ಪಾಕಿಸ್ತಾನದ ಕೊರೊನಾ ಸೋಂಕಿತರನ್ನು ಕಾಶ್ಮೀರದೊಳಗೆ ನುಗ್ಗಿಸಲಾಗುತ್ತಿದೆ: ದಿಲ್ಬಾಗ್ ಸಿಂಗ್
ಶ್ರೀನಗರ, ಏಪ್ರಿಲ್ 22: ಪಾಕಿಸ್ತಾನದಲ್ಲಿ ಕೊರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಕೊಡಿಸಲಾಗದೆ ಕಾಶ್ಮೀರದೊಳಗೆ ನುಗ್ಗಿಸುತ್ತಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಇಂದು ಒಂದೇ ದಿನ 49 ಮಂದಿ ಮೃತಪಟ್ಟಿದ್ದು ಒಟ್ಟಾರೆ ಸಾವಿನ ಸಂಖ್ಯೆ 652ಕ್ಕೇರಿದೆ. ಇನ್ನು 1449 ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದ್ದು ಕೊರೊನಾ ಸೋಂಕಿತರ ಸಂಖ್ಯೆ 20,471ಕ್ಕೇರಿದೆ.
ಪಾಕಿಸ್ತಾನ ಈ ಮೊದಲು ಉಗ್ರರನ್ನು ಕಾಶ್ಮೀರ ಕಣಿವೆಗೆ ನುಗ್ಗಿಸುತ್ತಿತ್ತು. ಆದರೆ ಇದೀಗ ಪಾಕಿಸ್ತಾನ ಕೊವಿಡ್ -19 ರೋಗಿಗಳನ್ನು ಕಣಿವೆಯಲ್ಲಿ ನುಗ್ಗಿಸುತ್ತಿದೆ ಎಂಬ ನಂಬಲರ್ಹ ವರದಿಗಳು ನಮ್ಮಲ್ಲಿವೆ. ಇದು ಆತಂಕಕಾರಿ ಸಂಗತಿಯಾಗಿದೆ ಎಂದು ದಿಲ್ಬಾಗ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆದರೂ, ಗಡಿಯಲ್ಲಿ ಮತ್ತು ಒಳನಾಡಿನಲ್ಲಿ ಯಾವುದೇ ಸಂಭವನೀಯ ದಾಳಿ ಎದುರಿಸಲು ಭದ್ರತಾ ಪಡೆಗಳನ್ನು ಸನ್ನದ್ಧಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ತನಿಖೆ ನಡೆಸಲಾಗುತ್ತಿದೆ.
ಈಗಾಗಲೇ ಜಮ್ಮು ಕಾಶ್ಮೀರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ ಎಂದು ಕ್ವಾರಂಟೈನ್ ಕೇಂದ್ರಕ್ಕೆ ಹೋಗಿ ಬಂದ ಬಳಿಕ ಸಿಂಗ್ ಹೇಳಿಕೆ ನೀಡಿದ್ದಾರೆ.












Click it and Unblock the Notifications