ಚೀನಾ,ರಷ್ಯಾದ ಕೊರೊನಾ ಲಸಿಕೆ ಬಳಸುವುದಿಲ್ಲ ಎಂದ ಅಮೆರಿಕ
ವಾಷಿಂಗ್ಟನ್, ಆಗಸ್ಟ್ 01: ಚೀನಾ ಹಾಗೂ ರಷ್ಯಾದ ಕೊರೊನಾ ಲಸಿಕೆಯನ್ನು ಬಳಸುವುದಿಲ್ಲ ಎಂದು ಅಮೆರಿಕ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ಸೋಂಕು ದಶಕಗಳ ಕಾಲ ಹೋಗುವುದಿಲ್ಲ ಎಂದು ಎಚ್ಚರಿಕೆ ಕೊಟ್ಟ ಬಳಿಕ ಅಮೆರಿಕ ತಜ್ಞ ಆಂಥೊನಿ ಫಾಸಿ ಈ ರೀತಿ ಹೇಳಿಕೆ ನೀಡಿದ್ದಾರೆ.
ಕೊರೊನಾ ಸೋಂಕು ಆರಂಭವಾಗಿ ಆರು ತಿಂಗಳ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಕೊರೊನಾ ಸೋಂಕು 679,000 ಮಂದಿಯ ಸಾವಿಗೆ ಕಾರಣವಾಗಿದೆ.

ಯುರೋಪ್‌ನಲ್ಲಿ ಹೊಸತಾಗಿ ಲಾಕ್‌ಡೌನ್ ಘೋಷಣೆಯಾಗಿದೆ. ಸಾಕಷ್ಟು ಚೀನಾ ಕಂಪನಿಗಳು ಲಸಿಕೆ ಕಂಡು ಹಿಡಿಯಲು ತುದಿಗಾಲಿನಲ್ಲಿ ನಿಂತಿವೆ.
ಆದರೆ ನಮಗೆ ಚೀನಾ, ರಷ್ಯಾದಲ್ಲಿ ತಯಾರಿಸುವ ಲಸಿಕೆ ಬೇಡ, ಬೇರೆ ದೇಶಕ್ಕೆ ಲಸಿಕೆ ನೀಡುವ ಮುನ್ನ ಅವರ ದೇಶದ ಜನರ ಮೇಲೆ ಪ್ರಯೋಗ ನಡೆಸಲಿ, ಅಲ್ಲಿ ಉತ್ತಮ ಫಲಿತಾಂಶ ಬಂದರೆ ಬೇರೆಯವರಿಗೆ ನೀಡಲಿ ಎಂದು ಹೇಳಿದೆ.
ಕೊರೊನಾ ಸೋಂಕಿನ ಪರಿಣಾಮ ದಶಕಗಳವರೆಗೂ ಇರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಸಾಂಕ್ರಾಮಿಕವು ಒಂದು-ಶತಮಾನದ ಆರೋಗ್ಯ ಬಿಕ್ಕಟ್ಟಾಗಿದೆ, ಇದರ ಪರಿಣಾಮಗಳು ಮುಂದಿನ ದಶಕಗಳವರೆಗೂ ಅನುಭವಿಸಬೇಕಾಗುತ್ತದೆ ಎಂದು ಟೆಡ್ರೊಸ್ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಸಮಿತಿಯ ಸಭೆಯಲ್ಲಿ ಹೇಳಿದರು.
ಸಾಂಕ್ರಾಮಿಕ ರೋಗದ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆ ಚೀನಾ ದೇಶದ ಪ್ರಭಾವಕ್ಕೆ ಒಳಗಾಗಿದೆ ಎಂದು ಅಮೆರಿಕಾ ಆರೋಪಿಸಿದೆ.ಈ ಹಿನ್ನಲೆಯಲ್ಲಿ ಅದು ಇತ್ತೀಚೆಗಷ್ಟೇ ವಿಶ್ವಸಂಸ್ಥೆಗೆ ನೀಡುವ ಅನುದಾನವನ್ನು ಸ್ಥಗಿತಗೊಳಿಸಿತ್ತು.












Click it and Unblock the Notifications