ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಚುನಾವಣೆ: 81 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು

|
Google Oneindia Kannada News

ಶ್ರೀನಗರ, ಅಕ್ಟೋಬರ್ 26: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಎರಡನೆಯ ಸ್ಥಾನ ಪಡೆದುಕೊಂಡಿದೆ. ಆದರೆ ಮತದಾರರು ರಾಜಕೀಯ ಪಕ್ಷಗಳಿಗಿಂತ ಸ್ವತಂತ್ರವಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೇ ಹೆಚ್ಚು ಮನ್ನಣೆ ನೀಡಿದ್ದಾರೆ. 1947ರಿಂದ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರದೇಶಾಭಿವೃದ್ಧಿ ಮಂಡಳಿಗಳ (ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್) ಚುನಾವಣೆ ನಡೆದಿದೆ. ಅ.24ರಂದು ನಡೆದ ಚುನಾವಣೆಯಲ್ಲಿ ಶೇ 98ರಷ್ಟು ಮತದಾನ ನಡೆದು ದಾಖಲೆ ಬರೆದಿದೆ.

ಶುಕ್ರವಾರ ಫಲಿತಾಂಶ ಹೊರಬಿದ್ದಿದ್ದು, ಮೊದಲ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸುಮಾರು 310 ಕ್ಷೇತ್ರಗಳ ಪೈಕಿ 217 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಬಿಜೆಪಿ 81 ಸ್ಥಾನಗಳನ್ನು ಪಡೆದು ಎರಡನೆಯ ಸ್ಥಾನ ಗಳಿಸಿದೆ. ಒಟ್ಟು 1,092 ಅಭ್ಯರ್ಥಿಗಳು ಕಣದಲ್ಲಿದ್ದರು. ಇವರಲ್ಲಿ 27 ಅಭ್ಯರ್ಥಿಗಳು ಎದುರಾಳಿಗಳಿಲ್ಲದೆ ಅವಿರೋಧ ಆಯ್ಕೆಯಾಗಿದ್ದಾರೆ.

ಕೇಂದ್ರದ ಕ್ರಮ ಬೆಂಬಲಿಸಿ ಸುಪ್ರೀಂ ಮೆಟ್ಟಿಲೇರಿದ ಕಾಶ್ಮೀರಿ ಪಂಡಿತರು ಕೇಂದ್ರದ ಕ್ರಮ ಬೆಂಬಲಿಸಿ ಸುಪ್ರೀಂ ಮೆಟ್ಟಿಲೇರಿದ ಕಾಶ್ಮೀರಿ ಪಂಡಿತರು

ಪಂಚಾಯತ್ ರಾಜ್‌ ಸಂಸ್ಥೆಗಳಿಗೆ ಗ್ರಾಮ, ಬ್ಲಾಕ್ ಮತ್ತು ಜಿಲ್ಲೆ ಎಂಬ ಮೂರು ಹಂತಗಳಲ್ಲಿ ಚುನಾವಣೆ ನಡೆಯುತ್ತದೆ. ಮೊದಲ ಹಂತದ ಚುನಾವಣೆ ಕಳೆದ ವರ್ಷ ನಡೆದಿತ್ತು. ಬಿ.ಡಿ.ಸಿಗಳ ಅಧ್ಯಕ್ಷರ ಆಯ್ಕೆಗೆ ಈ ಚುನಾವಣೆ ನಡೆದಿದ್ದು, 1947ರಿಂದ ಇದುವರೆಗೂ ಬಿ.ಡಿ.ಸಿ. ಚುನಾವಣೆಗಳು ನಡೆದೇ ಇರಲಿಲ್ಲ.

ಶೇ 98ರಷ್ಟು ಮತದಾನ

ಶೇ 98ರಷ್ಟು ಮತದಾನ

8,313 ಮಹಿಳೆಯರು ಮತ್ತು 18,316 ಪುರುಷರು ಸೇರಿದಂತೆ 26,629 ಮತದಾರರಿದ್ದು, ಜಮ್ಮು, ಕಾಶ್ಮೀರ ಹಾಗೂ ಲಡಾಕ್‌ಗಳಲ್ಲಿ ಬಿ.ಡಿ.ಸಿ. ಚುನಾವಣೆ ನಡೆದಿದೆ. ಗ್ರಾಮ ಪಂಚಾಯಿತಿ ಮಟ್ಟದ ಚುನಾವಣೆಯಲ್ಲಿ ಶೇ 98ರಷ್ಟು ಮಂದಿ ಮತ ಚಲಾಯಿಸಿರುವುದು ವಿಶೇಷ. ಶ್ರೀನಗರದಲ್ಲಿ ಶೇ 100ರಷ್ಟು ಮತದಾನ ನಡೆದಿದೆ.

