• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೌಕರರಿಗೆ 35 ಲಕ್ಷ ರೂ ಬೋನಸ್ ನೀಡಿದ ಅಮೆರಿಕ ಕಂಪನಿ

|

ವಾಷಿಂಗ್ಟನ್, ಡಿಸೆಂಬರ್ 13: ಪ್ರಮುಖ ಹಬ್ಬ ಹರಿದಿನಗಳು ಬಂದಾಗ ಸಾವಿರಾರು ರುಪಾಯಿ ಬೋನಸ್ ನೀಡುವುದು ಸಾಮಾನ್ಯ ಆದರೆ, ಅಮೆರಿಕದ ಕಂಪನಿಯೊಂದು ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ತನ್ನ ಸಿಬ್ಬಂದಿಗೆ ಬರೋಬ್ಬರಿ 35.50 ಲಕ್ಷ ರುಪಾಯಿ ಬೋನಸ್ ನೀಡಿದೆ.

ಕಂಪನಿಯ ನಿರ್ಧಾರವನ್ನು ನೋಡಿ ಸಿಬ್ಬಂದಿ ಹೌಹಾರಿದ್ದಾರೆ.ಒಟ್ಟು ಬೋನಸ್‌ಗಾಗಿಯೇ ಕಂಪನಿಯು 71 ಕೋಟಿ ರೂವನ್ನು ತೆಗೆದಿರಿಸಿದೆ.

ಖಾಸಗಿ ವಲಯದ ಉದ್ಯೋಗಕ್ಕೆ ಮೀಸಲಾತಿ ಇಲ್ಲ

ಕಂಪನಿಯ ಈ ಕ್ರಮಕ್ಕೆ ಸಿಬ್ಬಂದಿ ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಸೇಂಟ್ ಜಾನ್ ಪ್ರಾಪರ್ಟೀಸ್ ಇಂತಹದೊಂದು ವಿಶಿಷ್ಟ ನಿರ್ಧಾರ ಮಾಡಿದೆ.

ಈ ಕಂಪನಿಯಲ್ಲಿ ಒಟ್ಟು 198 ಸಿಬ್ಬಂದಿಯಿದ್ದು, ಎಲ್ಲರಿಗೂ ಸೇರಿ ಸುಮಾರು 7 ಕೋಟಿ ರೂ ಬೋನಸ್ ನೀಡಲು ನಿರ್ಧರಿಸಲಾಗಿತ್ತು. ಬಳಿಕ ಇದು 35 ಕೋಟಿಗೆ ಏರಿಕೆಯಾಯಿತು.

ಇದನ್ನು ವಿಂಗಡಿಸಿದಾಗ ಸಿಬ್ಬಂದಿಗೆ ದೊಡ್ಡ ಪ್ರಮಾಣದ ಹಣ ದೊರೆಯುವುದಿಲ್ಲ ಹೀಗಾಗಿ. ಪ್ರತಿ ಸಿಬ್ಬಂದಿಗೂ 35 ಲಕ್ಷಕ್ಕಿಂತಲೂ ಅಧಿಕ ಹಣ ಬರುವಂತೆ ಮಾಡಿ, ಬೋನಸ್‌ಗೆ 10 ಮಿಲಿಯನ್ ಡಾಲರ್ ವಿನಿಯೋಗಿಸಲು ಸಂಸ್ಥೆ ಮುಖ್ಯಸ್ಥ ಸೇಂಟ್ ಜಾನ್ ನಿರ್ಧರಿಸಿದ್ದಾರೆ. ಸಂಸ್ಥೆಯ ಸಿಬ್ಬಂದಿ ವಾರ್ಷಿಕ ಟಾರ್ಗೆಟ್‌ನ್ನು ಮೀರಿ ಕೆಲಸ ಮಾಡಿದ್ದಾರೆ.

ಹೀಗಿರುವಾಗ ಅವರಿಗೆ ಖುಷಿಯಾಗುವ ರೀತಿಯಲ್ಲಿ ಬೋನಸ್ ನೀಡುವುದು ಹಾಗೂ ಸಿಬ್ಬಂದಿಯಲ್ಲಿ ಉತ್ಸಾಹ ಮೂಡಿಸುವುದು ಕಂಪನಿಯ ಕೆಲಸವಾಗಿದೆ ಎಂದು ಜಾನ್ ಹೇಳಿಕೊಂಡಿದ್ದಾರೆ.

ಕಂಪನಿಯ ನಿರ್ಧಾರದ ಬಗ್ಗೆ ಮಾತನಾಡಿರುವ ಸಿಬ್ಬಂದಿ ಡೇನಿಯಲ್ ವೆಲೆಂಜಿಯಾ ಇಷ್ಟೊಂದು ದೊಡ್ಡ ಮೊತ್ತವನ್ನು ಮೊದಲಿಗೆ ಆಶ್ಚರ್ಯಚಕಿತವಾಗಿದ್ದೆವು. ನಂಬಲು ಕೂಡ ಸಾಧ್ಯವಾಗಿರಲಿಲ್ಲ ಆದರೆ ಬಳಿಕ ಇದು ನಿಜವೆಂದು ಗೊತ್ತಾದಾಗ ಆನಂದ ಭಾಷ್ಪವೇ ಹರಿಯಿತು ಎಂದು ಹೇಳಿದ್ದಾರೆ.

English summary
American Company Gave 35 Lakh Each Christmas Bonus Each employee was given a red envelope at the Christmas dinner. It contained roughly 38,000 pounds (Rs 35 lakh) each.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X