ಅಕ್ಕ ಸಮ್ಮೇಳನ ಮುನ್ನೋಟದ ಹನಿಗಳು ಭಾಗ 2
ಕೂಟದವರಿಂದ
ಈ ಸಲದ ಅಕ್ಕ!
ನೂರಕ್ಕೆ
ನೂರರಷ್ಟು
ಮನೋರಂಜನೆ ಪಕ್ಕಾ!
ಬರುತ್ತಿದೆಯಂತೆ
ಸ್ಯಾಂಡಲ್‌ವುಡ್‌ನಿಂದ
ತಾರೆಗಳ ದಂಡು!
ಸ್ಟಾರ್-ನೈಟ್‌ನಲ್ಲಿ
ಮಿಂಚಲಿದ್ದಾರೆ
ಮಂಡ್ಯದ ಗಂಡು!
ಚಿತ್ರನಟಿ ರಮ್ಯಾ
ಬತಾ೯ರಂತೆ
ಬೆಂಗಳೂರಿನಿಂದ!
ಪ್ರತಿಸಲದಂತೆ
ಈ ಸಲನೂ ಇತಾ೯ರೆ
ರಮೇಶ್ ಅರವಿಂದ!
ಬೆಳೆಯುತ್ತಾ
ಇದೆಯಂತೆ
ಅಲ್ಲಿಂದ ಬರೋ
ಗೆಸ್ಟುಗಳ ಲಿಸ್ಟು!
ನೋಡಲು
ಮರೆಯದಿರಿ
ಹಾಸ್ಯ ನಾಟಕ
ಆಲ್-ದಿ-ಬೆಸ್ಟು!
ಸಮ್ಮೇಳನದಲ್ಲಿ
ಒಟ್ಟು ಆರು
ಸ್ಟೇಜ್‌ಗಳಂತೆ
ನೋಡಣ್ಣ!
ಮೇನ್-ಸ್ಟೇಜ್‌ಗೆ
ಇಟ್ಟಿರೋ ಹೆಸರು
ಗುಬ್ಬಿ ವೀರಣ್ಣ!
ದಿಟ್ಟ ಹೆಜ್ಜೆ
ಹಾಕಲಿದ್ದಾನೆ
ಅಮೇರ್ರಿಕಾದಲ್ಲಿ
ಗಜರಾಜ!
ನೋಡಬನ್ನಿ
ನಗೆನಾಟಕ
ಅಮೇರ್ರಿಕಾದಲಿ
ಕಣ್ತುಂಬ
ನೋಡಲು
ಇದೆಯಂತೆ
ಲೆಸರ್-ಶೋ!
ಮನಸೊರೆಗೊಳ್ಳಲು
ವಿನೂತನ
ಫ್ಯಾಶನ್-ಶೋ!
ಒಬ್ಬಂಟಿಗಳ
ಸಲುವಾಗಿ
ಇದೆಯಂತೆ
ಸಿಂಗಲ್ಸ್-ಮೀಟು!
ಬ್ರಹ್ಮಚಾರಿಗಳಿಗೆ
ಸಿಕ್ಕರೆ ಸಿಗಬಹುದು
ಸೊಲ್-ಮೇಟು!
ಕಲಾವಿದರಿಂದ
ನೃತ್ಯನಾಟಕ
ಕಿಂದರಿ ಜೋಗಿ!
ಆದ್ಯಾತ್ಮಕತೆಗೆ
ಆಟ್೯-ಆಫ್
ಲೀವಿಂಗ್‌ನ
ರವಿಶಂಕರ್ ಯೋಗಿ!
ಕನ್ನಡಿಗರನ್ನು
ಕರೆಯುತ್ತಿದೆ
ನ್ಯೂ ಜೆಸಿ೯
ಕೂಗಿ ಕೂಗಿ!
ನಗುನಗುತ್ತಾ
ಸಮ್ಮೇಳನಕ್ಕೆ
ಒಮ್ಮೆ ಹಾಗೆ
ಬಂದು ಹೋಗಿ!
ಅಕ್ಕ ಸಮ್ಮೇಳನ ಮುನ್ನೋಟದ ಹನಿಗಳು : ಭಾಗ 1