ಬ್ರೇಕಿಂಗ್ ನ್ಯೂಸ್ : ಅಕ್ಕ ಕನ್ನಡ ಪತ್ರಿಕೆ ಬಿಡುಗಡೆ
ಉತ್ತರ
ಅಮೆರಿಕಾ ಕನ್ನಡ ಕೂಟಗಳ ಆಗರ (ಅಕ್ಕ) ಸಂಸ್ಥೆ ಮೈದಾಳಿ ಹತ್ತಿರ ಹತ್ತಿರ ಹತ್ತು ವರ್ಷ ತುಂಬುತ್ತಾ ಬಂತು. ಈ ಒಂದು ದಶಕದಲ್ಲಿ ಅಕ್ಕನ ಸಹವಾಸದಲ್ಲಿ ಅಮೆರಿಕನ್ನಡಿಗ ಗಳಿಸಿದ್ದೇನು, ಬೆಳೆಸಿದ್ದೇನು, ಬೆಳೆದದ್ದೇನು, ಕಡಿದು ಗುಡ್ಡೆ ಹಾಕಿದ್ದೇನು ಎಂದು ಲೆಕ್ಕ ಹಾಕುವ ಸಮಯ ಇದಲ್ಲ. ಹೇಳಿಕೇಳಿ ಇದು ರಿಸೆಷನ್ ಸಮಯ. id="toptextpromo">ಉತ್ತರ
ಅಮೆರಿಕಾಗೆ ವಲಸೆಬಂದ ಕನ್ನಡ ಕುಟುಂಬಗಳನ್ನು ಭಾವನಾತ್ಮಕ ನೆಲೆಯಲ್ಲಿ ಒಂದುಗೂಡಿಸುವ ಕಾಯಕದಲ್ಲಿ ಅಕ್ಕ ಹಗಲಿರುಳೂ ಶ್ರಮಿಸಿರುವುದಂತೂ ದಿಟ. ಎಷ್ಟೇ ಕಷ್ಟಪಟ್ಟು ಕನ್ನಡ ಕಟ್ಟಲು ಹೆಣಗಿದರೂ ಲೈಫು ಇಷ್ಟೇನೇ ಎಂದು ಕೊರಗುವವರ ಸಂತೆಯಲ್ಲಿ ಕನ್ನಡ ಕಳ್ಳೆಪುರಿಯನ್ನು ಮಾರಿದ ಸಂತಸ ಅಕ್ಕದ ಕೆಲವು ಹಳೆಯ ಗೆಳೆಯರಿಗಿತ್ತು. ಈಗಲೂ ಇದೆ. id='are-slot-1' class='oiad oi-axt oiadv'> id='top-searched-articles'>ಎರಡು
ವರ್ಷಕ್ಕೊಮ್ಮೆ ವಿಶ್ವ ಕನ್ನಡ ಸಮ್ಮೇಳನಗಳು, ಕರ್ನಾಟಕದಿಂದ ಆಹ್ವಾನಿತ ಕನ್ನಡ ಕವಿ ಕಲಾವಿದರಿಂದ ಆಗಾಗ ಸಾಹಿತ್ಯ ಗೋಷ್ಠಿಗಳು, ರಸಮಂಜರಿಗಳು, ರಸದೌತಣಗಳು, ಸಮಾಜ ಸೇವೆಯ ಕೈಂಕರ್ಯಗಳು, ದಾನಧರ್ಮಗಳು ಅಕ್ಕ ಶಾಮಿಯಾನದಲ್ಲಿ ಏರ್ಪಾಟಾದರೂ ಸಹ ಅಮೆರಿಕನ್ನಡಿಗರ ಕನ್ನಡ ಚಿಂತನೆಗಳನ್ನು ಅಕ್ಕರೆಯ ಕನ್ನಡ ಲಿಪಿಯಲ್ಲಿ ಹಿಡಿದಿಡುವುದರಲ್ಲಿ ಈ ಸುದೀರ್ಘ ಹತ್ತು ವರ್ಷಗಳಲ್ಲಿ ಅಕ್ಕ ಸೋತಿದ್ದು ಹಳೇ ಸುದ್ದಿ.











Click it and Unblock the Notifications