ಮೊದಲ ಸಂಚಿಕೆ ಹೊರಬಂದಿದೆ, ತೊಗೊಳಿ

ಕನ್ನಡ ಪತ್ರಿಕೆಯನ್ನು ಆರಂಭಿಸುವುದಕ್ಕೆ ಅಗತ್ಯವಾದ ಧನಕನಕಗಳು ಮತ್ತು ಕನ್ನಡ ಸಾಂಸ್ಕೃತಿಕ ಸಂಪತ್ತು ಅಮೆರಿಕದಲ್ಲಿದೆ. ಕನ್ನಡ ಲಿಪಿ, ಪ್ರಕಟನ ಸಾಮಗ್ರಿ, ಸಂಪಾದಕೀಯ ಸಿಬ್ಬಂದಿ ಬಳಗ ಎಲ್ಲವೂ ಈ ಕಾಲದಲ್ಲಿ ಸುಲಭವಾಗಿ ದೊರೆಯತ್ತೆ. ಆದರೆ ಕನ್ನಡ ಜನರ ಸಮಯ ಮತ್ತು ಪ್ರತಿಭೆಯನ್ನು ಮೇಳೈಸಿ ಅದನ್ನೆಲ್ಲ ಒಟ್ಟುಗೂಡಿಸಿ ಒಂದು ಪತ್ರಿಕೆ ಹೊರತರುವಲ್ಲಿ ಸೋತಿದ್ದ ಅಕ್ಕ ಈಗ ಗೆದ್ದು ಬಂದಿದ್ದಾಳೆ.
ವಾಷಿಂಗ್ ಟನ್ ಡಿಸಿ ಕಾವೇರಿ ಕನ್ನಡ ಸಂಘದ ನಾಗಶಂಕರ್ ಚಂದ್ರಶೇಖರ್, ನ್ಯೂ ಜೆರ್ಸಿ ಕನ್ನಡ ಕೂಟ ಬೃಂದಾವನದ ಮಧುರಂಗಯ್ಯ, ಅಕ್ಕ ಅಧ್ಯಕ್ಷ ದಯಾಶಂಕರ ಅಡಪ ಹಾಗೂ ಉಪಾಧ್ಯಕ್ಷ ಮಾದೇಶ್ ಬಸವರಾಜ್ ಅವರ ಕನ್ನಡ ಪತ್ರಿಕೆ ಮೋಹದಿಂದಾಗಿ ಅಕ್ಕ ತನ್ನದೇ ಆದ ಒಂದು ಪತ್ರಿಕೆ ಹೊರಡಿಸುವಲ್ಲಿ ಇದೀಗ ಯಶಸ್ಸು ಕಂಡಿದೆ. 2011ರ ಸೆಪ್ಟೆಂಬರ್ ಮಾಹೆಯಲ್ಲಿ ಮೊದಲ ಸಂಚಿಕೆ ಹೊರಬಂದಿದೆ. ತೊಗೊಳಿ.
ಇಂಟರ್ ನೆಟ್ ಸೌಕರ್ಯದಿಂದಲೇ ಓದಬಹುದಾದ ಅಕ್ಕ ಸುದ್ದಿ ಪತ್ರದ ಹೆಸರು "ಜಗಲಿ". ಉಚಿತವಾಗಿ ಪಿಡಿಎಫ್ ನಲ್ಲಿ ಮಾತ್ರ ದೊರಕುವ ಇದು ಸುಮಾರು 8 ಸಾವಿರ ಅಕ್ಕ ಸದಸ್ಯ ಡೇಟಾಬೇಸಿಗೆ ಇಮೇಲ್ ಮುಖಾಂತರ ತಲಪುತ್ತದೆ. ನೀವು ಅಕ್ಕ ಸದಸ್ಯರಲ್ಲದಿದ್ದರೆ ಪಿಡಿಎಫ್ ಲಿಂಕು ಅಕ್ಕ ವೆಬ್ ಸೈಟಿನಲ್ಲಿ ಹೇಗೂ ಸಿಕ್ಕತ್ತೆ. ವಿಶ್ವದ ನಂ 1 ವೆಬ್ ಸೈಟ್ ಕನ್ನಡ ಒನ್ ಇಂಡಿಯ ತಾಣದಲ್ಲಿ ಸದಾ ಇದ್ದೇ ಇರತ್ತೆ.












Click it and Unblock the Notifications