ಅಕ್ಕ ಸಮ್ಮೇಳನ ಮುನ್ನೋಟದ ಹನಿಗಳು

ನ್ಯೂಜೆಸಿ೯ ಇರೋದು
ನ್ಯೂಯಾಕ್೯ ಪಕ್ಕ!
ಅಲ್ಲೆ ಇರೋದು
ಈ ಸಲದ ಅಕ್ಕ!!
ನ್ಯೂಯಾಕ್೯ ಪಕ್ಕ!
ಅಲ್ಲೆ ಇರೋದು
ಈ ಸಲದ ಅಕ್ಕ!!
ಸ್ವಗ೯ದಿಂದಾ
ಬರೋಕಾಗಲ್ಲ
ಅಣ್ಣಾವ್ರುಗೆ ಈಗ!
ಅಣ್ಣಾವ್ರ ಮಗ
ಬರ್ತಾರಂತೆ
ಆದಷ್ಟು ಬೇಗ!!
ಬಂದರೂ
ಬರಬಹುದಂತೆ
ಎಸ್ಸೆ೦ ಕೃಷ್ಣ!
ಬಂದೇ
ಬತಾ೯ರಂತೆ
ಬಾಲ ಮುರುಳಿ ಕೃಷ್ಣ!!
ಅಲ್ಲಿಂದ ನೂರಾರು
ಕಲಾವಿದರು ಬಂದು
ಹಾಕ್ತಾರಂತೆ ಕ್ಯಾಂಪು!
ಅವರಿಗಾಗಲೇ
ಆಗಿದೆಯಂತೆ
ವೀಸಾ ಸ್ಟ್ಯಾಂಪು!!
ಹಾಸ್ಯದ ಹೊನಲು
ಹರಿಯಲಿದೆಯಂತೆ ಈ
ಸಮ್ಮೇಳನದಲ್ಲಿ ಕೂಡ!
ನಗಿಸೊಕ್ಕೋಸ್ಕರ
ಬತಾ೯ರಂತೆ
ಕೃಷ್ಣೇಗೌಡ!!
ಸಮ್ಮೇಳನದಿಂದ
ಹೆಚ್ಚಾಗಲಿದೆಯಂತೆ
ಕನ್ನಡ ಸಾಹಿತ್ಯದ ಮೌಲ್ಯ!
ಬಿಸಿನೆಸ್ ಪೋರ೦ನಲ್ಲಿ
ಮಾತಾಡ್ತಾರಂತೆ
ಕೀಂಗ್ ಫಿಷರ್ನ ಮಲ್ಯ!
ವಜ್ರ ವೈಢೂಯ೯
ಈಗ ಆಗಿದೆಯಂತೆ
ತುಂಬಾ ದುಬಾರಿ!
ಈ ಸಮ್ಮೇಳನದಲ್ಲಿ
ಇದೆಯಂತೆ
ದಿನಾ ಇದ್ದದ್ದೆ
ಪಿಜ್ಜಾ ಬಗ೯ರ್
ಹೆಂಡತಿಯ ಕೈಯೂಟ!
ಮೂರು ದಿವಸ
ಇದೆಯಂತೆ
ಭಜ೯ರಿ ಹಬ್ಬದೂಟ!!
ಮೂರು ದಿವಸ
ನ್ಯೂಜೆಸಿ೯ಯಲ್ಲಿ
ನಡೆಯುಲಿದೆ
ಕನ್ನಡಾಂಬೆ ಜಾತ್ರೆ!
ಅದರ ಜೊತೆಗೆ
ಮಾಡಬಹುದು
ನೀವು ನ್ಯೂಯಾಕ್೯
ಸಿಟಿಯ ಯಾತ್ರೆ!!












Click it and Unblock the Notifications