ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸದ್ ಗೆ ಉಗ್ರರ ಭೀತಿ

Posted By:
Subscribe to Oneindia Kannada

ಉಡುಪಿ, ನವೆಂಬರ್ 25 : ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸದ್ ಮೇಲೆ ಉಗ್ರರ ಕಣ್ಣು ಬಿದ್ದಿದೆ. ಎರಡನೇ ದಿನಕ್ಕೆ ಕಾಲಿಟ್ಟಿರುವ ಧರ್ಮ ಸಂಸದ್ ಗೆ ಇದೀಗ ಉಗ್ರರ ಭೀತಿ ಎದುರಾಗಿದೆ.

'ಪೇಜಾವರಶ್ರೀಗಳ ಕಣ್ಣ ಮುಂದೆಯೇ ರಾಮ ಮಂದಿರ ನಿರ್ಮಾಣ'

ಉಗ್ರರ ದಾಳಿ ಬಗ್ಗೆ ಗುಪ್ತಚರ ಇಲಾಖೆ ರಾಜ್ಯಕ್ಕೆ ಎಚ್ಚರಿಕೆ ನೀಡಿದೆ. ಧರ್ಮ ಸಂಸದ್ ನಲ್ಲಿ ರಾಮಮಂದಿರ ನಿರ್ಮಾಣದ ಘೋಷಣೆ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ ಸೂಕ್ಷ್ಮ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ ಮೌಖಿಕ ಆದೇಶ ನೀಡಲಾಗಿದ್ದು, ಕೋಮು ಸಂಘಟನೆಗಳ ಚಟುವಟಿಕೆ ಮೇಲೂದ್ದು ಕಣ್ಣಿಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ.

'ಹಿಂದೂ ವೈಭವ' ಪ್ರದರ್ಶನ ವೀಕ್ಷಿಸಲು ಹೊರಡಿಸಿದ್ದ ಸುತ್ತೋಲೆ ವಾಪಾಸ್

2ನೇ ದಿನವಾದ ಇಂದು (ಶನಿವಾರ) ಧರ್ಮ ಸಂಸದ್ ನಲ್ಲಿ ಸಂವಾದ ಕಾರ್ಯಕ್ರಮಗಳು ನಡೆಯಲಿದ್ದು,ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ.

Udupi dharma samsad programme high alert for militant terror attack

ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಸಾಮಾಜಿಕ ಸಾಮರಸ್ಯ ನಿರ್ಮಾಣಕ್ಕೆ ಮಾಡಬೇಕಾದ ಪ್ರಯತ್ನಗಳು, ಗೋ ಹತ್ಯೆ ನಿಷೇಧ ಕಾಯಿದೆ ಸೇರಿ ಹಲವು ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ.

ಮಧ್ಯಾಹ್ನ 3 ಗಂಟೆಯಿಂದ ಸಂಜೆ 6ರವರೆಗೆ ಮತಾಂತರ ತಡೆ ಹಾಗೂ ಪರಿವರ್ತನಾ ಪ್ರಯತ್ನಗಳು, ನಮ್ಮ ಸಂಸ್ಕೃತಿಯ ರಕ್ಷಣೆಗೆ ಯೋಜನೆಗಳು ಈ ವಿಚಾರದ ಕುರಿತಾಗಿ ವಿಚಾರಗೋಷ್ಠಿ ನಡೆಯಲಿದೆ.

ಈ ಗೋಷ್ಠಿಯಲ್ಲಿ 1200 ಮಂದಿ ಸಂತರು ತಮ್ಮ ಅಭಿಪ್ರಾಯಗಳ ಮಂಡಿಸಲಿದ್ದಾರೆ. ಈ ಧರ್ಮ ಸಂಸದ್ ನಲ್ಲಿ ಪ್ರವೀಣ ತೊಗಾಡಿಯಾ, ಪೇಜಾವರ ಶ್ರೀ, ಸುತ್ತೂರು ಶ್ರೀ, ಡಾ. ವಿರೇಂದ್ರ ಪಾಟೀಲ್ ಹೆಗಡೆ ಸೇರಿದಂತೆ ಹಲವು ಹಿಂದೂ ಧರ್ಮಕ್ಕೆ ಹೋರಾಟ ನಡೆಸುತ್ತಿರುವ ಸಾಧುಸಂತರು ಭಾಗವಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Udupi dharma samsad programme alert for militant terror attack. The Intelligence Bureau has warned the state about the terrorist attack during Dharma Samsad Programme in Udupi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