• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮ್ಮೇಳನ ಕಾರ್ಯಕರ್ತರಿಗೆ ಕೈಜೋಡಿಸಿ ನಮನ

By * ಶಾಮಿ, ಡೆಲವೇರ್ ಕಣಿವೆ, ಅಮೆರಿಕಾ
|

Usha Prasannakumar
ಹಡ್ಸನ್ ನದೀತಟದ ಉದ್ಯಾನರಾಜ್ಯ ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ಜರುಗಿದ6ನೇ ಅಕ್ಕ' ವಿಶ್ವ ಕನ್ನಡ ಸಮ್ಮೇಳನ ಇತಿಹಾಸದ ಕಾಲಗರ್ಭ ಸೇರಿದೆ. ಪ್ರತಿನಿಧಿಗಳು ತಮ್ಮತಮ್ಮ ಊರುಗಳಿಗೆ ತೆರಳಿ ತಮ್ಮ ನಿತ್ಯಜೀವನಕ್ಕೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ. ಕವಿ ಹೇಳುವ ಹಾಗೆ 'ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ; ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ...'

ಪೂರ್ವ ಮತ್ತು ಪಶ್ಚಿಮ ಕರಾವಳಿಯ ನೂರಾರು ನಗರಗಳಲ್ಲಿ, ಅಷ್ಟೇ ಏಕೆ ದೂರದ ಕರ್ನಾಟಕದ ಹಳ್ಳಿಪಟ್ಟಣಗಳಲ್ಲಿ ಸಮ್ಮೇಳನಾನಂತರದ ನೆನಪುಗಳು ಮೆಲುಕು ಹಾಕಲು ಆರಂಭಿಸಿವೆ. ಈಮಧ್ಯೆ, ಪ್ರಪಂಚದ ಕಣ್ಣಿಗೆ ಸಮ್ಮೇಳನ ಮುಗಿದಿರಬಹುದು; ಆದರೆ ಹತ್ತು ತಿಂಗಳ ಕಾಲ ಹಗಲೂ ಇರುಳೂ ತನುಮನಧನ ಮತ್ತು ಕನ್ನಡಪ್ರೇಮದಿಂದ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಕನ್ನಡದ ಕಟ್ಟಾಳುಗಳಿಗೆ ಸಮ್ಮೇಳನ ಈಕ್ಷಣಕ್ಕೂ ಪ್ರಸ್ತುತ.

ಐದು ಸಾವಿರದಷ್ಟು ಪ್ರತಿನಿಧಿಗಳಿಗೆ ಅತಿಥಿಸತ್ಕಾರ, ಮತ್ತು ಅಂದುಕೊಂಡಂತೆ ಕಾರ್ಯಕ್ರಮಗಳನ್ನು ಸಾಕ್ಷಾತ್ಕಾರ ಮಾಡುವ ತತ್ಪರತೆಯಲ್ಲಿ ಯಾವೊಬ್ಬ ಸ್ವಯಂಸೇವಕನೂ ಯಾವೊಂದೂ ಕಾರ್ಯಕ್ರಮವನ್ನೂ ಕಣ್ತುಂಬ ನೋಡಿ ಆನಂದಿಸಲಿಲ್ಲ. ಅನೇಕರು ತುತ್ತು ಅನ್ನವನ್ನೂ ತಿನ್ನದೆ ಕೆಲಸ ಮಾಡಿದ್ದುಂಟು. ಯಾರಿಗೂ ಯಾರ ಕೃತಜ್ಞತೆಯ ಅವಶ್ಯಕತೆಯೂ ಇಲ್ಲ. ತಾವು ಮಾಡಿದ ಕೆಲಸ ಸಮರ್ಪಕವಾಗಿದ್ದರೆ ಅಷ್ಟೇ ಸಾಕು. ಇವು ಧನ್ಯತಾಭಾವ ಸ್ಫುರಿಸುವ ಕ್ಷಣಗಳು.

