ಸುಷ್ಮಾ ಸ್ವರಾಜ್ ನಿಧನಕ್ಕೆ ವಿಶ್ವಸಂಸ್ಥೆಯ 51 ದೇಶಗಳಿಂದ ಸಂತಾಪ

ನವದೆಹಲಿ, ಆಗಸ್ಟ್ 10: ಮಂಗಳವಾರ ನಿಧನರಾದ ಬಿಜೆಪಿಯ ಹಿರಿಯ ನಾಯಕಿ ಮತ್ತು ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಅಗಲುವಿಕೆಗೆ 51 ದೇಶಗಳ ರಾಜತಾಂತ್ರಿಕರು ಪ್ರತ್ಯೇಕ ಶೋಕ ಸಂದೇಶವನ್ನು ನೀಡಿವೆ.

ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಯೋಜನೆ ವಿಭಾಗದ ಪುಸ್ತಕದಲ್ಲಿ ವಿವಿಧ ದೇಶಗಳ ರಾಜತಾಂತ್ರಿಕರು ತಮ್ಮ ಸಂದೇಶಗಳನ್ನು ಬರೆದಿದ್ದಾರೆ.

'ಮೇಡಂ ಸುಷ್ಮಾ ಸ್ವರಾಜ್ ಅವರ ದುಃಖದಾಯಕ ನಿಧನಕ್ಕೆ ಜಗತ್ತಿನೆಲ್ಲಡೆಯ ದೇಶಗಳ ರಾಜತಾಂತ್ರಿಕರು ತಮ್ಮ ಸಂತಾಪವನ್ನು ಹಂಚಿಕೊಂಡಿದ್ದಾರೆ. ರಾಜತಾಂತ್ರಿಕತೆಯಲ್ಲಿ ಪದಗಳು ಮುಖ್ಯವಾಗುತ್ತದೆ' ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ಮತ್ತು ರಾಯಭಾರಿ ಸಯ್ಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದಾರೆ.

Diplomats Of 51 Countries Condolence Messages For Sushma Swaraj

ಸುಷ್ಮಾ ಸ್ವರಾಜ್ ಮತ್ತು ಅವರ ಕುಟುಂಬಕ್ಕೆ 51 ದೇಶಗಳ ರಾಯಭಾರಿಗಳು ಸಂದೇಶ ಬರೆಯುವ 2.20 ನಿಮಿಷಗಳ ವಿಡಿಯೋವನ್ನು ಕೂಡ ಅವರು ಹಂಚಿಕೊಂಡಿದ್ದಾರೆ.

ರಷ್ಯಾ, ಜರ್ಮನಿ, ಕೆನಡಾ, ಆಸ್ಟ್ರೇಲಿಯಾ, ಇಟಲಿ, ಸ್ವಿಟ್ಜರ್ಲೆಂಡ್, ಅರ್ಜೆಂಟೀನಾ, ಬಾಂಗ್ಲಾದೇಶ, ಭೂತಾನ್, ನ್ಯೂಜಿಲ್ಯಾಂಡ್, ದಕ್ಷಿಣ ಕೊರಿಯಾ, ಬ್ರೆಜಿಲ್, ಸಿಂಗಪುರ, ಶ್ರೀಲಂಕಾ, ಮಯನ್ಮಾರ್, ಅಫ್ಘಾನಿಸ್ತಾನ್, ಮಾಲ್ಡೀವ್ಸ್, ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳ ರಾಜತಾಂತ್ರಿಕರು ಸುಷ್ಮಾ ಅವರ ಒಡನಾಟವನ್ನು ನೆನಪಿಸಿಕೊಂಡು ದುಃಖ ಹಂಚಿಕೊಂಡಿದ್ದಾರೆ.

ಶುಕ್ರವಾರ ನಡೆದ ಸುಷ್ಮಾ ಸ್ವರಾಜ್ ಅವರ ಧಾರ್ಮಿಕ ಕ್ರಿಯಾ ವಿಧಿ ಸಂದರ್ಭದಲ್ಲಿ ಭಾಗವಹಿಸಿದ್ದ ಗಣ್ಯರು ಭಾವುಕರಾದರು. ಅವರ ಮಗಳು ಬಾನ್ಸುರಿ ಸ್ವರಾಜ್, ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಕಣ್ಣೀರಿಟ್ಟರು. ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಗಳು ನಮಿತಾ ಭಟ್ಟಾಚಾರ್ಯ, ಬಾಲಿವುಡ್ ನಟಿ ಶಬಾನಾ ಅಜ್ಮಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+