ವಾಸ್ತು ಪ್ರಕಾರ ಖಾಲಿ ಜಾಗ ಬಳಕೆ ಹೇಗೆ? ತಪ್ಪು ಮಾಡಿದರೆ ಕಷ್ಟಗಳು ಖಚಿತ
ಇಂದಿನ ದಿನಗಳಲ್ಲಿ ಮನೆಗಳಲ್ಲಿರುವ ಖಾಲಿ ಜಾಗವನ್ನು ಹಲವರು ವಾಸ್ತು ಪರಿಗಣಿಸದೆ ಬಳಸುತ್ತಿದ್ದಾರೆ. ಆದರೆ ತಜ್ಞರ ಪ್ರಕಾರ ಖಾಲಿ ಜಾಗದ ಬಳಕೆ ಬಗ್ಗೆ ಸರಿಯಾಗಿದ್ದರೆ ಅದು ಆರ್ಥಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು.
ವಿಶೇಷವಾಗಿ ಈಶಾನ್ಯ ದಿಕ್ಕಿನಲ್ಲಿ ಭಾರವಾದ ವಸ್ತುಗಳನ್ನು ಇಡುವುದು ಅಶುಭ ಎಂದು ಹೇಳಲಾಗುತ್ತದೆ. ಅದೇ ರೀತಿ ನೈಋತ್ಯ ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದರೆ ಮನೆಯ ಸದಸ್ಯರಿಗೆ ಅನಾನುಕೂಲಗಳು ಉಂಟಾಗುವ ಸಾಧ್ಯತೆಯು ಇರುತ್ತದೆ.

ದಿಕ್ಕಿನ ಪ್ರಕಾರ ಖಾಲಿ ಜಾಗದ ನಿಯಮಗಳು
ವಾಸ್ತು ಪ್ರಕಾರ ಮನೆಯ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಹೆಚ್ಚು ಖಾಲಿಯಾದ ಜಾಗ ಇರಬೇಕು. ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಕಡಿಮೆ ಜಾಗ ಇದ್ದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಜಾಗವು ಖಾಲಿ ಇದ್ದರೆ ಮತ್ತು ಅದು ಮನೆಗಿಂತ ಎತ್ತರದಲ್ಲಿ ಇದ್ದರೆ ಅದು ಉತ್ತಮ ಎಂದು ತಜ್ಞರ ಅಭಿಪ್ರಾಯವಾಗಿದೆ.
ನೈಋತ್ಯ ದಿಕ್ಕಿನಲ್ಲಿ ಭಾರವಾದ ವಸ್ತುಗಳನ್ನು ಇಡುವುದು ಸೂಕ್ತ. ಆದರೆ ಈಶಾನ್ಯ ಭಾಗದಲ್ಲಿ ಶೆಡ್ ಅಥವಾ ಕೊಠಡಿಗಳನ್ನು ನಿರ್ಮಿಸುವುದು ತಪ್ಪು ಎಂದು ತಜ್ಞರು ಸೂಚಿಸುತ್ತಾರೆ.
ತೋಟ ಮತ್ತು ಸಸ್ಯಗಳ ವ್ಯವಸ್ಥೆ
ಖಾಲಿ ಜಾಗದಲ್ಲಿ ತೋಟ ಬೆಳೆಸುವವರು ದಿಕ್ಕಿನ ಆಯ್ಕೆಯಲ್ಲಿ ಜಾಗರೂಕರಾಗಿರಬೇಕು. ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಸಣ್ಣ ಗಿಡಗಳನ್ನು ನೆಡುವುದು ಉತ್ತಮ. ತುಳಸಿ ಮುಂತಾದ ಸಸ್ಯಗಳು ಶುಭಕರವೆಂದು ಪರಿಗಣಿಸಲಾಗುತ್ತದೆ.
ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ದೊಡ್ಡ ಮರಗಳನ್ನು ನೆಡಬಹುದು. ಆದರೆ ಮರಗಳನ್ನು ಗೋಡೆಯ ಹತ್ತಿರ ನೆಡುವುದನ್ನು ಒಳ್ಳೆಯದಲ್ಲಾ ಇದರಿಂದ ಮನೆಯ ಗೋಡೆಗೆ ತೊಂದರೆ ಅಗುತ್ತದೆ ಆದ್ದರಿಂದ ಸ್ವಲ್ಪ ದೂರದಲ್ಲಿ ನೆಡುವುದು ಸೂಕ್ತ.
ನೀರಿನ ವ್ಯವಸ್ಥೆ ಹೇಗಿರಬೇಕು?
ಕೊಳವೆಬಾವಿ, ಬಾವಿ ಅಥವಾ ಭೂಮಿಯೊಳಗೆ ಮಾಡಿರುವ ನೀರಿನ ಟ್ಯಾಂಕ್‌ಗಳನ್ನು ಈಶಾನ್ಯ ದಿಕ್ಕಿನಲ್ಲಿ ಮಾತ್ರ ಇಡಬೇಕು. ಆಗ್ನೇಯ ಅಥವಾ ನೈಋತ್ಯ ಭಾಗದಲ್ಲಿ ನೀರಿನ ಟ್ಯಾಂಕ್ ಅಥವಾ ಹೊಂಡಗಳಿದ್ದರೆ ಹಣಕಾಸಿನ ತೊಂದರೆ ಆಗಬಹುದು ಎಂದು ನಂಬಲಾಗಿದೆ. ಕೊಳಚೆ ನೀರು ಪೂರ್ವ ಅಥವಾ ಉತ್ತರ ದಿಕ್ಕಿಗೆ ಹರಿಯುವಂತೆ ವ್ಯವಸ್ಥೆ ಮಾಡುವುದು ಉತ್ತಮ.
ಪಾರ್ಕಿಂಗ್ ವ್ಯವಸ್ಥೆಯಲ್ಲೂ ವಾಸ್ತು ಮುಖ್ಯ
ಖಾಲಿ ಜಾಗದಲ್ಲಿ ಕಾರು ನಿಲುಗಡೆಗೆ ಶೆಡ್ ನಿರ್ಮಿಸುವಾಗ ಮನೆಯ ಗೋಡೆಯನ್ನು ಮುಟ್ಟದಂತೆ ನೋಡಿಕೊಳ್ಳಬೇಕು. ವಾಯುವ್ಯ ಮತ್ತು ಆಗ್ನೇಯ ದಿಕ್ಕುಗಳು ಪಾರ್ಕಿಂಗ್‌ಗೆ ಸೂಕ್ತವೆಂದು ಹೇಳಲಾಗುತ್ತದೆ. ನೈಋತ್ಯದಲ್ಲಿ ಪಾರ್ಕಿಂಗ್ ಮಾಡಿದರೆ ವಾಹನಗಳ ನಿರಂತರ ರಿಪೇರಿ ಸಮಸ್ಯೆ ಎದುರಾಗಬಹುದು.
ಒಟ್ಟಿನಲ್ಲಿ ಸರಿಯಾದ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಮನೆಗೆ ಶಾಂತಿ, ಸಮೃದ್ದಿ ಮತ್ತು ಅಭಿವೃದ್ದಿ ಹೊಂದಲು ಸಹಕಾರಿಯಾಗುತ್ತದೆ ಎಂದು ವಾಸ್ತು ತಜ್ಞರು ಅಭಿಪ್ರಾಯ ಪಡುತ್ತಾರೆ.












Click it and Unblock the Notifications