ಸಮ್ಮೇಳನ ನಿರ್ವಹಣೆಯ ಜವಾಬ್ದಾರಿಯನ್ನು ಪ್ರೀತಿಯಿಂದ ತಲೆಮೇಲೆ ಹೊತ್ತು ತಿರುಗಿದ ಬೃಂದಾವನ ಕನ್ನಡ ಸಂಘದ ಸ್ಫೂರ್ತಿ ಮತ್ತು ಪ್ರವಾಸ ತಂಡದವರು ಸ್ವಯಂಸೇವಕರಿಗೆ ಅಭಿನಂದನೆಗಳನ್ನು ಹೇಳುವ ಮೂಲಕ ಧನ್ಯವಾದ ಅರ್ಪಿಸುವ ಕಾರ್ಯಕ್ರಮ ವ್ಯವಸ್ಥೆಯಾಗಿದೆ. ಬರುವ ಭಾನುವಾರ ಸೆಪ್ಟೆಂಬರ್ 12ರಂದು Hightstown High School, 25 Leshine Lane, Hightstown NJ ದಲ್ಲಿ ಮಧ್ಯಾಹ್ನ 2 ಗಂಟೆಗೆ ಈ ಕಾರ್ಯಕ್ರಮ ಆರಂಭವಾಗುತ್ತದೆ. ಬೃಂದಾವನದ ಎಲ್ಲ ಸದಸ್ಯರಿಗೆ ಮತ್ತು WKC2010 ಸಮ್ಮೇಳನದ ಪ್ರತಿಯೊಬ್ಬ ಸ್ವಯಂಸೇವಕರಿಗೆ ಕಾರ್ಯಕ್ರಮಕ್ಕೆ ಮುಕ್ತ ಆಹ್ವಾನ.

*2 ಗಂಟೆಗೆ : ಉಭಯ ಕುಶಲೋಪರಿ

* 2.30ಕ್ಕೆ : ಗಣೇಶಸ್ತುತಿ, ಸಂಕೇತ ಗೀತೆ, ಸ್ವಾಗತ ಭಾಷಣ

* 2.45 ರಿಂದ : ಕರ್ನಾಟಕದಿಂದ ಬಂದ ವೃತ್ತಿಪರ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. ಒಟ್ಟು ಆರು ವಿಭಿನ್ನ ಕಾರ್ಯಕ್ರಮಗಳ ನಡುನಡುವೆ ಸಮ್ಮೇಳನದ ಒಮ್ಮೆಗೆ ಆರರಂತೆ ಒಟ್ಟು 36ಸಮಿತಿಗಳಿಗೆ ಧನ್ಯವಾದ ಸಲ್ಲಿಕೆ.

ಸಾಂಸ್ಕೃತಿಕ ಕಾರ್ಯಕ್ರಮಗಳು:

* ಎಂ.ಡಿ.ಕೌಶಿಕ್ ಅವರಿಂದ ಮ್ಯಾಜಿಕ್ ಶೋ

* ಪ್ರಭಾತ ಕಲಾವಿದರಿಂದ ನೃತ್ಯರೂಪಕ ಪಂಚವಟಿ'

* ಭ್ರಮರಿ ಡ್ಯಾನ್ಸ್ ತಂಡದವರಿಂದ 'ಶರಣು ಜನಪದಕೆ'

* ಪ್ರಭಾತ ಕಲಾವಿದರಿಂದ ಬೊಮ್ಮನಹಳ್ಳಿಯ ಕಿಂದರಿಜೋಗಿ'

* ಕರ್ನಾಟಕ ಕಲಾದರ್ಶಿನಿ ತಂಡದವರಿಂದ ಯಕ್ಷಗಾನ

* ಪ್ರಭಾತ ಕಲಾವಿದರಿಂದ ಮಹಿಷಾಸುರ ಮರ್ದಿನಿ'

ಕಡೆಯದಾಗಿ ಕರ್ನಾಟಕದ ಜನಪದ ಕಲಾವಿದರಿಂದ ಜಾನಪದ ಝೇಂಕಾರ

ಎಂಟು ಗಂಟೆಗೆ ವಂದನಾರ್ಪಣೆ. ನಂತರ ಮಿತಭೋಜನ. ಕಾರ್ಯಕ್ರಮ ಭಾನುವಾರ ಮಧ್ಯಾಹ್ನ ಇರುವುದರಿಂದ ನ್ಯೂಜೆರ್ಸಿ ಅಲ್ಲದೆ ಪೆನ್ಸಿಲ್ವೇನಿಯಾ, ಡೆಲವೇರ್, ನ್ಯೂಯಾರ್ಕ್, ಕನೆಕ್ಟಿಕಟ್ ಮುಂತಾದ ಸಂಸ್ಥಾನಗಲ್ಲಿರುವ ಸ್ವಯಂಸೇವಕರೂ ತಪ್ಪದೆ ಬಂದು ಭಾಗವಹಿಸಿ ಬೃಂದಾವನದ ಕೀರ್ತಿ ಮತ್ತು 'ಅಕ್ಕ'ನ ಹಿರಿಮೆಯಲ್ಲಿ ತಾವೂ ಒಂದಾಗಲಿ ಎಂಬ ಬಯಕೆ ಬೃಂದಾವನದ ಅಧ್ಯಕ್ಷೆ ಉಷಾ ಪ್ರಸನ್ನ ಅವರದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more