ನೂತನ ರಾಜ್ಯಪಾಲರನ್ನು ನೇಮಕ ಮಾಡಿದ ಕೇಂದ್ರ ಸರ್ಕಾರನೂತನ ರಾಜ್ಯಪಾಲರನ್ನು ನೇಮಕ ಮಾಡಿದ ಕೇಂದ್ರ ಸರ್ಕಾರ

ಪ್ರಮುಖ ಪಕ್ಷಗಳಿಂದ ಬಹಿಷ್ಕಾರ

ಪ್ರಮುಖ ಪಕ್ಷಗಳಿಂದ ಬಹಿಷ್ಕಾರ

ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಜಮ್ಮು ಆಂಡ್ ಕಾಶ್ಮೀರ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಗಳು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ್ದನ್ನು ವಿರೋಧಿಸಿ ಕೆಲವು ಕಡೆ ಚುನಾವಣೆಯನ್ನು ಬಹಿಷ್ಕರಿಸಿದ್ದವು. ಪುಲ್ವಾಮಾದಲ್ಲಿ ಮಾತ್ರ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಕಂಡಿದೆ.

ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆ

ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆ

ಈ ಚುನಾವಣೆಯಲ್ಲಿ ಮತದಾರರ ಉತ್ಸಾಹವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದರು. ಜಮ್ಮು, ಕಾಶ್ಮೀರ, ಲೇಹ್ ಮತ್ತು ಲಡಾಕ್‌ಗಳಲ್ಲಿ ನಡೆದ ಚುನಾವಣೆ ಅತ್ಯಂತ ಶಾಂತಿಯುತವಾಗಿತ್ತು. ಇದು ಪ್ರಜಾಪ್ರಭುತ್ವದಲ್ಲಿ ಜನರು ಇರಿಸಿರುವ ನಂಬಿಕೆಯನ್ನು ಮತ್ತು ತಳಮಟ್ಟದ ಆಡಳಿತಕ್ಕೆ ಮಹತ್ವ ನೀಡಿರುವುದನ್ನು ತೋರಿಸುತ್ತದೆ ಎಂದು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ಪಿಓಕೆ ಇರುವುದು ಉಗ್ರರ ಹಿಡಿತದಲ್ಲಿ, ಪಾಕ್‌ ನಿಯಂತ್ರಣದಲ್ಲಲ್ಲ: ರಾವತ್ಪಿಓಕೆ ಇರುವುದು ಉಗ್ರರ ಹಿಡಿತದಲ್ಲಿ, ಪಾಕ್‌ ನಿಯಂತ್ರಣದಲ್ಲಲ್ಲ: ರಾವತ್

280 ಬ್ಲಾಕ್‌ಗಳಲ್ಲಿ ಚುನಾವಣೆ

280 ಬ್ಲಾಕ್‌ಗಳಲ್ಲಿ ಚುನಾವಣೆ

ಬಿಜೆಪಿ ಜಮ್ಮುವಿನಲ್ಲಿ 52 ಕೌನ್ಸಿಲ್, ಕಾಶ್ಮೀರದಲ್ಲಿ 18 ಮತ್ತು ಲಡಾಕ್‌ನಲ್ಲಿ 11 ಕಡೆ ಗೆಲುವು ಸಾಧಿಸಿದೆ. ಜಮ್ಮು ಆಂಡ್ ಕಾಶ್ಮೀರ್ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿ 8 ಕಡೆ ಗೆಲುವು ಕಂಡಿದೆ. ಒಟ್ಟು 310 ಬ್ಲಾಕ್‌ಗಳಿದ್ದು, 307 ಬ್ಲಾಕ್‌ಗಳಲ್ಲಿ ಚುನಾವಣೆ ನಡೆದಿತ್ತು. 27 ಬ್ಲಾಕ್‌ಗಳಿಗೆ ಅವಿರೋಧ ಆಯ್ಕೆ ನಡೆದಿದ್ದರಿಂದ 280 ಬ್ಲಾಕ್‌ಗಳಲ್ಲಿ ಚುನಾವಣೆ ನಡೆದಿತ್ತು.

English summary
BJP has won 81 and independence in 217 seats in Jammu and Kashmir first ever Block Development Council (BDC) polls held since 1947.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X