1 ಕೋಟಿ ಕೊರೊನಾ ಸೋಂಕಿತರನ್ನು ಹೊಂದಿರುವ ಮೊದಲ ದೇಶ ಅಮೆರಿಕ
ವಾಷಿಂಗ್ಟನ್, ನವೆಂಬರ್ 09: ಒಂದು ಕೋಟಿ ಕೊರೊನಾ ಸೋಂಕಿತರನ್ನು ಹೊಂದಿರುವ ಮೊದಲ ದೇಶ ಎನ್ನುವ ಕುಖ್ಯಾತಿಯನ್ನು ಅಮೆರಿಕ ಪಡೆದಿದೆ.
ಅಮೆರಿಕದಾದ್ಯಂತ ಕೊರೊನಾವೈರಸ್‌ನ ಮೂರನೇ ಅಲೆ ಶುರುವಾಗಿದೆ. ಕಳೆದ ಹತ್ತು ದಿನಗಳಲ್ಲಿ ಅಮೆರಿಕದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಕೊರೊನಾ ಸೋಂಕು ಆರಂಭವಾಗಿ 293 ದಿನಗಳು ಕಳೆದ ಬಳಿಕ ಮೊದಲ ಬಾರಿಗೆ ವಾಷಿಂಗ್ಟನ್ ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳನ್ನು ಕಂಡಿದೆ. ಅಮೆರಿಕದಲ್ಲಿ ಶನಿವಾರ 131,420 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಕಳೆದ ಒಂದು ವಾರದಲ್ಲಿ ನಾಲ್ಕು ದಿನ 100,000 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು.

ಅಮೆರಿಕದಲ್ಲಿ ಚುನಾವಣೆಗೂ ಮುನ್ನ ಕೊರೊನಾ ಲಸಿಕೆಯನ್ನು ನೀಡಲು ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದರು, ಅದು ಚುನಾವಣೆ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ನಂಬಿದ್ದರು.
ಆದರೆ ಚುನಾವಣೆಗೂ ಮುನ್ನ ಲಸಿಕೆ ಸಿಗುವುದು ಅಸಾಧ್ಯವೆಂದು ತಿಳಿದಿತ್ತು, ಜೋ ಬಿಡನ್ ಇದೀಗ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಯಾವ್ಯಾವ ಹೊಸ ಕ್ರಮಗಳನ್ನು ಅನುಸರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.












Click it and Unblock the Notifications