ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಕ್ಕ' ವಿಶ್ವ ಕನ್ನಡ ಸಮ್ಮೇಳನದಲ್ಲಿ ಕವಿಗೋಷ್ಠಿ

By ನಳಿನಿ ಮೈಯ
|
Google Oneindia Kannada News

Jayanth Kaikini and Chandrashekhar Kambar"ಅಕ್ಕ"ಳ ಕನ್ನಡ ರಥ; ಎದುರಿಗೆ ವಿಶಾಲ ವಿಶ್ವ ಪಥ! ಈ ಬಾರಿಯ ರಥೋತ್ಸವ ಗಾಳಿಯ ನಗರ ಶಿಕಾಗೊದಲ್ಲಿ ಆಗಸ್ಟ್ 29, 30 ಮತ್ತು 31ರಂದು ನಡೆಯಲಿದೆ. ನಿಮಗೆಲ್ಲ ಗೊತ್ತಿದೆಯಲ್ಲ ಈ ಸುದ್ದಿ?

ಈ ರಥೋತ್ಸವದಲ್ಲಿ ಒಂದು ಕವಿಗೋಷ್ಠಿ, ಬೇರೆಲ್ಲ ಸಮ್ಮೇಳನಗಳಲ್ಲೂ ಇದ್ದಂತೆ. ಆದರೆ ಒಂದೇ ಒಂದು ವಿಶೇಷ. ಈ ಬಾರಿ ನಿಮ್ಮಂಥ ಕವಿಗಳು ಓದಿದ ಕವನಕ್ಕೆ ವ್ಯಾಖ್ಯಾನ, ವಿಮರ್ಶೆ, ಹಿತ ವಚನ ಮುಂತಾದ ಕವಿಪ್ರತಿಕ್ರಿಯೆ ನೀಡಲಿದ್ದಾರೆ ಚಂದ್ರಶೇಖರ ಕಂಬಾರ ಮತ್ತು ಜಯಂತ್ ಕಾಯ್ಕಿಣಿ ಅವರು. ಹೌದು! ಇದೀಗ ಒಂದು ಹೊಸ ತಿರುವು. ಯಾವಾಗಲೂ ಹಬ್ಬದಲ್ಲಿ ಮೆಲ್ಲುತ್ತಿದ್ದ ಏಲಕ್ಕಿಯ ಘಮಲಿನ ಪಾಯಸಕ್ಕೆ ಜೊತೆಗೆ ಕೇಸರಿ, ಬಾದಾಮಿ ಬಿದ್ದಂತೆ! ನೀವೂ ಇದರಲ್ಲಿ ಪಾಲ್ಗೊಳ್ಳಲೇ ಬೇಕು.

ಒಬ್ಬೊಬ್ಬರಿಗೆ ಒಂದೊಂದು ಕವನ ಓದಲು ಅವಕಾಶ ನೀಡಲಾಗುತ್ತದೆ. ಪ್ರತಿ ಕವನವನ್ನು ಅದರ ಕರ್ತೃವೇ ಓದಬೇಕು. ಸಮಯ ; ಐದು ನಿಮಿಷಗಳು. ನೀವು ಓದಬೇಕೆಂದಿರುವ ಕವನಗಳನ್ನು ಮುಂಚಿತವಾಗಿ ನಮಗೆ ಕಳಿಸಿ. ಆಗ ಹಿರಿಯ ಕವಿಗಳಿಗೆ ಅವನ್ನು ಮನನ ಮಾಡಿ ತಕ್ಕ ಪ್ರತಿಕ್ರಿಯೆ ನೀಡಲು ಅನುಕೂಲವಾಗುತ್ತದೆ. ಕವನಗಳನ್ನು ಕಳಿಸಲು ಕೊನೆಯ ದಿನ ಜುಲೈ 1, 2008. ಕಳಿಸಬೇಕಾದ ಈಮೇಲ್ ವಿಳಾಸ: [email protected] (ನಳಿನಿ ಮಯ್ಯ).

ನಿಮ್ಮ ಕವನಗಳನ್ನು ಸರೀಕರೆದುರಿಗೆ ಓದಿ ಇನ್ನೊಬ್ಬರ ಕವನವನ್ನು ಕೇಳಿ ಆನಂದಿಸುವ ಈ ರಸಮಯ ಸದವಕಾಶವನ್ನು ಕಳೆದುಕೊಳ್ಳಬೇಡಿ. ಬೇಗನೆ ಕಳಿಸಿ ನಿಮ್ಮ ಕವನವನ್ನು. ಅಕ್ಕ ಕನ್ನಡ ರಥೋತ್ಸವದಲ್ಲಿ ನಿಮ್ಮ ಭೇಟಿಗಾಗಿ ಎದುರು ನೋಡುತ್ತೇವೆ. ನಮಸ್ಕಾರ.

ಸಮ್ಮೇಳನಾರ್ಥಿಗಳ ಗಮನಕ್ಕೆ
ಶಿಕಾಗೊ 'ಅಕ್ಕ' ವಿಶ್ವಕನ್ನಡ ಸಮ್ಮೇಳನದ ವಿಶೇಷಗಳು
ಅಕ್ಕ ಸಮ್ಮೇಳನ:ನೊಂದಾಯಿಸಿಕೊಳ್ಳಿ,ಡಾಲರು ಉಳಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X