ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಬೀದಿ ಬದಿಯ ಆಟೋರಿಕ್ಷಾ

By ರಾಜಾರಾಂ ಕಾವಳೆ
|
Google Oneindia Kannada News

Auto Rickshaw poem by Rajaram Cavale
ಬೆಂಗಳೂರಿನ ಬೀದಿಯಲಿ ರಿಕ್ಷಗಳ ನೋಡಿಹೆನು ನಾನೂ
ಕಂಡಿಹೆನು ರಾಮಪ್ರಿಯನ್ನರ ಅನುಭವದ ಆಟೋರಿಕ್ಷವ.
ಮೊನ್ನೆ ತಾನೇ ಅನುಭವಿಸಿದೆನು ರಿಕ್ಷದ ಸವಾರಿಯ
ಇನ್ನೂ ಅನುಭವಿಸುತಿಹೆನು ಆ ಬೇನೆಯ ಸವಿ? ನೆನಪುಗಳ.

ಹಾದಿಯನು ದಾಟಲು ನಿಂತಿಹ ಶಾಸ್ತ್ರಿಗಳು
ಎತ್ತಿದರು ಕೈಯನ್ನು ನಿಲ್ಲಿಸಲು ವೇಗದ ರಿಕ್ಷವ
ಹಿಂದುಮುಂದೇನಿದೆಯೆಂದು ನೋಡದಾ ಚಾಲಕನು
ಮಾಡಿಸಿದನು ಶಾಸ್ತ್ರಿಯವರಿಗೆ ಕೊಚ್ಚೆಯ ಅಭಿಶೇಕವ.

ಉಳುಕಿರಲು ಆ ಬಾಲಕಿಯ ಬಾಧೆಯ ಕುತ್ತಿಗೆಯು
ಕರೆದಳು ರಿಕ್ಷವ ವೈದ್ಯನ ಬಳಿ ಕರೆದೊಯ್ಯಲು
ದಿಣ್ಣೆಹಳ್ಳಗಳ ಹಾದಿಯಲಿ ರಿಕ್ಷವು ಸಾಗುತ್ತಿರಲು
ಎನ್ನ ಬೇನೆ ಗುಣವಾಯಿತು ಸಾಕಿನ್ನು ನಿಲ್ಲಿಸಯ್ಯನಿನ್ನ ರಿಕ್ಷವ!

ನಡೆಯಲಾಗದ ಬೇನೆಯ ಅಜ್ಜಿಯು ಹಾದಿಯ ದಾಟಲು ನೋಡುತಿರಲು
ದಯೆಯಿಂದ ನೋಡಿದನಾ ಅನುಕಂಪದ ಚಾಲಕನು
ಹಾಯಿಸಿದನಾ ರಿಕ್ಷವ ಪರಿತಪಿಸುವ ವೃದ್ಧೆಯೆಡೆಗೆ
ದಾಟಿಸಿದಾ ಪಾಲಕನಿಗೆ ರೊಕ್ಕವೇನೆಂದು ಕೇಳಿದಳಾ ವೃದ್ಧೆ

ಇರುವಳೂ ಎನಗೊಬ್ಬ ವೃದ್ಧೆಯ ಮಾತೆ
ನರಳುತಿಹಳು ಗುಣವಿಲ್ಲದ ಭಾದೆಯಿಂ ಆಕೆ
ಕರೆದೊಯ್ವೆನು ದಿನವೂ ಚಿಕಿತ್ಸಾಲಯಕೆ ಮಾತೆಯನು
ನಿನ್ನಿಂ ಪಡೆಯುವೆನಾ ಹಣವ ನೀ ನನ್ನ ತಾಯಿಯ ಸಮಾನ.

ರಿಕ್ಷಗಳು ಇರುವುದು ಬಹುಕಾಲಕೆ ಖಂಡಿತ
ಅವುಗಳಲ್ಲದೆ ಮತ್ತಾವ ಸಾರಿಗೆ ಇರುವುದದರ ಸಮಾನ?
ಇರುವರು ಹಲವು ದುಷ್ಕರ್ಮ ಚಾಲಕರು
ಮೀರಿಸುವರೇ ಅವರು ದುಷ್ಕರ್ಮ ಜನಸಾಮಾನ್ಯರ?

English summary
Rajaram Cavale, Hampshire, UK writes a Kannada Poem Auto Rickshaw
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X