ವಿಜಯಪುರದ ಅಂಗನವಾಡಿಯಲ್ಲಿ ಸಿಲಿಂಡರ್ ಸ್ಪೋಟ
ವಿಜಯಪುರ, ನವೆಂಬರ್ 19: ಅಂಗನವಾಡಿಯಲ್ಲಿ ಸಿಲಿಂಡರ್ ಸ್ಪೋಟಗೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ. ಅಡುಗೆ ಮಾಡುವ ಸಂದರ್ಭದಲ್ಲಿ ಸ್ಪೋಟಗೊಂಡಿದ್ದು, ಅಲ್ಲಿದ್ದ 25 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂಗನವಾಡಿ ಸಹಾಯಕಿಯು ಅಡುಗೆ ಮಾಡುವ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ. ಸ್ಥಳೀಯರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ.
ಅಂಗನವಾಡಿ ಮಕ್ಕಳಿಗೆ ಮಧ್ಯಾಹ್ನದ ಊಟ ತಯಾರಿಸುವಾಗ ಇದ್ದಕ್ಕಿದ್ದಂತೆ ಸಿಲಿಂಡರ್ ಸ್ಪೋಟಗೊಂಡಿತು. ಸ್ಥಳೀಯರು ಸಹಾಯ ಮಾಡಿ ಸಂಭವಿಸುವ ಹಾನಿಯನ್ನು ತಡೆದಿದ್ದಾರೆ. ಎಲ್ಲ ಮಕ್ಕಳು ಅಂಗನವಾಡಿಯ ಹೊರಗೆ ಆಟವಾಡುತ್ತಿದ್ದರಿಂದ, ಭಾರೀ ಅವಾಂತರದಿಂದ ತಪ್ಪಿಸಿಕೊಂಡಿದ್ದಾರೆ. ಸಿಲಿಂಡರ್ ಯಾವ ಕಾರಣಕ್ಕೆ ಸ್ಪೋಟಗೊಂಡಿದೆ ಎಂದು ತಿಳಿದು ಬಂದಿಲ್ಲ.

ಸಿಲಿಂಡರ್ ಬಳಕೆ ಮಾಡುವುದರ ಕುರಿತು ಇಂದಿಗೂ ಎಷ್ಟೋ ಅಂಗನವಾಡಿ ಸಹಾಯಕಿಯರಿಗೆ ಸರಿಯಾದ ಮಾಹಿತಿ ಇಲ್ಲ. ಸಿಲಿಂಡರ್ ಬಳಸುವ ಬಗ್ಗೆ ಅವರಿಗೆ ಮಾಹಿತಿಯನ್ನು ಇಲಾಖೆಯಾಗಲಿ ಅಥವಾ ಅಂಗನವಾಡಿ ಕಾರ್ಯಕರ್ತೆಯರಾಗಲಿ ನೀಡಬೇಕು.












Click it and Unblock the Notifications