Namma Metro Fare Hike: ಬೆಂಗಳೂರು ಮೆಟ್ರೋ ಟಿಕೆಟ್ ಬೆಲೆ ಮತ್ತೆ ಹೆಚ್ಚಳ, ಎಷ್ಟು ಬೆಲೆ ಏರಿಕೆ ಆಗಲಿದೆ ಇಲ್ಲಿದೆ ಸಂಪೂರ್ಣ ವಿವರ
Namma Metro Fare Hike: ಬೆಂಗಳೂರು ನಮ್ಮ ಮೆಟ್ರೋದ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಭಾರೀ ಚರ್ಚೆ ಶುರುವಾಗಿದೆ. ಕಳೆದ ವರ್ಷವಷ್ಟೇ ಬೆಂಗಳೂರಿನ ನಮ್ಮ ಮೆಟ್ರೋದ ಪ್ರಯಾಣ ದರ (ಟಿಕೆಟ್ ಬೆಲೆ) ಹೆಚ್ಚಳ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ನಮ್ಮ ಮೆಟ್ರೋದ ಬೆಲೆ ಏರಿಕೆಗೆ ತೆರೆಮರೆಯ ಸಿದ್ಧತೆ ನಡೆದಿದೆ. ಈಗಾಗಲೇ ಬೆಂಗಳೂರಿನ ನಮ್ಮ ಮೆಟ್ರೋದ ಟಿಕೆಟ್ ಬೆಲೆ ಹೆಚ್ಚಳವಾಗಿರುವುದರಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ವಿಪರೀತವಾಗಿದೆ.
ಇದೀಗ ನಮ್ಮ ಮೆಟ್ರೋದ ಟಿಕೆಟ್ ಬೆಲೆ ಮತ್ತೆ ಹೆಚ್ಚಳ ಮಾಡಿದರೆ ಬೆಂಗಳೂರು ಮಹಾನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಇನ್ನಷ್ಟು ಹೆಚ್ಚಳವಾಗಬಹುದು ಎನ್ನುವ ಆತಂಕ ಶುರುವಾಗಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಮೆಟ್ರೋದ ಪ್ರಯಾಣ ದರವನ್ನು ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿದೆ ಎಂದು ಪ್ರಯಾಣಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ, ದರ ಪರಿಷ್ಕರಣೆ ಮಾಡಲಾಗಿತ್ತು. ದರ ಪರಿಷ್ಕರಣೆಯ ನಂತರವೂ ಬೆಲೆ ಪರಿಷ್ಕರಣೆ ಸರಿಯಾಗಿಲ್ಲ ಎಂದು ಮೆಟ್ರೋ ಪ್ರಯಾಣಿಕರು ಆರೋಪಿಸಿದ್ದರು.

ಕಳೆದ ವರ್ಷ ಬೆಂಗಳೂರು ಮೆಟ್ರೋದ ಪ್ರಯಾಣ ದರ ಹೆಚ್ಚಳವಾದ ಮೇಲೆ ಬೆಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯು ಹೆಚ್ಚಳವಾಗಿದೆ. ಇದೀಗ ಮತ್ತೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಪ್ರಯಾಣ ದರ ಹೆಚ್ಚಳ ಮಾಡುವುದಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮುಂದಾಗಿದೆ. ಈಗಾಗಲೇ ದೇಶದ ವಿವಿಧ ಪ್ರಮುಖ ನಗರಗಳ ಮೆಟ್ರೋಗೆ ಹೋಲಿಕೆ ಮಾಡಿದರೆ, ಬೆಂಗಳೂರು ನಗರದಲ್ಲಿ ಮೆಟ್ರೋದ ಪ್ರಯಾಣ ದರವು ಭಾರೀ ಇದೆ.
ಇದೀಗ ಮೆಟ್ರೊ 3ಎ ಹಂತದ ಪರಿಷ್ಕೃತ ಸಮಗ್ರ ಯೋಜನಾ ವರದಿಯು ಪ್ರಯಾಣ ದರ ಪರಿಷ್ಕರಣೆಯ ಹೊಸ ಲೆಕ್ಕಾಚಾರಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದು "ಪ್ರಜಾವಾಣಿ" ವರದಿ ಮಾಡಿದೆ. ಇನ್ನು ಮೆಟ್ರೋದ ಪ್ರಯಾಣ ದರವನ್ನು ಕಳೆದ ವರ್ಷದ ಫೆಬ್ರುವರಿಯಲ್ಲಿ ಶೇ. 51.55ರಷ್ಟು ಹೆಚ್ಚಳ ಮಾಡಲಾಗಿತ್ತು. ಇದಾದ ನಂತರ ಪ್ರತಿ ವರ್ಷ ಶೇ 5ರಷ್ಟು ದರ ಹೆಚ್ಚಿಸುವ ಬಗ್ಗೆ ಸಮಿತಿ ಶಿಫಾರಸು ಮಾಡಿತ್ತು. ಆದರೆ ಪ್ರಯಾಣಿಕರಿಂದ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತವಾಗಿತ್ತು.
ಕಳೆದ ವರ್ಷ ಪರಿಷ್ಕೃತ ವರದಿಯ ಪ್ರಕಾರ, ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ರಯಾಣ ದರವನ್ನು ಶೇ. 12ರಷ್ಟು ಹೆಚ್ಚಳ ಮಾಡಲಾಗುತ್ತದೆ. ಇದರ ಆಧಾರದ ಮೇಲೆ
3ನೇ ಹಂತದ ಯೋಜನೆ ಪೂರ್ಣಗೊಳ್ಳುವ 2033ರ ವೇಳೆಗೆ, ಕನಿಷ್ಠ ದರವು 10 ರೂಪಾಯಿಂದ 14 ರೂಪಾಯಿಗೆ ಹಾಗೂ ಗರಿಷ್ಠ ದರವು 90 ರೂಪಾಯಿಯಿಂದ 126 ರೂಪಾಯಿಗೆ ಹೆಚ್ಚಳವಾಗಲಿದೆ. ಈ ರೀತಿ ಬೆಲೆ ಏರಿಕೆಯಾದರೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಅಲ್ಲದೆ ಇದರೊಂದಿಗೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಹೆಚ್ಚಳವಾಗುವ ಸಾಧ್ಯತೆಯೂ ಇದೆ.
ಬಿಎಂಆರ್‌ಸಿಎಲ್ ಬೆಲೆ ಏರಿಕೆ ಲೆಕ್ಕಾಚಾರವೇನು ?
ಇನ್ನು ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ (ಬಿಎಂಆರ್‌ಸಿಎಲ್) ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚ ಅಥವಾ ಶೇ 5ರಲ್ಲಿ ಯಾವುದು ಕಡಿಮೆಯೋ ಅದಕ್ಕೆ ಸಂಬಂಧಿಸಿ ಪಾರದರ್ಶಕ ಸೂತ್ರದ ಆಧಾರದ ಮೇಲೆ, ದರವನ್ನು ಸ್ವಯಂಚಾಲಿತವಾಗಿ ಪ್ರತಿವರ್ಷ ಪರಿಷ್ಕರಿಸಬೇಕು ಎಂದು ಮೊದಲ ದರ ನಿರ್ಧಾರ ಸಮಿತಿ (ಎಫ್‌ಎಫ್‌ಸಿ) ಈ ಹಿಂದೆ ಹೇಳಿತ್ತು. ಆದರೆ ಕಳೆದ ವರ್ಷ ಇದರಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಈ ಬಾರಿ ಬೆಲೆ ಏರಿಕೆ ವಿಚಾರದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.


Click it and Unblock the Notifications
