ಅಕ್ಕದಲ್ಲಿ 'ಕನ್ನಡವೇ ಶ್ರೇಷ್ಠ' ಸಂಗೀತ ಔತಣ

ಕರ್ನಾಟಕದ ಶ್ರೇಷ್ಠ ಗಾಯಕ ಗಾಯಕಿಯರಿಂದ, ಶ್ರೇಷ್ಠ ಕವಿ, ಬರಹಗಾರರ, ಉತ್ಕೃಷ್ಟ ಸಾಹಿತ್ಯವುಳ್ಳ ಜನಪ್ರಿಯ ಚಿತ್ರಗೀತೆಗಳು, ಸುಶ್ರಾವ್ಯ ಭಾವಗೀತೆಗಳು ಹಾಗು ನಿಂತಲ್ಲೇ ಕುಣಿಸುವ ಜಾನಪದ ಗೀತೆಗಳ ಸುಂದರ ಸಂಗೀತ ಸಂಜೆ ಕಾರ್ಯಕ್ರಮ 'ಕನ್ನಡವೇ ಶ್ರೇಷ್ಠ' ಸಮ್ಮೇಳನಾರ್ಥಿಗಳನ್ನು ರಂಜಿಸಲಿದೆ.
ಗಾಯಕ ಗಾಯಕಿಯರಾದ ದಿವ್ಯಾ ರಾಘವನ್, ಅಜಯ್ ವಾರಿಯರ್, ನಂದಿನಿ ರಾವ್, ಶಂಕರ್ ಶಾನ್ ಭಾಗ್, ಮಂಗಳ ರವಿ, ಜೋಗಳೆ ಸಿದ್ದರಾಜು, ಕನ್ನಿಕ, ನರಸಿಂಹಮೂರ್ತಿ ಶ್ರೋತೃಗಳನ್ನು ಗಂಧರ್ವಲೋಕಕ್ಕೆ ಕರೆದೊಯ್ಯಲಿದ್ದಾರೆ.
ಅವರಿಗೆ ಸಾಥಿಯಾಗಿ ಸಂಗೀತ ಸಂಜೆಗೆ ರಂಗೇರಿಸುವವರು ಪಕ್ಕ ವಾದ್ಯಗಾರರಾದ ಬಿ.ವಿ.ಶ್ರೀನಿವಾಸ್ - ಕೀಬೋರ್ಡ್, ಅರುಣ್ ಕುಮಾರ್ - ರಿಧಮ್ ಪ್ಯಾಡ್ಸ್, ಜಗದೀಶ್ ಕುರ್ತಕೋಟಿ - ತಬಲ, ಪ್ರಪಂಚಮ್ ಸೀತಾರಾಮ್ - ಕೊಳಲು, ನಿಂಗರಾಜು - ಸ್ಯಾಕ್ಸಾಪೋನ್ ಹಾಗು ಲಕ್ಷ್ಮೀಶ - ಮೃದಂಗ.
ಕನ್ನಡವೇ ಶ್ರೇಷ್ಠ ಸಂಗೀತ ಸಂಜೆಯ ಪರಿಕಲ್ಪನೆ : ಶ್ರೀನಿವಾಸ್ ಕಪ್ಪಣ್ಣ ಹಾಗು ಸುನೀತ ಅನಂತಸ್ವಾಮಿ ಅವರದು.
ಈ ಅಪೂರ್ವ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳಬೇಡಿ. ನೆನಪಿನಲ್ಲಿಡಿ, ಅಕ್ಕ ಸಮ್ಮೇಳನಕ್ಕೆ ರಿಯಾಯಿತಿ ದರದಲ್ಲಿ ನೊಂದಾಯಿಸಲು ಕೊನೆಯ ದಿನಾಂಕ ಆಗಸ್ಟ್ 29, ಭಾನುವಾರ. ನೊಂದಾಯಿಸಲು ಮರೆಯಬೇಡಿ, ಮರೆತು ನಿರಾಶರಾಗಬೇಡಿ.











Click it and Unblock the Notifications