ಅಟ್ಲಾಂಟಾದಲ್ಲಿ ಭೇಟಿಯಾಗುವಾ, ನಮಸ್ಕಾರ

SK Shama Sundara
ಸಾಮಾನ್ಯವಾಗಿ ಪಿಡಿಎಫ್ ನಲ್ಲಿ ದೊರಕುವ ಟೆಕ್ಸ್ಟ್ ಮತ್ತು ಇಮೇಜುಗಳು ಬೋರು ಹೊಡೆಸುತ್ತವೆ. ಆದರೆ ಕಲಾವಿದ ಹರಿದಾಸ್ ಲಹರಿ ಅವರ ಗ್ರಾಫಿಕ್ಸ್ ಮತ್ತು ಸುಲಭ ಓದಿಗೆ ದಕ್ಕುವ ಸಂಪಾದಕೀಯ ಬಳಗದ ಮಾತುಕತೆಗಳು ಮತ್ತು ಹಲಕೆಲವು ವರದಿಗಳು ನಿಮಗೂ ಇಷ್ಟವಾಗಬಹುದು. ಓದಿ, ಹೇಳಿ.

ಜಗದಗಲ 'ಜಗಲಿ' ಮಾಸ ಪತ್ರಿಕೆ ಸಂಪಾದಕಿ ನ್ಯೂಜೆರ್ಸಿಯ ಮೀರಾ ಪಿ ಆರ್. ಪಳಗಿದ ಬರಹಗಾರರಾದ ಮಿನೆಸೋಟದ ಡಾ. ಗುರುಪ್ರಸಾದ್ ಕಾಗಿನೆಲೆ ಮತ್ತು ವರ್ಜೀನಿಯಾದ ಶ್ರೀವತ್ಸ ಜೋಶಿ ಸಂಪಾದಕೀಯ ವಿಭಾಗದಲ್ಲಿ ಇದ್ದಾರೆ. ಪತ್ರಿಕೆಯ ಅಂದ ಚೆಂದ, ವ್ಯಂಗ್ಯ ಚಿತ್ರಗಳು ಹರಿದಾಸ್ ಟಿ ಲಹರಿ, ವರ್ಜೀನಿಯ. ನೀವೂ ಪತ್ರಿಕೆಗೆ ಅಕ್ಷರ ಸೇವೆ ಸಲ್ಲಿಸಬಹುದು. [email protected]

ಇಷ್ಟು ವರ್ಷ ಇಲ್ಲದ ಅಕ್ಕ ಸುದ್ದಿ ಪತ್ರ ಏಕಾಏಕಿ ಈ ವರ್ಷ ಹೊರಬರುವುದಕ್ಕೆ ಹಲವು ಕಾರಣಗಳಿವೆ. ಮೂಲಭೂತವಾಗಿ ತನ್ನದೇ ಆದ ಕಾರ್ಯಕ್ರಮಗಳನ್ನು ತನ್ನದೇ ಆದ ಸದಸ್ಯವರ್ಗಕ್ಕೆ ತಲುಪಿಸುವುದಕ್ಕೆ ತನ್ನದೇ ಆದ ಒಂದು ಕನ್ನಡ ಪತ್ರಿಕೆಯ ಅಗತ್ಯ ಹಿಂದೆಂದಿಗಿಂತ ಈಗ ಹೆಚ್ಚಾಗಿರುವುದನ್ನು ಅಕ್ಕ ಮನಗಂಡಿದೆ.

ಮೇಲಾಗಿ, 7ನೇ ಅಕ್ಕ ವಿಶ್ವಕನ್ನಡ ಸಮ್ಮೇಳನಕ್ಕೆ ಕೇವಲ 11 ತಿಂಗಳು ಬಾಕಿ ಉಳಿದಿವೆ. ಈಗಿನಿಂದಲೇ ಅಕ್ಕ ಆಡಳಿತ ವರ್ಗ ಜನಸಂಪರ್ಕಕ್ಕೆ ಸಮೂಹ ಮಾಧ್ಯಮ ಸಾಧನವನ್ನು ಕಟ್ಟಿಕೊಳ್ಳಬೇಕು. ಮುಂದಿನ ಸಮ್ಮೇಳನ (ಲೇಬರ್ ಡೇ ವೀಕ್ ಎಂಡ್ 2012) ಪಿಟ್ಜ್ ಬರ್ಗ್ ಅಥವಾ ಟೆಕ್ಸಾಸ್ ಅಥವಾ ಅಟ್ಲಾಂಟದಲ್ಲಿ ನೆರವೇರುವ ಸಾಧ್ಯತೆ ಇದೆ. ಸಮ್ಮೇಳನ ನಗರ ಆಯ್ಕೆ ಬಗ್ಗೆ ಮೀನ ಮೇಷ ಎಣಿಸುತ್ತಿರುವ ಅಕ್ಕ ಆಡಳಿತ ವರ್ಗ ತ್ವರಿತವಾಗಿ ಒಂದು ನಿರ್ಧಾರಕ್ಕೆ ಬರಬೇಕಿದೆ. ಈ ಮೂರು ನಗರಗಳ ಪೈಕಿ ನಾನು ಚಿಮ್ಮಿದ ಸೆಂಟ್ ಅಟ್ಲಾಂಟದ ಸಿಎನ್ ಎನ್ ನ್ಯೂಸ್ ರೂಂನಲ್ಲಿ ಬಿದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+