• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮತ್ತೆ ನೆನಪಾಗುತ್ತಿದೆ ಆದರ್ಶ ದಂಪತಿ ಸುಷ್ಮಾ-ಸ್ವರಾಜ್ ಪ್ರೇಮಕಥೆ

|

ಪ್ರೇಮಕ್ಕೆ ಜಾತಿ, ಸಿದ್ಧಾಂತದ ಹಂಗಿಲ್ಲ ಎಂಬುದಕ್ಕೆ ಸುಷ್ಮಾ ಮತ್ತು ಸ್ವರಾಜ್ ಕೌಶಾಲ್ ಅವರ ಪ್ರೇಮಕಥೆ ಸಾಕ್ಷಿಯಾಗಿ ನಿಲ್ಲುತ್ತದೆ.

ಚಿತ್ರಗಳಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ

ಬಲಪಂಥೀಯವಾದಿಯಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತಗಳ ಪಡಿಯಚ್ಚಾಗಿ ಬೆಳೆದ ಸುಷ್ಮಾ, ಪಕ್ಕಾ ಸಮಾಜವಾದಿ ಸ್ವರಾಜ್ ಅವರನ್ನು ವರಿಸಿದ್ದು ಒಂದು ಚೆಂದದ ಪ್ರೇಮಕಥೆ.

ನಿಮಗೆ ಗೊತ್ತಿರದ ಸುಷ್ಮಾ ಸ್ವರಾಜ್ ಹೆಜ್ಜೆ ಗುರುತುಗಳು

ದೆಹಲಿಯಲ್ಲಿ ಕಾನೂನು ಶಾಸ್ತ್ರ ಓದುವಾಗ ಪರಿಚಿತರಾದ ಈ ಜೋಡಿ ನಂತರ ಸುಪ್ರೀಂ ಕೋರ್ಟಿನಲ್ಲಿ ವಕೀಲರಾಗಿಯೂ ಒಟ್ಟಾಗಿಯೇ ಕೆಲಸ ಮಾಡಿದ್ದರು. ಪರಸ್ಪರ ಒಡನಾಟದಿಂದಾಗಿ ಹುಟ್ಟಿದ ಸ್ನೇಹವೇ, ಪ್ರೇಮವಾಗಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದಾಗ ನಂಬಿದ್ದ ಭಿನ್ನ ಸಿದ್ಧಾಂತಗಳು ಅಡ್ಡಿ ಎನ್ನಿಸಲಿಲ್ಲ. ಏಕೆಂದರೆ ಇಬ್ಬರ ನಂಬಿಕೆ ಬೇರೆ ಬೇರೆಯಾದರೂ ಅವನ್ನು ಗೌರವಿಸುವ ಪ್ರಬುದ್ಧತೆ ಇಬ್ಬರಲ್ಲೂ ಇತ್ತು! ಆ ಪ್ರಬುದ್ಧತೆ, ಒಬ್ಬರಿಗೊಬ್ಬರ ಮೇಲಿದ್ದ ಗೌರವವೇ ಅವರನ್ನು 46 ವರ್ಷಗಳ ಯಶಸ್ವೀ ದಾಂಪತ್ಯದವರೆಗೆ ತಂದು ನಿಲ್ಲಿಸಿತ್ತು.

ಸುಷ್ಮಾ ಸ್ವರಾಜ್ ನೆನಪು ಹಸಿರಾಗಿಸುವ ಸುಂದರ ಚಿತ್ರಗಳು

ಸ್ವರಾಜ್ ಅವರನ್ನು ವರಿಸಲು ಮುಂದಾದ ಸುಷ್ಮಾ ಅವರ ನಡೆಗೆ ಮೊದಲಿಗೆ ಸುಷ್ಮಾ ಅವರ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಹರ್ಯಾಣದ ಸಾಂಪ್ರದಾಯಿಕ 'ಶರ್ಮಾ' ಕುಟುಂಬದಲ್ಲಿ ಹುಟ್ಟಿದ್ದ ಸುಷ್ಮಾ ಅವರು ಸಂಪ್ರದಾಯದ ಮೇಲೆ ಹೆಚ್ಚು ನಂಬಿಕೆ ಇಲ್ಲದ ಸಮಾಜವಾದಿ ಸ್ವರಾಜ್ ಅವರನ್ನು ಮದುವೆಯಾಗುವುದು ಬೇಡ ಎಂಬುದು ಮನೆಯವರ ನಿಲುವಾಗಿತ್ತು. ಆದರೆ 1975 ರ ಜುಲೈ 13 ರಂದು ತುರ್ತು ಪರಿಸ್ಥಿತಿಯ ಬಿಸಿ ಹೆಚ್ಚಿದ್ದ ಸಂದರ್ಭದಲ್ಲೇ ಸುಷ್ಮಾ-ಸ್ವರಾಜ್ ವಿವಾಹವಾದರು. ಈ ಜೋಡಿಯ ಪ್ರೀತಿಯೆದುರು ಕುಟುಂಬದ ಹಠ ಸೋತಿತ್ತು! ಆ ನಂತರ ಈ ದಂಪತಿಗೆ ಬಾನ್ಸುರಿ ಎಂಬ ಮಗಳೂ ಹುಟ್ಟಿದಳು.

