಗ್ಗೆ ತಿಳಿಯುವ ಪ್ರಯತ್ನ ಮಾಡಿ.
8) Affirmation ಧನಾತ್ಮಕತೆ ಪುಷ್ಟೀಕರಿಸುವ ವ್ಯಾಖ್ಯಾನಗಳನ್ನು ಹೆಚ್ಚಾಗಿ ಬಳಸಿ ಮತ್ತು ಬರೆಯಿರಿ.
9) ನಿಮ್ಮ ಯಶಸ್ಸಿನ ದಿನಚರಿಯನ್ನು ಅಭಿವೃದ್ದಿಪಡಿಸಿ.
10)ಸಕಾರಾತ್ಮಕ ಆಲೋಚನೆಗಳನ್ನು ಹಾಗು ಯಶಸ್ಸಿನ ( Visualization )ದೃಶ್ಯೀಕರಣ ಬಹಳ ಸಹಕಾರಿ.
ಸಕಾರಾತ್ಮಕ ಯೋಚನೆಗಳಿಗೆ ನೀರೆರೆದರೆ, ಸ್ವಾಭಾವಿಕವಾಗಿ ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗುತ್ತವೆ. ಒತ್ತಾಯಪೂರ್ವಕವಾಗಿ ಆಲೋಚನೆಗಳನ್ನು ಹತ್ತಿಕ್ಕುವ ಬದಲು, ಪ್ರಜ್ಞಾಪೂರ್ವಕ ವಾಗಿ ಸಕಾರಾತ್ಮಕ, ಆಲೋಚನೆಗಳನ್ನು ಬೆಳೆಸಿಕೊಳ್ಳುವ ಪ್ರಯತ್ನ , ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ. ಸವಾಲುಗಳನ್ನು ಉತ್ತಮವಾಗಿ ಎದುರಿಸಲು ಸಹಕಾರಿಯಾಗುತ್ತದೆ.

English summary
In psychology, this phenomenon is known as the “ironic process theory,” whereby deliberate attempts to suppress certain thoughts actually make them more likely to surface!. How to over come it explains Rekha Belvadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X