ಅಕ್ಕ ಸಮ್ಮೇಳನ : ನೊಂದಾವಣಿ ಶುಲ್ಕದಲ್ಲಿ ಕಡಿತ
ಶಿಕಾಗೋದ ರೋಸ್‌ಮಾಂಟ್‌ನಲ್ಲಿ ಆಗಸ್ಟ್ 29ರಿಂದ 31ರವರೆಗೆ ವಿದ್ಯಾರಣ್ಯ ಕನ್ನಡ ಕೂಟದ ಸಹಯೋಗದೊಂದಿಗೆ ನಡೆಯುತ್ತಿರುವ 5ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ಸಿದ್ಧತೆ ಭರದಿಂದ ಸಾಗಿದೆ. ರೋಸ್‌ಮಾಂಟ್ ಕನ್‌ವೆನ್ಷನ್ ಸೆಂಟರ್‌ನ ಒಂದೇ ಚಪ್ಪರದಡಿ ವಿಶ್ವದ ಎಲ್ಲಾ ರಾಷ್ಟ್ರಗಳಿಂದ ಬರಲಿರುವ 5 ಸಾವಿರಕ್ಕೂ ಹೆಚ್ಚಿನ ಕನ್ನಡಿಗರು ಈ ಸಾಂಸ್ಕೃತಿಕ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಮ್ಮೇಳನಕ್ಕೆ ಉಳಿದಿರುವುದು ಕೇವಲ 25 ದಿನಗಳು ಮಾತ್ರ. 29ರಿಂದ ಮೂರು ದಿನಗಳ ಕಾಲ ಶಿಕಾಗೋ ವೈವಿಧ್ಯಮಯ ಕನ್ನಡದ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ. ಸಮ್ಮೇಳನಕ್ಕೆ ನೊಂದಾವಣಿ ಕೂಡ ಭರದಿಂದ ಸಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಲು ಅನುವಾಗಲೆಂದು ಸಮ್ಮೇಳನದ ಸಂಘಟಕರು ನೊಂದಾವಣಿ ಶುಲ್ಕವನ್ನು 25 ಡಾಲರ್‌ನಷ್ಟು ಇಳಿಸಿದ್ದಾರೆ. ನೊಂದಾವಣಿ ಆಗಸ್ಟ್ 15ರಂದು ಕೊನೆಗೊಳ್ಳಲಿದೆ.
ಆದಷ್ಟು ಬೇಗನೆ ನೊಂದಾಯಿಸಿಕೊಂಡು ರಿಯಾಯತಿ ದರದ ಲಾಭವನ್ನು ಪಡೆದುಕೊಳ್ಳಬೇಕೆಂದು ಸಮ್ಮೇಳನಾಕಾಂಕ್ಷಿಗಳಿಗೆ ಸಂಘಟಕರು ಕೇಳಿಕೊಂಡಿದ್ದಾರೆ. ರಿಯಾಯತಿ ದರಗಳು ಈ ಕೆಳಗಿನಂತಿವೆ.
ವಯಸ್ಕರಿಗೆ 200 ಡಾಲರ್, ಏಳರಿಂದ ಹದಿನೆಂಟ(7ರಿಂದ 18)ರೊಳಗಿನ ಮಕ್ಕಳಿಗೆ 150 ಡಾಲರ್, ಭಾರತದಿಂದ ಆಗಮಿಸುವ ಅತಿಥಿಗಳಿಗೆ 175 ಡಾಲರ್ ನಿಗದಿಪಡಿಸಲಾಗಿದೆ. 6 ವಯಸ್ಸಿಗಿಂತ ಕೆಳಗಿನ ಮಕ್ಕಳು ಶುಲ್ಕದ ಹಂಗಿಲ್ಲದೆ ಜಾಲಿಯಾಗಿ ಸಮ್ಮೇಳನದಲ್ಲಿ ಭಾಗವಹಿಸಬಹುದು.
ನೊಂದಾಯಿಸಿಕೊಳ್ಳಲು ಈ ಕೊಂಡಿಯನ್ನು ಕ್ಲಿಕ್ಕಿಸಿ : http://guest.cvent.com/i.aspx?0R,P1,EE821E4B-09EE-419E-BA3C-832B1E60AD56
ಕರ್ನಾಟಕದ ಭವ್ಯ ಪರಂಪರೆ, ಇತಿಹಾಸವನ್ನು ಬಿಂಬಿಸುವ 'ವಿಶ್ವಕನ್ನಡಿಗರ ಪರಂಪರೆ ಮತ್ತು ಪ್ರದರ್ಶನ' ಹಬ್ಬದ ಪ್ರಮುಖ ಆಕರ್ಷಣೆಗಳಲ್ಲೊಂದು. ವಿವಿಧ ಕಲಾವಿದರಿಂದ ನಾಟಕ ಪ್ರದರ್ಶನ, ಸಿನಿ ಕಲಾವಿದರ ಸಂಗೀತಗೋಷ್ಠಿ, ಕವನಗೋಷ್ಠಿ, ವಾಣಿಜ್ಯ ಕುರಿತ ಕಾರ್ಯಕ್ರಮ, ಜಾದೂ, ಯೋಗ ವಿಶ್ವದ ಕನ್ನಡಿಗರಿಗೆ ಅಮೆರಿಕದಲ್ಲಿ ಸಂಪೂರ್ಣ ಕನ್ನಡಮಯ ವಾತಾವರಣವನ್ನು ಸೃಷ್ಟಿಸಲಿವೆ. ಕರ್ನಾಟಕದಿಂದ ತೆರಳಲಿರುವ ಖ್ಯಾತ ಸಿನೆಮಾ ತಾರೆಯರೊಂದಿಗೆ ಕಲೆತು ಮಾತುಕತೆ ನಡೆಸುವ ಅವಕಾಶ ಸಮ್ಮೇಳನಾರ್ಥಿಗಳಿಗೆ ಲಭಿಸಲಿದೆ.
ನೆನಪಿರಲಿ : ನೊಂದಾಯಿಸಿಕೊಳ್ಳಲು ಕೊನೆಯ ದಿನಾಂಕ, ಆಗಸ್ಟ್ 15.
ಹೆಚ್ಚಿನ ಓದಿಗೆ
ಅಕ್ಕ ಸಮ್ಮೇಳನಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ದಂಡು
'ಅಕ್ಕ' ಸಮ್ಮೇಳನ : ಓಬಾಮಾ ನೋ, ಬಿಎಸ್‌ವೈ ಎಸ್
'ವಿಂಡಿಸಿಟಿ' ಶಿಕಾಗೋದಲ್ಲಿ 'ಅಕ್ಕ' ವಿಶ್ವಕನ್ನಡ ಸಮ್ಮೇಳನ
'ಅಕ್ಕ' ವಿಶ್ವ ಕನ್ನಡ ಸಮ್ಮೇಳನದಲ್ಲಿ ಕವಿಗೋಷ್ಠಿ












Click it and Unblock the Notifications