ಇರಾನ್ ವಿರುದ್ಧ ಇನ್ನಷ್ಟು ಭೀಕರ ಕಾರ್ಯಾಚರಣೆಗೆ ಅಮೆರಿಕ ಸಿದ್ಧತೆ, ಮತ್ತಷ್ಟು ಅಸ್ತ್ರಗಳು ರವಾನೆ ಸಾಧ್ಯತೆ | Donald Trump
ಇರಾನ್
ಸೇನೆಯನ್ನ ಹೇಗಾದರೂ ಮಾಡಿ ಸೈಲೆಂಟ್ ಮಾಡಬೇಕು ಹಾಗೂ ಈ ಮೂಲಕ ಯುದ್ಧದಲ್ಲಿ ಗೆಲುವು ಕಾಣಬೇಕು ಎಂದು ಇಸ್ರೇಲ್ ಮತ್ತು ಅಮೆರಿಕ ಶಪಥ ಮಾಡಿವೆ. ಹೀಗಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಸಾಲು ಸಾಲು ಸಭೆಗಳನ್ನ ನಡೆಸುತ್ತಾ, ಇರಾನ್ ದೇಶದ ಈಗಿನ ಪರಿಸ್ಥಿತಿ ಕುರಿತಾಗಿ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೆ ಯಾವುದೇ ಕ್ಷಣದಲ್ಲಿ ನೇರವಾಗಿ ಇರಾನ್ ಮೇಲೆ ಯುದ್ಧ ಜೋರು ಮಾಡಿ ಅಮೆರಿಕದ ಭೂಸೇನೆ ಒಳಗೆ ನುಗ್ಗಿಸುವ ಚಿಂತನೆ ಕೂಡ ನಡೆಯುತ್ತಿದೆ. ಇಂತಹ ಪರಿಸ್ಥಿತಿಯು ಎದುರಾಗಿರುವ ಸಮಯದಲ್ಲೇ, ಜಗತ್ತಿನ ವಿವಿಧ ಭಾಗದಲ್ಲಿ ಇರುವ ಅಮೆರಿಕದ ನೌಕೆಗಳು & ಇತರ ಅಸ್ತ್ರಗಳು ನೇರವಾಗಿ ಮಧ್ಯಪ್ರಾಚ್ಯ ಕಡೆಗೆ ಬರುತ್ತಿವೆ. ಅದರಲ್ಲೂ ಇರಾನ್ ದೇಶದ ನೂತನ ಸುಪ್ರೀಂ ಲೀಡರ್, ಎಂದರೆ ಇರಾನ್ ಸರ್ವಾಧಿಕಾರಿ ಹತ್ಯೆಗೆ ಭರ್ಜರಿ ಪ್ಲಾನ್ ರೂಪುಗೊಂಡಂತೆ ಕಾಣುತ್ತಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಯುದ್ಧ..
ಯುದ್ಧ.. ಯುದ್ಧ.. ಹೀಗೆ ಎಲ್ಲಾ ಕಡೆ ಬರೀ ಯುದ್ಧದ ಭೀತಿಯೇ ಆವರಿಸಿಬಿಟ್ಟಿದೆ ನೋಡಿ. ಮಧ್ಯಪ್ರಾಚ್ಯದಲ್ಲಿ ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆ ಶುರುವಾದ ನಂತರ ಎಲ್ಲೆಲ್ಲೂ ಯುದ್ಧದ ಮಾತೇ ಕೇಳಿಬರುತ್ತಿದೆ. ಹೂಡಿಕೆದಾರರು ಈ ಕಾರಣಕ್ಕೆ ಹೆದರಿ ಷೇರು ಮಾರುಕಟ್ಟೆಯಿಂದ ಬಂಡವಾಳ ವಾಪಸ್ ಪಡೆಯುತ್ತಿದ್ದಾರೆ. ಇರಾನ್ ವಿರುದ್ಧ ಅಮೆರಿಕ & ಇಸ್ರೇಲ್ ಸೇನಾ ಕಾರ್ಯಾಚರಣೆ ಜೋರಾದ ಕಾರಣಕ್ಕೆ ಜಾಗತಿಕ ಆರ್ಥಿಕತೆ ಅಲ್ಲಾಡಿದೆ. ಅಮೆರಿಕ, ಯುರೋಪ್ ದೇಶಗಳು ಸೇರಿ ಜಗತ್ತಿನಲ್ಲಿ ದೊಡ್ಡ ದೊಡ್ಡ ದೇಶಗಳ ಷೇರುಪೇಟೆ ಯುದ್ಧ ಕಾರಣ ನಲುಗಿದ್ದು ಹೂಡಿಕೆದಾರರಿಗೆ ಚಿಂತೆಯೂ ಶುರುವಾಗಿದೆ. ಹೀಗಿದ್ದರೂ ಅಮೆರಿಕ ಮಾತ್ರ ಯುದ್ಧ ನಿಲ್ಲಿಸದೆ ಇನ್ನಷ್ಟು ಜೋರಾಗಿಸುವ ಪ್ಲಾನ್ ಮಾಡಿದ್ದು, ಈಗ ದೊಡ್ಡ ಮಟ್ಟದಲ್ಲಿ ಇರಾನ್ ನೆಲದ ಮೇಲೆ ದಾಳಿಗೆ ಅಮೆರಿಕ ಸನ್ನದ್ಧವಾಗಿದೆ. id='are-slot-2' class='oiad oi-axt oiadv'>












Click it and Unblock the Notifications