ಅಂಬಾಲ ಕಂಟೋನ್ಮೆಂಟ್ ನ ಗಟ್ಟಿಗಿತ್ತಿ ಹೆಣ್ಣುಮಗಳು ಸುಷ್ಮಾ ಸ್ವರಾಜ್

ಮದುವೆಯಾದ 46 ವರ್ಷಗಳವರೆಗೂ ಪರಸ್ಪರ ಅಷ್ಟೇ ಗೌರವ, ಪ್ರೀತಿಯನ್ನು ಉಳಿಸಿಕೊಂಡು ಆದರ್ಶ ದಂಪತಿ ಎನ್ನಿಸಿಕೊಂಡಿದ್ದರು ಸುಷ್ಮಾ-ಸ್ವರಾಜ್. ದೆಹಲಿಯ ಸರ್ಕಾರಿ ಬಂಗಲೆ(ಹೊಸ ಸರ್ಕಾರ ರಚನೆಯಾದ ಮೇಲೆ)ಯಿಂದ ಜೂನ್ 30 ರಂದಷ್ಟೇ ಹೊಸ ಮನೆಗೆ ತೆರಳಿ, ರಾಜಕೀಯದ ತಲೆಬಿಸಿಯನ್ನೆಲ್ಲ ಮರೆತು ಕೆಲಕಾಲ ವೈಯಕ್ತಿಕ ಬದುಕಿನತ್ತ ಗಮನ ಹರಿಸಬೇಕು ಎಂದುಕೊಂಡಿದ್ದರು ಸುಷ್ಮಾ! ಪತ್ನಿ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಾಗ ಎಲ್ಲರಿಗಿಂತ ಖುಷಿ ಪಟ್ಟಿದ್ದು ಸ್ವರಾಜ್! "ನನಗೀಗ 19 ವರ್ಷವಲ್ಲ, ನಿನ್ನ ಹಿಂದೆ 46 ವರ್ಷಗಳಿಂದ ಓಡುತ್ತಿದ್ದೇನೆ. ಇನ್ನಾದರೂ ಈ ಜಂಜಾಟಗಳನ್ನೆಲ್ಲ ಮರೆತು ಹಾಯಾಗಿರೋಣ" ಎಂದು ಸ್ವರಾಜ್ ಸುಷ್ಮಾ ಅವರಿಗೆ ಸಂದೇಶ ಕಳಿಸಿದ್ದರು.

ಸಾವಿನ ಕೊನೆಯ ಕ್ಷಣದಲ್ಲೂ ವೃತ್ತಿಪರತೆ ಮೆರೆದ ಸುಷ್ಮಾ ಸ್ವರಾಜ್

ಆದರೆ ವಿಧಿ ಬೇರೆ ಇತ್ತು. ಇಷ್ಟು ಕಾಲ ಆರೋಗ್ಯವನ್ನೂ ನಿರ್ಲಕ್ಷ್ಯಿಸಿ ನಿರಂತರವಾಗಿ ದೇಶಸೇವೆ ಮಾಡಿದ, ದಣಿವರಿಯದೆ ಕೆಲಸ ಮಾಡಿದ ಸುಷ್ಮಾ ಸ್ವರಾಜ್ ಆಗಸ್ಟ್ 6 ರಂದು ಸಂಜೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ಸುಷ್ಮಾ ಅವರ ಎಂದೂ ಮಾಸದ ನಗು, ವಾತ್ಸಲ್ಯ, ಪ್ರೀತಿಯಿಂದ ತುಂಬಿ ತುಳುಕುತ್ತಿದ್ದ ಮನೆಯಲ್ಲೀಗ ಮೌನದ್ದೇ ಕಾರುಬಾರು... ಜೊತೆಗೆ ಗೋಡೆಯ ಮೇಲೆ ಮಾಲೆಯೆ ಹಿಂದಿರುವ ಚಿತ್ರದಲ್ಲಿ ಮಾತೃಪ್ರೀತಿ ಸ್ಪುರಿಸುವ ಅದೇ ನಗು...

English summary
This is time to remember Sushma and Swaraj's love story
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X