ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಪತ್ನಿ ಬಾರ್ಬರಾ ನಿಧನ
ವಾಷಿಂಗ್ಟನ್, ಏಪ್ರಿಲ್ 18: ಅಮೆರಿಕದ ಮಾಜಿ ಮೊದಲ ಮಹಿಳೆ, ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಪತ್ನಿ ಬಾರ್ಬರಾ ಬುಷ್ (92) ವಾಷಿಂಗ್ಟನ್ ನಲ್ಲಿ ನಿನ್ನೆ(ಏ.17) ನಿಧನರಾಗಿದ್ದಾರೆ.
ಬಾರ್ಬರಾ ಅವರು ಪತಿ, ಐವರು ಮಕ್ಕಳು, ಹದಿನಾಲ್ಕು ಮೊಮ್ಮಕ್ಕಳು ಮತ್ತು ಏಳು ಮರಿಮಕ್ಕಳನ್ನು ಅಗಲಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಕೊನೆಯ ದಿನಗಳಲ್ಲಿ ಅವರು ಆಸ್ಪತ್ರೆಯಲ್ಲಿ ಇರಲು ಇಷ್ಟಪಡದ ಕಾರಣ ಆತ್ಮೀಯರೊಂದಿಗೇ ಕಾಲಕಳೆಯುತ್ತಿದ್ದರು. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ನಿನ್ನೆ ನಿಧನರಾಗಿದ್ದಾರೆಂದು ಬುಷ್ ಕುಟುಂಬದ ವಕ್ತಾರ ಜಿಮ್ ಮ್ಯಾಕ್ ಗ್ರಾತ್ ತಿಳಿಸಿದ್ದಾರೆ.

1925 ರಲ್ಲಿ ನ್ಯೂಯಾರ್ಕ್ ನಲ್ಲಿ ಜನಿಸಿದ ಬಾರ್ಬರಾ ಬುಷ್, 1945 ಜಾರ್ಜ್ ಬುಷ್ ಅವರನ್ನು ಮದುವೆಯಾದರು. 1989 ರಿಂದ 1993 ರ ಅವಧಿಯಲ್ಲಿ ಜಾರ್ಜ್ ಬುಷ್ ಅಮೆರಿಕ ಅಧ್ಯಕ್ಷರಾಗಿದ್ದ ಸಮಯದಲ್ಲಿ ಮೊದಲ ಮಹಿಳೆಯ ಪಟ್ಟ ಅಲಂಕರಿಸಿದ್ದರು.
ಅವರ ಅಗಲಿಕೆಗೆ ವಿಶ್ವದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications