ನ್ಯೂ ಜೆರ್ಸಿ ಬೃಂದಾವನಕ್ಕೆ 'ಅಭಿಮಾನಿ ತಂಡ'ದ ಸಾರಥ್ಯ

By: ಸತ್ಯಪ್ರಸಾದ್
Subscribe to Oneindia Kannada

ಅಮೆರಿಕಾದ ಪ್ರತಿಷ್ಠಿತ ಕನ್ನಡ ಸಂಘಟನೆಯಾದ ನ್ಯೂ ಜೆರ್ಸಿಯ 'ಬೃಂದಾವನ ಕನ್ನಡ ಸಂಘ'ದ ಚುನಾವಣೆ ಸುಲಲಿತವಾಗಿ ನಡೆದು ಕೆಳಕಂಡ ಅಧ್ಯಕ್ಷರು ಮತ್ತು ನಿರ್ದೇಶಕರು ಆಯ್ಕೆಯಾದರೆಂದು ಚುನಾವಣಾ ಅಧಿಕಾರಿಗಳಾದ ಎಂ ಜಿ ಪ್ರಸಾದ್ ಮತ್ತು ನಾರಾಯಣ ರಾವ್ ಚುನಾವಣಾ ಫಲಿತಾಂಶವನ್ನು ಘೋಷಿಸಿದರು. [ಅಕ್ಕ ಸಮ್ಮೇಳನದಲ್ಲಿ ಬೃಂದಾವನ ಸಂಘದ ಉತ್ಕೃಷ್ಟ ಪ್ರದರ್ಶನ]

New office bearers for Brindavana Kannada Koota, New Jersey

ಅಧ್ಯಕ್ಷರು:
ಡಾ ಅಶೋಕ್ ಕಟ್ಟಿಮನಿ

ನಿರ್ದೇಶಕರು:
ಶ್ರೀಧರ್ ಸೂರ್ಯನಾರಾಯಣ
ತಿರುಮಲೇಶ ಕೌಡ್ಬಾಯ್
ಸುರೇಶ ಗಾಡ್ಗಿ
ಬಸವರಾಜು ಶಿವಣ್ಣ
ಸತ್ಯಪ್ರಸಾದ್
ಸತೀಶ್ ಈಶ್ವರಪ್ಪ
ಕಿರಣ್ ಅಗ್ರಹಾರ
ಡಾ. ಶ್ರೀ ಸಾಯಿ

ಅತ್ಯುತ್ಸಾಹದಿಂದ ಅಭಿಮಾನಿ ತಂಡವು ಅನೇಕ ಹೊಸ ಹೊಸ ಕನ್ನಡ ಕಾರ್ಯಕ್ರಮಗಳನ್ನು ರೂಪಿಸಿ ಮುಂದಿನ ಎರಡು ವರ್ಷಗಳಲ್ಲಿ ನ್ಯೂ ಜೆರ್ಸಿಯ ಕನ್ನಡಿಗರಿಗೆ ಬೋಧನೆ, ಚಿಂತನೆ ಮತ್ತು ಮನೋರಂಜನೆ ನೀಡಲಿದೆ. ನ್ಯೂ ಜೆರ್ಸಿ ಕನ್ನಡಿಗರು ಈ ಕನ್ನಡ ಸೇವೆಯಲ್ಲಿ ಪಾಲ್ಗೊಳ್ಳಲು ವಿನಮ್ರ ಮನವಿ ಮಾಡಿಕೊಳ್ಳಲಾಗಿದೆ. [ರೈತನಿಗೆ ನಮೋನಮಃ : ನ್ಯೂಜೆರ್ಸಿ ಕನ್ನಡಿಗರಿಂದ ಅನ್ನದಾತನ ಸ್ಮರಣೆ]

ನೂತನ ಅಭಿಮಾನಿ ತಂಡವು ಜನವರಿ 1ರಂದು ಅಧಿಕಾರ ಸ್ವೀಕರಿಸಿದರು. ಹೊಸದಾಗಿ ಅಧಿಕಾರ ಸ್ವೀಕರಿಸಿರುವ ಅಭಿಮಾನಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಈ ತಂಡದಿಂದ ಬೃಂದಾವನ ಕನ್ನಡ ಕೂಟದಲ್ಲಿ ಇನ್ನಷ್ಟು ಉತ್ತಮ ಕನ್ನಡದ ಕೆಲಸಗಳು ಆಗಲಿ. [ಬೃಂದಾವನ ದಶಮಾನೋತ್ಸವ ವಾಹ್ ರೇ ವಾಹ್!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New office bearers have been elected for Brindavana Kannada Koota, New Jersey, USA. Dr. Ashok Kattimani is the new president of the association.
Please Wait while comments are loading...