ಕೊವಿಡ್ 19: ಅಮೆರಿಕಕ್ಕೆ ಮುಂದೆ ಕಾದಿದೆ ದೊಡ್ಡ ಆಘಾತ ಎಂದ WHO

ವಾಷಿಂಗ್ಟನ್, ಜೂನ್ 25: : ಮುಂದಿನ ದಿನಗಳಲ್ಲಿ ಅಮೆರಿಕಕ್ಕೆ ಭಾರಿ ದೊಡ್ಡ ಆಘಾತ ಕಾದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

Recommended Video

      ಪ್ರಪಂಚದ ಮುಂದೆ ಮತ್ತೆ ಪಾಕಿಸ್ತಾನಕ್ಕೆ ಮುಖಭಂಗ | Oneindia Kannada

      ಎಲ್ಲರೂ ಅಂದುಕೊಂಡಿರುವಂತೆ ಅಮೆರಿಕದಲ್ಲಿ ಕೊರೊನಾ ಸೋಂಕು ಅಂತಿಮ ಹಂತಕ್ಕೆ ಹೋಗಿಲ್ಲ, ಆದರೆ ಇನ್ನು ಕಲವೇ ದಿನಗಳಲ್ಲಿ ಆ ಹಂತ ತಲುಪಲಿದೆ, ಆದರೆ ಈಗಿರುವ ಪರಿಸ್ಥಿತಿಗಿಂತ ಅದು ಕೆಟ್ಟದಾಗಿರಲಿದೆ ಎಂದು ಹೇಳಿದೆ.

      ಮುಂಬರುವ ವಾರಗಳಲ್ಲಿ ಸಾವಿನ ಸಂಖ್ಯೆ ತಾರಕಕ್ಕೇರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೈಕಲ್ ರಾನ್ ತಿಳಿಸಿದ್ದಾರೆ. ಕಳೆದ ಕೆಲವು ವಾರಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಶೇ.25 ರಿಂದ50 ಕ್ಕೆ ಏರಿಕೆಯಾಗಿದೆ.

      WHO Expert Says Covid-19 Has Not Peaked In America

      ಆದರೂ ಕೆಲವು ದೇಶಗಳಲ್ಲಿ ಕೊರೊನಾ ಸೋಂಕು ಅಂತಿಮ ಹಂತವನ್ನು ತಲುಪಿಲ್ಲ, ಇದೀಗ ಸಮುದಾಯ ಸೋಂಕು ಆರಂಭವಾಗಿದೆ ಮುಂದಿನ ದಿನಗಳಲ್ಲಿ ಕೆಟ್ಟ ಪರಿಸ್ಥಿತಿಯನ್ನು ಎಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

      ಜಗತ್ತಿನಾದ್ಯಂತ ದಿನದಿಂದ ದಿನಕ್ಕೆ ಕೊವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದುವರೆಗೆ ಮಹಾಮಾರಿಗೆ ಬಲಿಯಾದವರ ಸಂಖ್ಯೆ 4.8 ಲಕ್ಷಕ್ಕೇರಿದೆ. ಅಮೆರಿಕದ ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾ ಸಂಶೋಧನಾ ಕೇಂದ್ರ ವರದಿ ಮಾಡಿರುವಂತೆ ಈ ವರೆಗೂ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 95, 27,123ಕ್ಕೆ ಏರಿಕೆಯಾಗಿದೆ.

      ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 606,881ಕ್ಕೆ ಏರಿದ್ದು, ಸಾವಿನ ಸಂಖ್ಯೆ 8,513 ಆಗಿದೆ. ಇಂಗ್ಲೆಂಡ್‌ನಲ್ಲಿ 43,081, ಇಟಲಿಯಲ್ಲಿ 34,644 ಮತ್ತು ಫ್ರಾನ್ಸ್‌ನಲ್ಲಿ 29,731ಜನರು ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

      ಅತಿಹೆಚ್ಚು (2,462,554) ಜನರಲ್ಲಿ ಸೋಂಕು ಕಾಣಿಸಿಕೊಂಡಿರುವ ಅಮೆರಿಕದಲ್ಲಿ ಈವರೆಗೆ ಒಟ್ಟು 124,281 ಮಂದಿ ಮೃತಪಟ್ಟಿದ್ದಾರೆ.1,040,605 ಮಂದಿ ಗುಣಮುಖರಾಗಿದ್ದಾರೆ.

      ಬ್ರೆಜಿಲ್‌ನಲ್ಲಿ 1,192,474ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ 53,874 ಸೋಂಕಿತರು ಮೃತಪಟ್ಟು, 649,908 ಮಂದಿ ಗುಣಮುಖರಾಗಿದ್ದಾರೆ. ಭಾರತದಲ್ಲಿ 14,894 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. 1,86,514 ಮಂದಿ ಸೋಂಕಿತರಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+